ಪುಟ:ವೈಶಾಖ.pdf/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೬೩ ಇದ್ದೀಯಲ್ಲೆ, ಚಿಕ್ಕೀರಿ?... ಸುಮ್ಮಕೆ ನನ್ನ ಮಾತು ಕ್ಯಾಳು. ನಿನ್ನ ಹೆಬ್ಬೆಟ್ಟೆ ಈ ಗಾಡಿ ಕಪ್ಪ ಹತ್ತಿಸ್ತೀನಿ. ಅದ್ರ ಈ ಕ್ರಯಪತ್ರಕ್ಕೆ ವತ್ತಿಬುಡು. ಆಮ್ಯಾಕೆ ನಿರುಂಬಳಾಗಿ ನೀನು ಕಣ್ಣು ಮುಚ್ಚಿಕೊಬೈದು... ಚಿಕ್ಕೀರಮ್ಮ ಮಾತಿಲ್ಲೆ ಬಿದ್ದಿದ್ದು. ಬೆಟ್ಟಯ್ಯ ರಣದ್ದಿನ ಅಂಗೇಯ ತಟಕ್ಕೆ ಚಿಗುದು ಹೆಣದಂಗೆ ಕಣ್ಮುಚ್ಚಿ ಬಿದ್ದಿದ್ದ ಚಿಕ್ಕೀರಮ್ಮ ಕಯ್ಯ ಇಡುದು, ಹೆಬ್ಬೆಟ್ಟೆ ತನ್ನ ಕೈ ಕಡ್ಡಿಯಿಂದ ಗಾಡಿ ಕಪ್ಪ ಬಳಿಯಕ್ಕೊದ, ಸೆಡಾರೆ ಚಿಕ್ಕೀರಮ್ಮ ಕಯ್ಯ ಕಿತ್ತುಗಂಡಾಗ, ಬೆಟ್ಟಯ ಜ್ವಕ್ಕೆ ಲಕ್ಕಂಗೂ ಬೆಚ್ಚಿಬಿದ್ದ! ಇಲ್ಲೀಗಂಟ ಗಡಸಾಗಿ ಚಿಕ್ಕೀರಮ್ಮ ಆಸ್ತಿ ತನ್ನ ಹಕ್ಕು ಅನ್ನೋನಂಗೆ ಮಾತಾಡ್ತಿದ್ದ ಬೆಟ್ಟಯ್ಯ, ಚಿಕ್ಕೀರಮ್ಮ ಕೋಸಾರ ಕಯ್ಯ ಕಿತ್ತುಗಂಡದ್ದ ಕಂಡು ಮೆತ್ತಗಾಗಿ, ಗ್ವಾಗರಿಯಕ್ಕೆ ಮುಟ್ಟಿಕಂಡ. “ನಂಗೂವೆ ನೀ ಕಂಡಂಗೆ ನಾಕು ಗಂಡು ಮಕ್ಕಳು ನನ್ನ ಇರೊ ಆಸ್ತಿನೆಲ್ಲ ಹಂಚಿದೂವೆ, ಅವು ಒಬ್ಬೊಬ್ಬರಿಗೆ ಸಿಕ್ಕೋದು ಕಡೀಕೆ ಪಿಂಚುಪಿಡಯೇ...ಆಮಾಕೆ ನಂಗೂ ನನೆಡತೀಗೂ ಉಳಿಯೋದೇನ?ಲೋಳಲೊಟ್ಟೆ! ವೋಟೇಯ...” ಚಿಕ್ಕೀರಮ್ಮ ಕಣ್ಣುರೆಪ್ಪೆ ಎಳಕಂಡು ಕೊಂಟು ಬಿದ್ದಂಗೆ ಬಿದ್ದೇ ಇದ್ದು. “ಚಿಕ್ಕೇರಿ-ಇದ್ಯಾಕೆ?... ವಷ್ಟು ಕಳೆ... ವಟ್ಟುಕಮ್ಮಿ... ನಾ ನಿಂಗೆ ಏಟು ತೋರ ಸುಕ ಉಣುಸಿ...” ಬೆಟ್ಟಯ್ಯ ಅವಳ ಕೆನ್ನೆಗಳ ಇಡುಕಂಡು ಆ ಕಡೀಂದ ಈ ಕಡೀಕೆ ಅಳ್ಳಾಡಿಸ್ಲ, ಅವಳ ಕುತ್ತಿಗೆ ಯಾವ ಕಡೀಕೆ ಎಳುದ್ರೆ ಆ ಕಡೀಕೆ ಬಂದು, ಅಂಗೇ ಒಂದ್ಬಲ ತಪ್ಪಕ್ಕಂತ ಬಿದ್ದು ಕತ್ತು... ಕತ್ತು ಯಾವಾಗ ವಕ್ಕಡೀಕೆ ಬಿತ್ತೊ ಬೆಟ್ಟಯ್ಯ ಬೆಟ್ಟೋದ... ಅವಳ ಆಣೆ ಮುಟ್ಟಿ ನ್ಯಾಡ್ಡ, ಕಯ್ಯ ಕಾಲು ಮುಟ್ಟಿದ್ವಾಡ - ಎಲ್ಲಾ ಕಡೇನೂವೆ ತಣ್ಣಗಾಗಿರಬೇಕು. ಮುಂದು ಕೇನಪ್ಪ ಮಾಡೋದೂಂತ ಅಣೆ ಗಟ್ಟಿಸಿಕೊತ್ತ ಅಲ್ಲಿಂದೆದ್ದ. ಎದ್ದು ಬೀದಿ ಬಾಗಿಲ ಗಂಟೆವೋದ-ಜ್ವರೀಕೆ ಯಾರಾರು ಇದ್ದಾರೆ? ಅಂತ ವಸಿ ವೊತ್ತು ಕದಕ್ಕೆ ಕಿವಿ ಕ್ವಟ್ಟುಗಂಡೇ ನಿಂತಿದ್ದ. ಯಾರೂ ಇಲ್ಲ ಅನ್ನೋದ ಗಟ್ಟಿ ಮಾಡಿ ತರ್ದೂದಾಗಿ ಇಂದುಕೆ ಬಂದು ಅವಳ ಎಡದಾ ಹೆಬ್ಬೆಟ್ಟೆ ಕಡೀಲಿದ್ದ ಗಾಡಿ ಕಪ್ಪ ಬೋಳುದು. ಆ ಸಮಯಕ್ಕೆ ಸರಾಗಿ ನಡುಮನೆ ಗ್ವಾಡಿಂದ ಒಂದು ಕರೀಕೊತ್ತಿ ಅನ್ನ ಇಂದುಗಡಿಂದ ನೆಗೀತು!... ಜೀವ ಧ್ವಂಟೇ ವೋಯ್ತು ಅಂದಂಗೆ ಬೆಟ್ಟಯ್ಯ ಮೊಖ ಬಿಳಿಚಿಕುತ್ತು. ಜೀವನ ಒಂದು ಕಯ್ಲಿ ಇಡಕಂಡು ಪುಕ್ಕಪುಕ್ಲಾಗಿ ಇಂದುಕೆ ತಿರುಗಿ ನ್ಯಾ....