ಪುಟ:ವೈಶಾಖ.pdf/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೫೫ ಹೈಕಳು ಕುಂತು ನಿಂತು ಒಂಟು ಒಡಯೊ ಆಟ ಆಡ್ತಿದ್ದೂ: ಅಡಿಕೆ ಆಯನಾರಿ, ಚಾಪೆ ಮೊಡಸನಾರಿ-ಅದೇನ ಹೇಳಿ, ಅಂತು ಒಂದು ಹೈದ. ಉಳಿಕೆ ಹೈಕಳು ಯೋಚ್ಛೆ ಮಾಡ್ತ ಕುಂತೆ. ಒಂಟ ಒಡೆಯಕ್ಕಾಗನಿಲ್ಲ. ಹಯ್ಯೋ, ಪೆದ್ದುಗಳೆ, ಅಡಿಕೆ ಆಂದ್ರೆ ಚುಕ್ಕಿ; ಚಾಪೆ ಅಂದ್ರೆ ಆಕಾಸಚುಕ್ಕಿ ಆಯಕ್ಕಾದಾತ? ಆಕಾಸ ಮೊಡಿಸಕ್ಕಾದಾತ? ಕತ್ತಲೆ ಮನೇಲಿ ಮುದುಕಿ ಕುಯ್ದವೆ, ಈ ಒಂಟಿಗೆ ಅರ್ತ?- ಒಂದು ಎಣ್ಣು ಕೇಳು. ಮುಕ್ಕಾಲುವಾಸಿ ಹೈಕಳು 'ಆಲಸಿನಣ್ಣು-ಅಲಸಿನಣ್ಣು' ಅಂತ ಕೂಗಿದೊ... ಮಕ್ಕಳ ಆಟ ನ್ಯಾಡ್ತಾ ನಿಂತ ಲಕ್ಕಂಗೆ ತನ್ನ ಜವಾಬುದಾರಿ ತಟಕ್ಕನೆ ಗೆಪ್ತಿಯಾಗಿ, ಅಲ್ಲಿಂದ ವೊಂಟ, ಅವ್ರ ಜ್ವತೆಗೆ ಬೊಡ್ಡನೂವೆ ಕುಲುಕ ನಡೀತು. ಇನ್ನೂ ವೋಟು ದೂರ ವೋಗಿಲ್ಲ-ಕೇಶವಯ್ಯಾರು ಸಿಕ್ಕಿದ್ರು. “ಎತ್ತಾಗಿ ಹೊರಟೆಯೊ, ಲಕ್ಕ?” ಅಂದರು. “ಇಂಗೆ ವೊಂಟೆ ಕನ್ನಯ್ಯ...” ತಾನು ವೊಂಟ ಕಾರಣವ ಈವಯ್ಯಂಗೆ ಯೋಳಕ್ಕೆ ಅದೇನ ಜರೂರುಅಂದು ಲಕ್ಕೆ ತಾನು ಹೊಂಟ ಕಾರಣವ ಕೇಶವಯ್ಯಂಗೆ ತಿಳುಸ್ಸಿಲ್ಲ. “ನೀನು ಹೇಳದೆ ಹೋದರೆ, ನನಗೆ ಗೊತಾಗೊಲ್ಗೊ?... ನೀನು ಹೋಗ್ತಾ ಇರೋದು ಆ ಮೂಲೆ ಮನೆ ಕೃಷ್ಣಶಾಸ್ತಿಗಳ ಹಟ್ಟಿಗೆ ಅಲ್ಲವೇಫ್?” ಕೇಳಿದ ಕೇಶವಯ್ಯ, ಯಲೆ, ಈವಯ್ಯಂಗೆ ಅದ್ಯಾವ ಪರೀಲಿ ಸ್ವತ್ತಾಯ್ತು?- ಇಸ್ಮಯಪಡ್ಡ, ಕನ್ನ ಕೋರೀತಿರುವಾಗ ಸಿಕ್ಕಾಕಂಡ ಕಳ್ಳನ ತರ, “ಊಕನ್ನಯ್ಯ” ಅಂದ. “ಅಲ್ಲಿಗೆ ನೀನು ಹೋಗುವ ಹಾಗಿಲ್ಲ.” ಕೇಶವಯ್ಯನ ಅಧಿಕಾರವಾಣಿಯಿಂದ ಲಕ್ಕ ಅಪ್ರತಿಭನಾದ. “ಯಾಕ್ರಯ್ಯ?” “ಕಾಲ ಕಳೆದ ಹಾಗೆ ನಿನಗೇ ಗೊತ್ತಾಗತ್ತೆ. ಈಗ ನಾನು ಹೇಳುವ ಹಾಗೆ ಕೇಳು- ಅವರ ಮನೆಯ ಸಮೀಪ ಸುಳಿಯಬೇಡ” “ಸುಮ್ಮಿರಿ. ಯಾವತ್ತೂ ನಿಮ್ಮದು ನಗಸಾರವೆ.” “ನಗಸಾರವೂ ಇಲ್ಲ, ಪರಸಾರವೂ ಇಲ್ಲ. ಅವರ ಮನೆಗೆ ನೀನು