ಪುಟ:ವೈಶಾಖ.pdf/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೪೫ ಎರಡು ತಿಂಗಳು ಕಳೆಯುತ್ತಿದ್ದಂತೆ ರುಕ್ಕಿಣಿಗೆ ಭಯ ಕಾಣಿಸಿಕೊಂಡಿತು. ತಿಂಗಳಿಗೆ ಸರಿಯಾಗಿ ಅವಳು 'ಹೊರಗೆ' ಕೂರಬೇಕು. ಈ ಎರಡು ತಿಂಗಳು ಉರುಳಿದರೂ ಮುಟ್ಟಾಗುವ ಯಾವ ಚಿಹ್ನೆಯೂ ಕಾಣುತ್ತಿಲ್ಲ. ಭೀಮನಳ್ಳಿಯಲ್ಲೆ ಅವಳಿಗೆ ಶಂಕೆ ಸೂಕ್ಷವಾಗಿ ತಲೆದೋರಿತ್ತು. ಅಲ್ಲಿಂದ ಬಂದೊಡನೆಯೆ ಪರಂಗಿಹಣ್ಣು, ಬೆಲ್ಲ ಇತ್ಯಾದಿ ಉಷ್ಣ ಪದಾರ್ಥಗಳನ್ನು ಯಥೇಚ್ಛವಾಗಿ ಉಪಯೋಗಿಸಿದ್ದಳು. ಗರ್ಭ ನಿಂತರೆ ಆ ಪದಾರ್ಥಗಳ ಬಳಕೆಯಿಂದ ಅದು ಒಡೆದು ಹೋಗುವುದೆಂದು ಜನ ಮಾತನಾಡುವುದನ್ನು ಅವಳು ಕೇಳಿದ್ದಳು. ಆದರೆ ಅವಳ ದುರದೃಷ್ಟದಿಂದ ರಕ್ತಸ್ರಾವದ ಯಾವ ಸೂಚನೆಯೂ ಕಂಡುಬರಲಿಲ್ಲ. ಈಗಲೀಗ ರುಕ್ಕಿಣಿಗೆ ತುಂಬ ದಿಗಿಲಾಯಿತು... ಈಗೇನು ಮಾಡುವುದು?... ಅನಪೇಕ್ಷಿತ ಗರ್ಭವನ್ನು ಹೇಗೆ ಕಳೆದುಕೊಳ್ಳುವುದು?...ಯಾರ ಸಂಗಡ ಹೇಳಿಕೊಳ್ಳಲಿ?... ಈ ಸಂದಗ್ನದಿಂದ ನನ್ನನ್ನು ಯಾರು ಪಾರುಮಾಡಬಲ್ಲರು?... ಮಾವನವರಿಗೇ ಹೇಳಿಕೊಳ್ಳಲೆ?... ಛೇ, ಛೇ. ಆಚಾರನಿಷ್ಠರಾದ ಅವರು ಗರ್ಭಪಾತಕ್ಕೆ ಒಪ್ಪಿಯಾರೆ?... ಅದು ಸಾಧ್ಯವಾಗದ ಮಾತು!... ಲಕ್ಷ ಮನೋರು?- ಆಯಿತು. ಅವರ ಹತ್ತಿರ ಯಾವ ಗುಟ್ಟು ಉಳಿಯುತ್ತೆ?... ಪುರೋಹಿತ ವೆಂಕಣ್ಣ ಜೋಯಿಸರ ಹೆಣ್ಣುಮಕ್ಕಳಿಗೆ ತುಂಬಾ ಸಂಭಾವಿತ ಗುಣ. ಅದರಲ್ಲೂ ಅವರ ಹಿರಿಯ ಮಗಳು ನಾಗಲಕ್ಷ್ಮಿ ವಯಸ್ಸಿನಲ್ಲಿ, ಅವರ ಇನ್ನಿಬ್ಬರು ಹೆಣ್ಣುಮಕ್ಕಳು, ವಸಂತ ಮತ್ತು ಶಾಂತಿಯನ್ನರಿಗಿನ್ನ ದೊಡ್ಡವಳು. ನಂಬಿಕೆಗೆ ಅರ್ಹಳು. ಆದರೆ ಅವಳಿಗೆ ಹೇಳಿಕೊಂಡರೆ, ಪಾಪ ಆ ಮುಗ್ಗೆ ಯಾರಿಂದ ಈ ಕಾರ್ಯ ಮಾಡಿಸಲು ಶಕ್ತಳು?- ಇನ್ನೂ ವಿವಾಹವಾಗದಿರುವ ಹೆಣ್ಣು. ಅವಳು ಬೇರೆಯವರೊಡನೆ ಇಂಥ ವಿಷಯವನ್ನು ಪ್ರಸ್ತಾಪ ಮಾಡಲು ಹೆದರುವುದಿಲ್ಲವೆ?... ಬುಂಡಮ್ಮ?- ಅವಳು ಒಳ್ಳೆಯ ಸ್ವಭಾವದವಳಾದರೂ ಹಳೆಯಕಾಲದವಳು, ಸಂಪ್ರದಾಯಬದ್ದಳು. ಭ್ರೂಣಹತ್ಯೆಗೆ ಅವಳೆಂದು ಒಪ್ಪಲಾರಳು. ಹಿಂದೊಮ್ಮೆ, ಶ್ಯಾನುಭೋಗರ ಮನೆಗೆ ಕಂದಾಯದ ಹಣ ಕಟ್ಟಲು ಬುಂಡಮ್ಮ ಬಂದಿದ್ದಳು. ಆಗ ತಾನೂ ಅಲ್ಲಿಗೆ ಆಗಾಗ ಹೋಗುತ್ತಿದ್ದ ಮಾಮೂಲಿನಂತೆ ಹೋಗಿದ್ದಲು. ಆ ಮಧ್ಯಾಹ್ನ ಶ್ಯಾನುಭೋಗರ ಹೆಂಡತಿಯ ಬಲಾತ್ಕಾರಕ್ಕೆ ಕಟ್ಟಿಬಿದ್ದು ಬುಂಡಮ್ಮ ಒಂದು ಹಾಡನ್ನು ಹಾಡಿದಳು. ಈ ವಯಸ್ಸಿನಲ್ಲೂ ಮುದುಕಿಯದು ಎಂಥ ಕಂಟ?- ಅದು ಹೇಗೂ ಇರಲಿ. ಆಗ ಅವಳು ಹಾಡಿದ ಪದದ ಎಡು ಸಾಲನ್ನು ಈಗ ನೆನಸಿಕೊಳ್ಳಲೂ ಭಯವಾಗುತ್ತದೆ. ಮಾನವ ಕುಲದಾಗೆ ಹತ್ಯೆ ಮಾಡಾರುಂಟ