ಪುಟ:ವೈಶಾಖ.pdf/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೪೩ ಒಡನೆಯೆ ಲಕ್ಕ, “ತಾವು ತಮ್ಮ ಹೊಗೇರಿ ಕಡೀಕು ವಸಿ ದಯಮನಾಡಿಸಬೇಕು, ಸೊಮಿ” ಎಂದು ಪುನಃ ಕೈ ಜೋಡಿಸುತ್ತ ಬೇಡಿದ. ಅದಕ್ಕುತ್ತರವಾಗಿ ಗೂಳಪ್ಪ, “ನೀವು ಹೋಲಗೇರಿ ಜನ ಇನ್ನೂ ಬಲು ಕೊಳಕಾಗೇ ಇದ್ದೀರಿ... ಅಲ್ಲಿಗೆ ಬರಬೇಕಾದ್ರೆ ಮೂಗು ಮುಚ್ಚೇ ಬರಬೇಕು” ಅದೋನು, ನಂಜೇಗೌಡನ ಕಡೆ ತಿರುಗಿ “ಎರಡು ವರ್ಷದ ಕೆಲಸ ಏನಾಯ್ತು ಅಂತೀರಿ, ಗೌಡರೆ... ತುಮಕೂರಿನ ಕಡೆಗೆ ನನ್ನ ಪೋಸ್ಟ್ ಮಾಡಿದ್ರು. ಆಗ ಆ ಸುತ್ತಿನ ಒಂದು ಹಳ್ಳಿ ಹೊಲಗೇರಿಗೆ, ಒಂದು ಪೆಟ್ಟಿ ಕೇಸನ್ನು ಪರಿಶೀಲಿಸೊದಕ್ಕೆ ನಾನು ಹೋಗಬೇಕಾಗಿ ಬಂತು. ನನ್ನ ಮರು ವರ್ಷದ ಮಗಳೂ ನನ್ನ ಜೊತೆಗೇ ಬರ್ತೀನಿ ಅಂತ ಜೋತು ಬಿದ್ದಳು. ನಿರ್ವಾಹವಿಲ್ಲದೆ, ಅವಳನ್ನೂ ಜೊತೆಯಲ್ಲಿ ಕರೆದುಕೊಂಡು ಹೋದೆ. ಅಲ್ಲಿ ನಾನೊಂದು ಕಡೆ ತಪಾಸಣೆ ಮಾಡ್ತಾ ಇದ್ದೆ. ಆಗ ನಮ್ಮ ಹುಡುಗಿಗೆ ಬಾಯಾರಿಕೆ ಆಯ್ತಂತೆ. ಯಾರೊ ಎತ್ತಿಕೊಂಡೋಗಿ ತಮ್ಮ ಜೋಪಡಿ ಮಡಿಕೆ ನೀರನ್ನ ಕುಡಿಸಿಬಿಟ್ಟರಂತೆ!... ಸರಿ, ನಮ್ಮ ಮನೆಗೆ ಹಿಂದಿರುಗಿದ ಮಾರನೆ ದಿನವೆ ಮಗೂಗೆ ನೂರಾಮೂರು ಡಿಗ್ರಿ ಜ್ವರ ಕಾಯಕ್ಕೆ ಆರಂಭವಾಯ್ತು, ಜ್ವರ ಮೂರು ದಿನ ಕಾಯೋದರಲ್ಲಿ ಆ ಜ್ವರದ ತಾಪಕ್ಕೆ ಅವಳ ಜ್ಞಾನ ತಪ್ಪಿದಹಾಗಾಗಿ, “ನನ್ನ ಯಾರೂ ಕರೀತಾ ಅವೆ- ಕರೀ ಬಟ್ಟೆ ಹಾಕ್ಕೊಂಡು ಬಂದು ನಿಂತವೆ, ನಾ ಹೋಯ್ತಿನಿ...'- ಹೀಗೆಲ್ಲ ಏನೇನೊ ಬಡಬಡಿಸಕ್ಕೆ ಸುರುಮಾಡಿದ್ದು ನನ್ನ ಹೆಂಡತಿ, 'ಅಂತಾ ಕೊಳಕು ಜಾಗಕ್ಕೆಲ್ಲ ಕೂಸನ್ನ ಯಾಕೆ ಕರೆಕೊಂಡೋಗಿದ್ರಿ?' ಅಂತ ಆಕ್ಷೇಪಣೆ ಮಾಡ, ಗೋಳೋ ಅಂದಳು. ನನಗೂ ಎಂಥ ತಪ್ಪು ಮಾಡಿದೆ ಅನ್ನಿಸಿ, ಕೂಸು ಬದುಕ್ತದೊ ಇಲ್ಲವೊ ಅಂತ ದಿಗಿಲಾಯಿತು. ಸದ್ಯಕ್ಕೆ ಅಲ್ಲಿ ಒಬ್ಬರು ಒಳ್ಳೆ ಡಾಕ್ಟರಿದ್ದರು. ಲಿಂಗಾಯಿತರು, ಅಯ್ಯೋ ಯಾವ ಜಾತಿ ಆದರೇನು?- ಒಟ್ಟಿನಲ್ಲಿ ಆ ಪುಣ್ಯಾತ್ಮ ಹಗಲೂ ರಾತ್ರಿ ಕಣೇಲೆ ಕಣ್ಣಿಟ್ಟು, ಇಲಾಜು ಮಾಡಿದರು. ಸದ್ಯ, ಕೂಸು ಬದುಕ್ಕೊಂಡು...”- ಹೀಗೆ ಒಂದು ಪುರಾಣಾನೆ ಬಿಚ್ಚಿ ಹೇಳಿದ. ಆ ಮಾತು ಕೇಳಿ ಲಕ್ಕ ನಾಚಿ ಒಂದು ಹಿಡಿಯಾದ, ಯಾಕಾರು ಈವಯ್ಯ ನಮೋನೂಂತ ನಮ್ಮ ಹೋಲಗೇರಿಗೆ ಕರೆಯಕ್ಕೊದೆ?- ಒಳಗೆ ಕೊರಗಿ ಕೊರಗಿ ಕಡ್ಡಿಯಾಗುತ್ತಿದ್ದ. ನಂಜೇಗೌಡ ಗೂಳಪ್ಪನ ಮಾತುಗಳನ್ನು ಸಂಪೂರ್ಣವಾಗಿ