________________
೨೬೨ ವೈಶಾಖ H ತಿರುಗಕ್ಕೆ ಹೊಂಟಿದ್ದ. ಬೆಳುದಿಂಗು ಮನೆ ಮನ್ಯ ಮಾಡ ಹೆಂಚುಗಳೂವೆ ಬೆಳುಗಿ, ಬೀದಿಬೀದೀಲೂ ಬೆಳ್ಳಿಯಗಿ ಹಾಸಿಕಂಡಿತ್ತು. ಲಕ್ಕ ಚಿಕ್ಕೀರಮ್ಮ ಮನೆ ಮುಂದೆ ಬಂದಾಗ ಇಂದ್ರೆ ಆ ಮನೆ ವಳುಗಡೆ ನಡದ ಒಂದು ಪರಸಂಗ ನೆಪ್ತಾಯ್ತು. ಆಗ ತನಗಿನ್ನೂ ಎಳೆವಯಸ, ಇಂಗೇ ಗಸ್ತು ತಿರುಗಕ್ಕೆ ತನ್ನ ದೊಡ್ಡಯ್ಯ ಕಳುಸಿದ್ದ. ಅವತ್ತೂವೆ ಇಂಗೇನೆ ಹಾಲು ಚೆಲ್ಲುದಂಗಿರೊ ಬೆಳುದಿಂಗ್ಲು. ಅವ್ರ ಮನೆ ಅತ್ರಕ್ಕೆ ಬತ್ತಿದ್ದಂಗೆ ಉಚ್ಚೆ ಉಯ್ಯಕ್ಕೆ ಅವಸರಾಯ್ತು. ಚಿಕ್ಕೀರಮ್ಮ ಮನೆಗೂ ಕಾಡಯ್ಯ ಮನೆಗೂ ನಡುತಾವಳ ಸೊಂಪಲ್ನಲ್ಲಿ ವೋಗಿ ಕುಂತ... ಆಗ, ಅವಳ ಅಟ್ಟಿ ವಳುಗದಿಂದ - “ವಷ್ಟುಗಮ್ಮಿ, ಸಾಯೊ ವೊತ್ನಲ್ಲಿ ಯಾಕಿಂಗೆ ಹಟ ಮಾಡೀಯೆ?... ಸುಮ್ಮಕೆ ವಸ್ತುಕೊ.” ಮಾತು ಕೇಳಿಸಿ, ಅಲ್ಲೇನು ನಡೀತಾ ಅದೆ ತಿಳುಕೋಬೇಕು ಅನ್ನೋ ಮನಸಾಗಿ, ಜಟಜಟ್ಟೆ ಮುಗುಸಿ ಎದ್ದ. ಚಿಕ್ಕೀರಮ್ಮ ಅಟ್ಟಿ ಮಣ್ಣಿನ ಗ್ವಾಡೇಯ ಸೂರಿನವರೂ ಆಕಿರನಿಲ್ಲ. ಕಾಡಯ್ಯ ಅಟ್ಟಿ ಗ್ವಾಡೆ ಕಡೀಕೆ ಸೈಜುಕಲ್ಲು ರಾಸೀಲಿ ಏಡು ಕಲ್ಲೆತ್ತಿ, ಅಮ್ಮ ಗ್ವಾಡೆಗೆ ವರುಗಿಸ್ತಂಗೆ ಒಂದರಮಾಲೊಂದ ಇರುಸಿ, ಅದರ ಮಾಕೆ ಹತ್ತಿ ನಿಂತು, ಆ ವೋಟು ಗ್ವಾಡೆ ವಳೀಕೆ ಇಣುಕಿ ಕ್ವಾಡ್ಡ. ಸ್ವಾಡಾಡ್ತಿದ್ದಂಗೆ ಲೋಕದಾಗೆ ಇಂಗೂ ಉಂಟ?' ಅಂತ ಲಕ್ಕ ಬೆರುಗಾದ! ಬರೀ ಚಕ್ಕಳ ಮೂಲೆ ಮನಗಿದಂಗೆ ಚಿಕ್ಕೀರಮ್ಮ ಹಾಸಿಗ್ಗೆ ಅಂಟಿ ಬಿದ್ದಿದ್ದು, ಹಿಂದಲಟ್ಟಿ ಬೆಟ್ಟಯ್ಯ ಎಲ್ಲಕ್ಕೆ ವೋಗೋನ ತರ ಕುಕ್ಕುರುಗಾಲ್ನಲ್ಲಿ ಕುಂತಿದ್ದ. ಅವನ ಕಯ್ಲಿ ಒಂದು ಕಡ್ಡಿ, ಆ ಕಡ್ಡತುದಿಗೆ ಗಾಡಿಕಪ್ಪು ಇನ್ನೊಂದು ಕಯ್ಯಾಗೆ ಒಂದು ಪತ್ರ ಇದ್ದಂಗಿತ್ತು. “ಈ ಪತ್ರಕ್ಕೆ ನಿನ್ನ ಹೆಬ್ಬೆಟ್ಗೊತ್ತು. ಎಂಗಿದ್ರೂವೆ ನಿಂಗೆ ಮಕ್ಕಳಿಲ್ಲ. ಮರಿಲ್ಲ. ಜ್ವತೆ ನಿನ್ನ ಗಂಡಸತ್ತ ಮ್ಯಾಗೆ ಉದ್ದಕ್ಕೂ ನಾನೇ ತಾನೇಯ ನಿನ್ನ ಕಷ್ಟ ಸುಕ, ನಿನ್ನ ಯವಾರ ಯೆಲ್ಲಾನು ಅನುಭೋಗಿಸ್ತ ಬಂದಿರಾದು?... ಇಂಗೆ ಅನುಬೋಗಿಷ್ಠ ಮ್ಯಾಗೆ ನಾನೆ ತಾನೇಯ ನಿನ್ ಆಸ್ತಿಗೆ ಹಕ್ಕುದಾರ?...” ಬೆಟ್ಟಯ್ಯ ಕುಂತಿದ್ದ ವರುಸೆ ಇಂದುಕೆ ಕಾಡಲ್ಲಿ ರಣದ್ದುಗಳು ಹೆಣದ ಮ್ಯಾಲೆ ಎರಗಕ್ಕೆ ಕಾಯ್ತಾ ಕುಂತಂಗಿತ್ತು! “ನನ್ನ...ತ ತಂ......ಮೊಗ...ದ-ತ್ತು...” ಕಣ್ಣು ಮುಚ್ಚಿಕಂಡು ಬೆಟ್ಟಯ್ಯ ಮಾತ ಕೇಳಿದ್ದ ಚಿಕ್ಕೀರಮ್ಮ ಬೋ ಕಸ್ತಿನಿಂದ ತೊದಲಿದ್ದು.. “ದತ್ತು, ದತ್ತು, ದತ್ತು! ವೋಟೂತ್ನಿಂದ ಇದೇ ರಾಮಾಣ್ಯ ಹಾಡ್ತ