________________
ಸಮಗ್ರ ಕಾದಂಬರಿಗಳು ೨೫೧ “ಅದರೂನೂವೆ ನಿಮ್ಮ ರುಕ್ಕಿಣಿ ಇಂಥ ಪ್ರಪಾತಕ್ಕೆ ಬೀಳ್ತಾಳೆ ಎಂದು ನಾವು ಯಾರೂ ನಿರೀಕ್ಷಿಸಿಯೇ ಇರಲಿಲ್ಲ...” ಈಗಲೀಗ ಶಾಸ್ತಿಗಳಿಗೆ ಸಂದೇಹ ಉಳಿಯಲಿಲ್ಲ. ತಮ್ಮ ಮತ್ತು ರುಕ್ಕಿಣಿಯ ಸಂಬಂಧ ಈತನಿಗೆ ಹೇಗೋ ತಿಳಿದುಹೋಗಿದೆ... ಹೇಗೆ ತಿಳಿದಿರಬಹುದು?- ಇವರ ಹಿರಿಯ ಮಗಳು ನಾಗಲಕ್ಷ್ಮಿಯನ್ನು ರುಕ್ಕಿಣಿ ಪ್ರೀತಿಸ್ತಾಳೆ. ಯಾವುದೊ ದುರ್ಬಲ ಗಳಿಗೆಯಲ್ಲಿ ತಮ್ಮ ಸಂಬಂಧದ ಬಗ್ಗೆ ಹೇಳಿರಬಹುದುಎ?... ಛೇ, ಛೇ ಇರಲಾರದು. ರುಕ್ಕಿಣಿ ತನ್ನ ಮಾನವನ್ನು ಎಂದಿಗೂ ಬೀದಿಗೆ ಹಾಕುವವಳಲ್ಲ. ಮತ್ತೆ?- ಜೋಯಿಸರಿಗೆ ತಿಳಿಸಿರುವ ಬಗೆ?... ಕೃಷ್ಣಶಾಸ್ತ್ರಿಗಳ ಚಿತ್ತ ಗೋಜಲುಗೋಜಲಾಯಿತು. ಜೋಯಿಸರು ಇನ್ನೇನು ತಮ್ಮ ಮೇಲೆ ಉಡಾಯಿಸಲಿದ್ದ ಗುಂಡಿನ ನಿರೀಕ್ಷಣೆಯಲ್ಲಿ ಜರ್ಝರಿತರಾಗಿ ತಲೆತಗ್ಗಿಸಿ ಕುಳಿತರು. ಇನ್ನೂ ಎರಡು ಮೂರು ಎಲೆಗಳಿಗೆ ಸುಣ್ಣವನ್ನು ಹಚ್ಚುತ್ತ, ವೆಂಕಣ್ಣ ಜೋಯಿಸರು “ಇಡೀ ನಮ್ಮ ಬ್ರಾಹ್ಮಾಣ ಕುಕ್ಕೇ ಅವಮಾನ. ಎಲ್ಲ ಬಿಟ್ಟು ಆ ಹೊಲೆಯ ಲಕ್ಕನ ಸಂಬಂಧ ಬೆಳೆಸಿ ಗರ್ಭಿಣಿಯಾಗಿದ್ದಾಲಲ್ಲ. ಇದಕ್ಕಿನ್ನ ಹೇಯವಾದ ಕೃತ್ಯ ಇನ್ನೊಂದಿದೆಯೆ?... ನೀವು-ನಾವೆಲ್ಲರೂ ಹೇಳಿದಾಗಲೇ ಅವಳ ತಲೆ ಬೋಳಿಸಿ ವಿರೂಪಗೊಳಿಸಿದ್ದರೆ, ನಮ್ಮ ಬ್ರಾಹ್ಮಣ ಸಮಾಜ ಈಗ ಇಂಥ ವಿಕೃತ ಪರಿಸ್ಥಿತಿಯನ್ನು ಎದರುಸಬೇಕಾಗಿತ್ತೆ?... ಯಾವಾಗಲೂ ನಿಮ್ಮದು ಹಟ. ನಿಮ್ಮ ಹಟಮಾರಿತನದಿಂದಲೆ ಈ ಘೋರ ಅನರ್ಥ ಸಂಭವಿಸಿದೆ.” ವೆಂಕಣ್ಣ ಜೋಯಿಸರ ಆಪಾದನೆಯನ್ನು ಕೃಷ್ಣಶಾಸ್ತ್ರಿಗಳು ವಿಸ್ಮಿತರಾಗಿ ಆಲಿಸಿದರು... ರುಕ್ಕಿಣಿಗೆ ವಿಶ್ವೇಶ್ವರ ಮೃತನಾದ ತತ್ಕಾಲದಲ್ಲಿ ಕೇಶಮುಂಡನ ಮಾಡಿಸಬೇಕಾಗಿತ್ತು ಎಂಬ ವೆಂಕಣ್ಣ ಜೋಯಿಸರ ಅಭಿಪ್ರಾಯವನ್ನು ಈಗ ಅವರು ಸಂಪೂರ್ಣವಾಗಿ ಒಪ್ಪುವಂತಾಗಿದೆ- ನಿಜ, ಅವಳು ವಿರೂಪಗೊಂಡಿದ್ದರೆ ಈ ರಂಪವೆಲ್ಲ ನಡೆಯುತ್ತಿರಲಿಲ್ಲವೇನೊ!... ಸರಿಯೆ. ಇದೇನು ವೆಂಕಣ್ಣ ಜೋಯಿಸರು ಹೇಳುತ್ತಿರುವುದು?- ಲಕ್ಕನಿಂದ ರುಕ್ಕಿಣಿ ಗರ್ಭಿಣಿಯಾಗಿದ್ದೇಳೆ ಎನ್ನುವ ಮಾತು!... ಇದನ್ನು ಒಪ್ಪಬಹುದೆ?... ಛೇ, ಇದು ಶುದ್ಧಾಂಗ ಸುಳ್ಳು - ತನ್ನಿಂದಲೆ ಆಕೆ ಬಸಿರಾಗಿರುವುದು. ಅದರಲ್ಲಿ ಯಾವ ಸಂಶವೂ ಇಲ್ಲ. ತನ್ನ ಹೆಸರನ್ನುಳಿಸಲು ರುಕ್ಕಿಣಿ, ಲಕ್ಕ ಇಬ್ಬರೂ ಪರಸ್ಪರ ಮಾತಾಡಿಕೊಂಡು ಈ ಕಥೆಯನ್ನು ಕಟ್ಟಿರಬೇಕು!- ಲಕ್ಕ ರುಕ್ಕಿಣಿಯನ್ನು ತಾಯಿಯ ಹಾಗೆ ಭಯ