ಪುಟ:ವೈಶಾಖ.pdf/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೫೭ ಎಂಗೆ?... ಕೇಸವಯ್ಯಾರು ಅದ್ಯಾನೊ ಕಟ್ಟು, ಅಂದಲ್ಲ?... ಒಂದೂವ ಅರ್ತಾನೆ ಆಯ್ತಾ ಇಲ್ಲ... ಲಕ್ಕ ಯತೆಯ ಭಾರದಿಂದ ಜಗ್ಗುತ, ಹೋಲಗೇರಿ ತಲುಪ್ಪ, ಹೊಲಗೇರಿ ಮುಂದ ಬಯಲಲ್ಲಿ ಎಕ್ಕದ ಗಿಡಗಳು ಮಸ್ತಾಗಿ ಬೆಳುದಿದ್ದೂ, ಅಲ್ಲಿ ಎಕ್ಕದ ಕಾಯಿಗಳು ಸಿಡಿದು ಬಾಯಿ ತಕ್ಕಂಡಿದ್ದೂ, ಅವುಗಳ ತುಂಬ ಕಪ್ಪಿನಿ ಸಣ್ಣ ಸಣ್ಣ ಬೀಜಗೋಲು, ಆ ಕಪ್ಪಿನಿ ಬೀಜಗಳ ಮತುಂಬ ಉದ್ದಾನೆ ಕೂದಲುಗಳಂಗೆ ಒತ್ತೊತ್ತಾಗಿ, ದೂಮಾವ ಬಿಳಿ ರೇಸ್ನ ಎಳೆಗೊಳು, ಗಾಳೀಲಿ ಅವು ಒಂದೊಂದಾಗಿ ಹಾರಕ್ಕೆ ಸುರು ಮಾಡಿದ್ರೂ, ಹೋಲಗೇರಿಯ ಹೈಕಳು ಅಮ್ಮ ಉಫ್ ಉಫ್ ಅಂತ ಬಾಯಿಂದ ಉರುಬಿ ಉರುಬಿ ಇನ್ನೂ ಮ್ಯಾಲೆ ಮ್ಯಾಲೆ ಏರಿಸೋ ಆಟ ಆಡ್ತಿದ್ದೊ... ಆ ಹೈಕಳ ಆಟ ನ್ಯಾಡಿದ್ದ ಲಕ್ಕಂಗೆ ಚಿಕ್ಕಂದಲ್ಲಿ ಇಂಗೇಯ ಎಕ್ಕದ ಬೀಜಗಳ ತಾನೂವೆ ಉರುಬಿ ಆಡ್ತಿದ್ದದ್ದು ನೆಪ್ಪಾಯ್ತು... ಲಕ್ಕ ಇನ್ನೇನು ತಮ್ಮ ಗುಡ್ಡ ಸಮೀಪಿಸ್ತ ಇರೋನೂವೆ, ಓಣಿಂದ ಮಂಕರೀಲಿ ತೊಪ್ಪೆ ಎತ್ತಿ ತತ್ತಿದ್ದ ಸಿವುನಿ ಎದಿರಾದ್ದು. ಲಕ್ಕ ಗುಡ್ಡ ವಳೀಕೆ ಪ್ರವೇಶ ಮಾಡೋದ ತಡದು, “ವಸಿ ನಿಂತುಗಣ್ಣ, ಇದೇನು, ನಾನು ಕ್ಯಾಳ ಇರಾದು?... ಇದೆಲ್ಲ ದಿಟವ?” ಕೇಳಿದ್ದು. ಲಕ್ಕಂಗೆ ಸೊಂಟಾನೆ ಮುರಿದಂಗಾಯ್ತು. ಆದರೂವೆ ತನ್ನ ಅಪದೈರ್ಯವ ತೋರಗೊಡ್ಡಿ, “ಅದೇನ ನೀವು ಕ್ಯಾಲಿರಾದು?” ಅಂದು, ಆಕಾಸದಾಗೆ ಗರುಡಾಳ ಕಡೀಕೆ ತನ್ನ ದ್ರುಸ್ಟಿ ಹರಿಸ್ಥ. “ಅದೇನೊ ಬ್ರಾಂಬರ ಮೂಲೆ ಅಟ್ಟಿ ರುಕ್ಕಿಣದ್ವಾರ ನೀನು ಬೋಸರು ಮಾಡಿದ್ದಿಯಂತೆ...?” – ಒಂದೀಟೂ ಮಖ ಇರುಕಿಸದೆ ಅಂದಿದ್ದು!... ಲಕ್ಕ ತಬ್ಬಿಬ್ಬಾದ. “ಯಾರಮಿ ಯೋಳಿದೋರು?” “ಯಾರೇನ ಹ್ಯಾಳಬೇಕು?... ಊಗ್ಗೆ ಊರೇ ಎದ್ದು ತಕತಕ ಕುಣಿತ ಯಕ್ಷಗಾನ ಮಾಡ್ತಾ ಅದೆ...” ಲಕ್ಕ ತಲೆ ತಗ್ಗಿಸ್ತ, ಸಿವುನಿ ಇನ್ನೂ ಸಮೀಪ ಬಂದು, “ಅಂಗಾರೆ- ಈ ಮಾತು ಸಟೆ ಅಲ್ಲ, ಅನ್ನು?” - ನಂಬಬಾರದ್ದ ನಂಬಬೇಕಾಗಿ ಬಂದೋಳಂಗೆ ಕೇಳಿದ್ದು.