ಪುಟ:ವೈಶಾಖ.pdf/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

୭୫୭ ವೈಶಾಖ ಯಜಮಾನರೆಲ್ಲರಿಗೂ ಜಾಪಾಳದ ಮಾತ್ರೆ ಕೊಟ್ಟ. ಈ ಮಾತು ಕೇಳಿ, ಅಲ್ಲಿ ನೆರೆದ ಎಲ್ಲ ಯಜಮಾನರಿಗೂ ಬಾಯಿ ಒಣಗುತ್ತ ಬಂದಿತು. ಅವರೆಲ್ಲರೂ ಒಂದು ಕಡೆ ಪ್ರತ್ಯೇಕವಾಗಿ ಸೇರಿ ಪರಸ್ಪರ ವಿಚಾರ ವಿನಿಯಮಯ ಮಾಡಿಕೊಳ್ಳುತ್ತಿದ್ದರು. ಲಕ್ಕನಿಗೆ ಮುಸ್ಟಾನ್ನ ಉಂಡಷ್ಟು ಸಂತೋಸ ಆಗಿತ್ತು... ಈ ಯಜಮಾನ್ನು ನಮ್ಮೂರಲ್ಲಿ 'ಮಾತುಭಾರಿ' ಮನುಸು ಅಂತ ಎಲ್ಲಾರ ಬಾಯಲ್ಲೂವೆ ಉಳ್ಳಾಡ್ತಾರೆ!ಇಂಡೋರ ಈವಯ್ಯ ಎಂತೆಂತ ಪೈಲ್ವಾನ್ ವರಸೆ ಆಕಿ ಬೆಪ್ಪುಗೂಡಿಬುಟ್ಟ!ಹೀಗೆಂದು ಆ ಇನ್‌ಸೆಕ್ಟರ್ ವಿಷಯವಾಗಿ ಲಕ್ಕನಿಗೆ ಬಹಳ ಹೆಮ್ಮೆಯೆನಿಸಿತು. ಮಂಕು ಬಡಿದವರ ಹಾಗೆ ಇನ್ನೂ ಜಗಲಿ ಮುಂದುಗಡೆಯೇ ನಿಂತಿದ್ದ ಶ್ಯಾನುಭೋಗ ಸೀತಾರಾಮ್ಯನವರನ್ನು ಕೇಳಿದ: “ಸೋಮಿ, ಇವರು ಯಾವ ಜಾತಿ?” ಶ್ಯಾನುಭೋಗರು ಪಿಸುಮಾತಿನಲ್ಲೆ ಖಾರ ತುಂಬಿ, “ಅಯ್ಯೋ, ನಿಮ್ಮ ಜಾತಿಗೂ ಕೀಳು ಕಣೋ-ಎಡಗೈ!”- ಎಂದರು ತಿರಸ್ಕಾರವಾಗಿ, ಅವರಿಗೆ, ಬುದ್ದಿವಂತ ಬ್ರಾಹ್ಮಣನಾದ ತಾನು ಈ ಅತ್ಯಂತ ಕೀಳು ಜಾತಿಯ ಯಃಕಶ್ಚಿತನಿಂದ ಈ ದಿನ ಊರಿನ ಪ್ರಮುಖರ ಮುಂದೆ, ಅದೂ ನಡುಬೀದಿಯಲ್ಲಿ, ಮಾತುಮಾತಿಗೂ 'ಚಿತ್” ಅದೆನಲ್ಲ ಎಂಬ ಕೊರಗು ಒಳಗೊಳಗೆ ಜ್ವಾಲಾಮುಖಿಯಾಗಿ ಹೊಗೆಯಾಡುತ್ತಿತ್ತು. ಲಕ್ಕನಿಗೆ ಇನ್‌ಸ್ಪೆಕ್ಟರ್‌ ಗೂಳಪ್ಪನ ಬಗ್ಗೆ ಇನ್ನೂ ತಾರೀಸು ಹೆಚ್ಚಿತು. ನಮ್ಮೊನೊಬ್ಬ ಅದೇಟು ಚೆಂದಾಗಿ ನ್ಯಾಯ ಅಡ್ಡ... ಈ ಸಾಸ್ತಪುರಾಣ ಓದ್ದ ನಮ್ಮೂರ ಗಟಾನುಗಟಿಗಳ ಅದೇಟು ಸಲೀಸಾಗಿ ಮಾತ್ನಲ್ಲಿ ಸೋಲಿಸಿದ್ದ... ಬೇಸ್, ಬೇಸ್- ಲಕ್ಕನಿಗೆ ಎದೆಯುಬ್ಬಿ ಬಂತು. ಅವರನ್ನು ಮಾತಾಡಿಸಲೇಬೇಕೆಂದು ಮನಸ್ಸಾಯಿತು. ಮೋಟಾರ್ ಸೈಕಲ್ ಹಿಡಿದು ಏರಲು ಸಿದ್ಧನಾಗಿ ನಿಂತಿದ್ದ ಗೂಳಪ್ಪನ ಮುಂದೆ ಹೋಗಿ ಕೈ ಜೋಡಿಸಿ ನಿಂತ “ಕೈಮುಗುದೆ. ಸೋಮಿಎಂದ ಅತ್ಯಂತ ವಿನಯದಿಂದ. “ಇವನು ಯಾರು?” - ಸಬ್‌ಇನ್‌ಸೆಕ್ಸರ್‌ ಗೂಳಪ್ಪ ನಿರ್ಭಾವದಿಂದ ಕೇಳಿದರು. ಅಷ್ಟರ ಮಾತು ಮುಗಿಸಿ ಇತರ ಯಜಮಾನರ ಜೊತೆಯಲ್ಲಿ ಅಲ್ಲಿಗೆ ಬಂದಿದ ನಂಜೇಗೌಡ, “ಇವನು-ಹೊಲೇರ ಲಕ್ಕ, ಇವರ ದೊಡ್ಡಪ್ಪನೆ ನಮ್ಮೂರ ಕುಳವಾಡಿ. ಅವಸ್ಥೆ ಹುಸಾರು ತೆಪ್ಪಿ, ಅವ್ರ ಬದ್ಲಾಗಿ ಇವನ್ನ ಕಳುಸನ್ನೆ” ಎಂದು ಪರಿಚಯಿಸಿದ.