________________
೨೫೮ ವೈಶಾಖ “ವೋಗಮ್ಮ, ನನ್ನ ತಲೆ-ಅಗ್ರಣೆ ಸಾಸೈ ಸಿಡಿಯೋವಂಗೆ ಸಿಡೀತಾ ಅದೆ” ಅನ್ತಾ ಅನ್ತಾ, ತಮ್ಮ ಗುಡ್ಡ ಹೊಕ್ಕ. ಸುದ್ದಿ ಕೇಳಿದೂತ್ತಿನಿಂದೂವೆ, ಕಣ್ಣುಗುಡ್ಡೆ ಕಳಚಿ ಬೀಳೋವಷ್ಟು ಅತ್ತು ಅತ್ತು ಕಲ್ಯಾಣಿ ಗುಡ್ಡಿನ ವಚೋರಿಕೆ ಜೀವ ವೋಂಟೋದೋಳಂಗೆ ವರಗಿ ಕುಂತಿದ್ದು. ಲಕ್ಕನ್ನ ಕಂಡೇಟಿಗೆ, ಗಕ್ಕನೆದ್ದು ಬಂದು ಅವನ ಸ್ವಾಟಿಗೆ ತಿವೀತ, “ನಿಂಗ್ಯಾವ ಬೆರಗು ಬಂದಿತ್ಥ-ಹ್ವಾಗಿ ಸ್ವಾಗಿ ಆ ಹಾರುತಿ ಕೆಣುಕಕ್ಕೆ?” - ಕಿರುಚಿ, ಎದೆ ಬಡಿದುಕೊತ್ತ ಕುಕ್ಕನೆ ಕುಂತು ದುಕ್ಕಡಿಸ್ತಿದ್ದು. ಕ್ವಾಣೆ ವಳುಗಡೆ ಇದ್ದ ನಿಂಗಯ್ಯ, ಸ್ವಾರೆ ಬುಂಡೆ ಕಯ್ಲಿ ಇಡುಕಂಡೇಯ ಈಚೆ ಬಂದೋನು. “ನಮ್ಮ ವಂಸ... ನಿರ್ವಂಸ... ಆಯ್ತಲ್ಲೊ... ಲಕ್ಕ-ಲೋ... ನೀನುಆ ಎಣ್ಣಿನ ಸ್ವಾದೇಂತ ನಂಗೇನೂವೆಕ್ವಾಪ ಇಲ್ಲ ಕ... ಮೊದ್ಧ ಹ್ಯಾಳಕ್ಕಿಲ್ವ ಗಾದ್ಯ-ಎಣ್ಣು ಅಂದ್ರೆ ಹೆಬಗ ನಕ್ಕಾಂತ... ಅದು ಸಮಾಸು...” ನಡನಡ್ಡೆ ಕುಡೀತ ವದರಾಡ್ಡ. ತ್ರಾಣ ಉಡುಗಿ ಕುಂತಿದ್ದ ಕಲ್ಯಾಣಿ, ಪನಾ ಜೀವ ಬಂದೋಳಂಗೆ “ಅದ್ರೆ ಮಂತೆ ನಾ ಹ್ಯಾಳಾದೂವೆ... ಇಂಗೆ ಮೆಡೆಗಾರಿಕೆ ಮಾಡಿ ನಮ್ಮೆಲ್ಲ ಬ್ಯಾ ಬ್ಯಾ ಅವಂಗೆ ಮಾಡಾದರ ಬದ್ಲು, ನಾವು ಯೋಳಿದಾಗ್ಗೆ ನಮ್ಮ ಹುಚ್ಚುಖೋರಿ ಎಣ್ಣು ಚೆಲುವೀಯ ಲಗ್ಗ ಆಗಿದೆ, ಈ ಪಜೀತ ಪಾರಿಜಾತ್ರೆ ಆಯ್ದಿರನಿಲ್ಲ....” ದುಕ್ಕಡಿಸುತ್ತಲೆ ಬೋಳಿ, “ಈಗ ನಾತ್ರೆಗೆ ನಿನ್ನ ಮ್ಯಾಲೆ ನ್ಯಾಯ ಬ್ಯಾರೆ ಆಕ್ಕಂಡವರಂತೆ ಊರ ಯಜಮಾನು, ಅಲ್ಲಿ ನೀನು ಅದೇನ ಪಸೀತೀಯೊ ಪಸಿ.” -ಕ್ಯಾಪ, ಸಂಕಟ ಏಡೂ ಬೆರೆತ ಮಾತ ಉಕ್ಕುಸಿದ್ದು. ಲಕ್ಕ ತಲೆ ತಗ್ಗುಸಿ ಕಲ್ಲಿನ ಪ್ರತುಮ್ಯಾಗಿ ನಿಂತೇ ಇದ್ದ. ರುಕ್ಕಿಣ್ಣವ್ವನ ತೆಪ್ಪ ಜ್ವರಸಕ್ಕೆ ಅವನಿಗ್ಯಾಕೊ ಮನಸೇ ಬರನಿಲ್ಲ. ಈ ಗದ್ದಲದಾಗೆ ಸಿವುನಿ ಕೂಸು ಎಚ್ಚರಾಗಿ ಕಜೆ ತಗೀತು. ಸಿವುನಿ ಜಟಜಟ್ಟೆ ಕಯ್ಯ ಊಳುದ ಕೂಸಿಗೆ ಮೊಲೆ ಕಚ್ಚಿಸಿದ್ದು. ೨೫ ಚಾವಡಿ ಕಟ್ಟೆಯಲ್ಲಿ ಜನ ಒಬ್ಬೊಬ್ಬರಾಗಿ ಬಂದು ಸೇರುತ್ತಿದ್ದರು. ಅತ್ತ ಜಪ್ಪಯ್ಯನ ಮಠದಲ್ಲಿ ಶಿವಪಾದಯ್ಯನವರು ಶಿವಶರಣರ ವಚನಗಳನ್ನು ವಾಚನ ಮಾಡಿ, ನೆರೆದ ಭಕ್ತಾದಿಗಳಿಗೆ ಅರ್ಥ ಹೇಳುತ್ತಿದ್ದರು. ಅಲ್ಲಿ ಕುಳಿತು ಕೇಳುತ್ತಿದ್ದ