ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೦ ವೈಶಾಖ ನಾಟಕದ ಕಂಪೆನಿಯ ಹುಬ್ಬಳ್ಳಿ ಕ್ಯಾಂಪಿನಲ್ಲಿ, ನಾಟಕದ ಖಯಾಲಿಯಿದ್ದು ಪದೇ ಪದೇ ಅವರ ಕಂಪೆನಿ ನಾಟಕಗಳಿಗೆ ಬರುತ್ತಿದ್ದ ಹನ್ನೊಂದನ್ನು ಮದುವೆಯಾಗಿದ್ದ. ಅವಳು ನಾಲ್ಕು ವರ್ಷ ಇವನೊಡನೆ ಸಂಸಾರ ಮಾಡಿಕೊಂಡಿದ್ದು, ಮೂರು ವರ್ಷದ ಹೆಣ್ಣು ಮಗುವನ್ನು ಇವನಲ್ಲೆ ಬಿಟ್ಟು ಬೇರೆ ಇನ್ನೊಂದು ಕಂಪನಿಯಲ್ಲಿ ರಾಜಾ ಪಾರ್ಟು ಹಾಕುತ್ತಿದ್ದ ಗೆಣೆಯನೊಂದಿಗೆ ರಾತ್ರೋರಾತ್ರಿ ಪರಾರಿಯಾಗಿದ್ದಳು. ನಾಟಕ ಕಂಪನಿಯೊಡನೆ ಊರೂರು ಅಲೆಯುವ ಚೆನ್ನೂರನಿಗೆ ಮಗುವನ್ನು ಕಾಪಾಡುವುದು ಕಷ್ಟಕರವಾಗಿ ಕಂಡಿತು. ಆ ಹೆಣ್ಣು ಮಗುವನ್ನು ದರುಮನಳ್ಳಿಗೇ ಕರೆದುತಂದು ನೀವೇ ಪೋಷಿಸಬೇಕೆಂದು ಕಾಡಿ ಬೇಡಿ ತಂದೆತಾಯಿಯರ ಮಡಿಲಿಗೆ ಹಾಕಿ ಹೋದ. ಕಪನಯ್ಯ ದಂಪತಿಗಳಿಗೆ ಆ ಮಗು ಹೊರೆಯಾಗುವುದರ ಬದಲು ಅವರ ವೃದ್ಧಾಪ್ಯದಲ್ಲಿ ಬದುಕನ್ನು ಸಹ್ಯಗೊಳಿಸುವ ಒಂದು ವರವಾಗಿ ಪರಿಣಮಿಸಿತು. ಮಗುವನ್ನು ಅವರು ಸಂತೋಷವಾಗಿ ಸಾಕಿಕೊಂಡರು. ಕಪನಯ್ಯ ಮತ್ತು ಭದ್ರಮ್ಮ ಇಬ್ಬರೂ ಜಪ್ಪಯ್ಯನ ಮಟಕ್ಕೆ ಭಯ, ಭಕ್ತಿಗಳಿಂದ ನಡೆದುಕೊಳ್ಳವರಾದ್ದರಿಂದ, ಹೆಣ್ಣುಮಗುವನ್ನು ತಾವು ಹೋದಾಗಲೆಲ್ಲ ತಪ್ಪದೆ ಅಲ್ಲಿಗೆ ಕರೆದೊಯ್ಯುತ್ತಿದ್ದರು. ಆ ಹೆಣ್ಣಿಗೆ ಒಂಬತ್ತು ವರ್ಷಗಳಾಗುತ್ತಿದ್ದಂತೆ, ಭದ್ರಮ್ಮ ಕಾಲರಾದಲ್ಲಿ ಮೃತಳಾದ ಬಳಿಕವಂತೂ ಆ ಹೆಣ್ಣು ಚಂದ್ರಿ ಖುತುವಾದಳು. ಆಶ್ರಮದ ಊಟೋಪಚಾರಗಳಿಂದಲೋ, ಸ್ವಾಮಿಗಳು ತೋರುತ್ತಿದ್ದ ಪ್ರೀತಿವಿಶ್ವಾಸಗಳಿಂದಲೊ ಖುತುವಾದ ಎರಡೇ ವರ್ಷಗಳಲ್ಲಿ ಮೈ ಕೈ ತುಂಬಿ ಹದಿನೆಂಟು ಹತ್ತೊಂಬತ್ತರ ಪ್ರಾಯವೆಂಬಂತೆ ಕಾಣುತ್ತಿದ್ದಳು. ಅಂಥಾ ಸಮಯದಲ್ಲಿ ಚಂದ್ರಿ ಇದ್ದಕ್ಕಿದ್ದಂತೆ ಸತ್ತು, ಅವಳನ್ನು ತಮ್ಮ ಸ್ವಂತ ಮಗಳಿಗಿಂತ ಅಧಿಕಪ್ರೇಮದಿಂದ ನಡೆಸಿಕೊಳ್ಳುತ್ತಿದ್ದ ಸ್ವಾಮಿಗಳು ಅವಳ ಉತ್ತರಕ್ರಿಯಾಧಿಗಳನ್ನು ತಾವೇ ಮುತುವರ್ಜಿ ವಹಿಸಿ ತಮ್ಮ ಮಠದ ವೆಚ್ಚದಲ್ಲೇ ನಿರ್ವಹಿಸಿದ್ದರು. ಚಂದ್ರಿಗೆ ಆರು ತಿಂಗಳಿಂದಲೂ ಉದರ ಶೂಲೆ ಇತ್ತೆಂತಲೂ ಅವಳು ಯಾರಿಗೂ ತಿಳಿಸದೆ ಮುಚ್ಚಿ, ಕೊನೆಗೆ ಅದು ಪ್ರಬಲಿಸಿದಾಗ ಯಾರು ಯಾರೂ ದೂರದೂರಿನ ಆಯುರ್ವೇದ ಪಂಡಿತರಿಂದ ವೈದ್ಯ ಮಾಡಿಸಿದರೂ ಅವಳು ಉಳಿಯಲಿಲ್ಲವೆಂದೂ ಮಠದ ವತಿಯಿಂದ ಊರಿಗೆಲ್ಲ ಪ್ರಚಾರವಾಯಿತು. ಕಪನಯ್ಯನನ್ನು ಕೇಳಿದರೆ ಅವಳ ಸಾವಿನ ವಿಷಯವಾಗಿ ಯಾವ ಪ್ರತಿಕ್ರಿಯೆಯನ್ನು ವ್ಯಕ್ತಿಪಡಿಸುವ ಗೋಜಿಗೂ ಆತ ಹೋಗುತ್ತಿರಲಿಲ್ಲ. ಯಾರಾದರೂ ಚಂಡಿಸಿ ಕೇಳಿದರೆ “ಶಿವ ಕೊಟ್ಟ, ಕಿತ್ತುಗೊಂಡ” ಎಂದಷ್ಟೆ, ಹೇಳುತ್ತಿದ್ದ. ಆದರೆ ಕ್ವಾಟೆ ಬುಳ್ಳಪ್ಪನಂಥ ಒಬ್ಬಿಬ್ಬರು, “ಶಿವಪಾದಪ್ಪನೋರು ಮಗಳು ಮಗಳು ಅಂದುಕೊತ್ತ ಚಂದ್ರಿಯ ವಳಗೇ