________________
೨೫೨ ವೈಶಾಖ ಭಕ್ತಿಗಳಿಂದ ಗೌರವಿಸುತ್ತಾನೆ. ರುಕ್ಕಿಣಿಯೂ ಸಹ ಲಕ್ಕನನ್ನು ತನ್ನ ಸ್ವಂತ ಮಗನಂತೆಯೇ ವಾತ್ಸಲ್ಯದಿಂದ ಆದರಿಸುತ್ತಾಳೆ... ಆದರೆ, ಅವರಿಬ್ಬರೂ ನನಗೋಸ್ಕರ, ತನ್ನ ಮಾನವನ್ನು ಕಾಪಾಡುವುದಕ್ಕೋಸ್ಕರ ಸೃಷ್ಟಿಸಿದ ಕಟ್ಟುಕಥೆ ಈಗ ದರುಮನಳ್ಳಿಯ ವಿಸ್ತಾರಕ್ಕೆ ವ್ಯಾಪಕವಾಗಿ ಹರಡಿರುವಂತಿದೆ. ಇದು ಸುಳ್ಳು ಎಂದು ಸಾಧಿಸಹೊರಟರೆ, ಲೋಕ ತನ್ನ ಮಾತನ್ನು ನಂಬುತ್ತದೆಯೆ?... ಹೀಗೆ ಆಲೋಚನೆ ಹರಿದಿರುವಾಗ, ಶಾಸ್ತ್ರಿಗಳು ಆಂತರ್ಯದಲ್ಲಿ ತಟ್ಟನೆ ಚಕಿತಗೊಂಡರು... ರುಕ್ಕಿಣಿ ಭೀಮನಳ್ಳಿಯಿಂದ ಬಂದು ಸುಮಾರು ಒಂದೂವರೆ ತಿಂಗಳಾದರೂ ಅವಳು ಬಹಿಷ್ಠೆಯಾಗಿ ಹೊರಗೆ ಕೂರದಿದ್ದುದು ತನ್ನ ಬುದ್ದಿಗೆ ಏಕೆ ಹೊಳೆಯಲಿಲ್ಲ?... ತಾನು ಮಾಡಿದ ಪಾಪಕ್ಕೆ ದೇಹ ದಂಡಿಸಿ, ಜಪತಾಪದಿಗಳಲ್ಲಿ ಮುಳುಗಿ, ಬಾಹ್ಯ ಜಗತ್ತಿನ ಆಗುಹೋಗುಗಳಿಗೆ ತಾನು ಕುರುಡಾಗಿದ್ದೆ ಇದಕ್ಕೆ ಕಾರಣ ಎಂದುಕೊಂಡರು.. ತಕ್ಷಣವೆ ಎಂಥ ಅಪರಾಧ ಮಾಡಿಬಿಟ್ಟೆ ಎಂದು ಒಳಗೊಳಗೇ ಕುದಿಯಲಾರಂಭಿಸಿದರು... “ಅಷ್ಟೆ ಶಾಸ್ತಿಗಳೆ, ವಿಷಯವನ್ನು ನಿಮಗೆ ತಿಳಿಸೋಣ ಎಂದು ಕರೆಸಿದೆ” ಎಂದು ವೆಂಕಣ್ಣಜೋಯಿಸರು ತಟ್ಟೆಯಲ್ಲಿ ವೀಳೆಯದೆಲೆಯನ್ನು ಮುಗಿಸಿ ಮೇಲೆದ್ದರು. ಶಾಸ್ತಿಗಳು ಇದೇ ಚಿಂತೆಯಲ್ಲಿ ವೆಂಕಣ್ಣ ಜೋಯಿಸರ ಮನೆಯಿಂದ ಹೊರಟು ತಮ್ಮ ಮನೆಯ ಜಗುಲಿಯನ್ನೇರಿ ಕುಳಿತರು. ಆಗ ವಿಧವೆ ಲಕ್ಷಮ್ಮ ಅಲ್ಲಿಗೆ ಬಂದು, “ಎಚ್ಚರ, ಕಿಟ್ಟಣ್ಣ. ಆಗಬಾರದ್ದು ಆಗಿಹೋಗಿದೆ. ಈಗ ಬಸಿರು ಕಳೆಯೋ ಔಷಧಿ ತರಲು ಲಕ್ಕನ್ನ ಹುಣಸೂರಿಗೆ ಓಡಿಸಿದ್ದಾಳೆ ನಿಮ್ಮ ರುಕ್ಕಿಣಿ!... ಈ ಗಳಿಗೆಯಿಂದ ಆ ಹೋಲೆಯ ನಿಮ್ಮ ಹಟ್ಟಿಯ ಬಾಗಿಲ ಕಡೆ ಸುಳಿಯದೇ ಇರುವ ಹಾಗೆ ನೀವು ಮುತುವರ್ಜಿ ವಹಿಸಬೇಕು. ಇಲ್ಲದೇ ಹೋದರೆ, ಅವಳ ತಲೆಯನ್ನು ಹಿಂದೆಯೇ ಬೋಳಿಸದೆ ನೀವು ಮಾಡಿದ ಒಂದು ತಪಿನ ಜೊತೆಗೆ ಅದಕ್ಕಿನ್ನ ಘನಘೋರವಾದ ತಪ್ಪನ್ನು ಮಾಡಿದ ಹಾಗಾಗುತ್ತೆ... ಹೊಟ್ಟೆಯ ಒಳಗಿರುವ ಪಿಂಡವನ್ನು ನಾಶ ಮಾಡೋದೂ ಒಂದೆ, ಒಬ್ಬ ಜೀವಂತ ವ್ಯಕ್ತಿಯನ್ನ ಕೊಲೆ ಮಾಡೋದು ಒಂದೆ?... ಸಾರಿ ಸಾರಿ ಹೇಳ್ತಾ ಇದೀನಿ. ನನ್ನ ಮಾತು ತೆಗೆದುಹಾಕಬೇಡಿ. ಸೊಸೆ ಎಂದು ಮೊದಲು ವಹಿಸಿಕೊಂಡ ಹಾಗೆ ಈಗಲೂ ವಹಿಸಿಕೊಳ್ಳಲಿಕ್ಕೆ ಹೋದೀರಿ, ಜೋಕೆ” ಎಂದು ಎಚ್ಚರಿಕೆ ಕೊಟ್ಟು ಹೋದಳು. ದೊಡ್ಡ ಗಂಟಲು ಮಾಡಿ ಹೀಗೆ ಲಕ್ಷಮ್ಮ ಒದರಿದ ಮಾತುಗಳು