ಪುಟ:ವೈಶಾಖ.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨ ವೈಶಾಖ ಹೂಗೊಂಚಲನ್ನು ಒಂದು ಪಕ್ಕಕ್ಕೆ ಒಗೆದು, “ಯಾಕೆ ಸೋಮಿ, ತಟಕ್ಕನೆ ಸುಮ್ಮಕ್ಕಾದಿ?” ಎಂದು ಕೇಳಿದ. “ಏನೊ ಹೇಳಿದೆ. ಇದರ ಬಗ್ಗೆ ನೀವೇನೂ ತಲೆ ಕೆಡಿಸಿಕೊಬೇಕಾಗಿಲ್ಲ. ಇದು ನನ್ನ ಸಮಸ್ಯೆ. ಇದನ್ನು ನಾನೇ ಪರಿಹರಿಸಿಕೊಳ್ಳಬೇಕು” ಎಂದು ತೋಟದ ಬಾಗಿಲು ದಬ್ಬಿ ಒಳನಡೆದರು. ತೋಟದ ಹೊರಗೇ ನಿಂತ ನಂಜೇಗೌಡ, “ಅಬ್ಬ ಈ ಹಾರುವಯ್ಯ ಬಾಕಿಯೋರಂಗಲ್ಲ. ಸಖತ್ ಗಟ್ಟಿಪಿಂಡ” ಎಂದು ತಲೆದೂಗಿ, ಇನ್ನೊಂದು ಬೀಡಿ ಹಚ್ಚಿ, ಸಾವಧಾನವಾಗಿ ತೋಟದ ಮೂಡಲ ತಿರುವಿನಲ್ಲಿ ಜಾರಿಕೊಂಡ. ಯೋಚಿಸುತ್ತಲೇ ಶಾಸ್ತ್ರಿಗಳು ತೋಟವನ್ನು ಪ್ರವೇಶಿಸಿದರು. ಸುಮಾರು ಒಂದೂವರೆ ಎಕರೆ ತೋಟ, ನಾಲ್ಕುನೂರಕ್ಕೂ ಮಿಕ್ಕಿದ ಅಡಿಕೆ ಮರಗಳು. ಅವಕ್ಕೆ ಹಬ್ಬಿಸಿದ ವೀಳೆಯದೆಲೆ ಹಂಬು, ಎಲೆ ಹಂಬು ಇಲ್ಲದ ಸ್ಥಳದಲ್ಲಿ ಬಾಳೆ ಗಿಡಗಳು, ಹಳ್ಳ ಹಸಿ ಕಡಿಮೆ ಇರುವ ಭಾಗದಲ್ಲಿ ತೆಂಗು, ಮಾವಿನಮರ. ಒಂದೆರಡು ಹಲಸಿನ ಮರಗಳು, ಶಾಸ್ತ್ರಿಗಳು ಸುಮ್ಮನೆ ಸಿಂಹಾವಲೋಕನ ಮಾಡುತ್ತ ಸುತ್ತಾಡಿದರು. ಕೆಲವು ಅಡಿಕೆ ಮರಗಳಿಗೆ ಹಬ್ಬಿಸಿದ ಎಲೆಹಂಬಿನ ಪಲ್ಲಿಗಳು ಸಡಿಲಗೊಂಡು, ಹಂಬು ಮರಗಳಿಂದ ಜಾರುತ್ತಿದ್ದವು. ಶಾಸ್ತ್ರಿಗಳು ಹಿಕ್ಕಲು ಸೋಸುತ್ತಿದ್ದ ಆಳುಗಳನ್ನು ಕೂಗಿ ಕೇಳಿದರು: “ಇದೇನಪ್ಪ, ಈ ಕಡೆ ಮರಗಳಿಗೆ ಹಂಬು ಸೇರಿಸಿ ಕಟ್ಟುಹಾಕದೆ-ಹಾಗೇ ಬಿಟ್ಟಿದ್ದೀರಲ್ಲ?...ಎಲೆ ಹಂಬು ಮರಗಳ ಮೇಲೆ ಬಿಟ್ಟುಕೊಂಡು ಹೋಗ್ತಿರೋ ಪಲ್ಲಿಗಳೆಲ್ಲ ಸಡಿಲವಾಗಿ, ಕೆಳಕ್ಕೆ ಜಾರಿ ಜೋಲಿ ಹೊಡೀತಾ ಇವೆಯಲ್ಲ?... ಅಗೆಯುವುದನ್ನು ನಿಲ್ಲಿಸಿ ಮರಿಯ ಉಳಿಕೆ ಅಳುಗಳ ಪರ ಉತ್ತರವಿತ್ತ: “ನಾವೂ ಸುಮಾರು ಮರಗಳೆ ಕಟ್ಟಾಕಂಡು ಬಂದೊ ಕಣಯ್ಯಾ....ವಸಿ ಮರ ಎಲ್ಲೊ ಕೈ ತೆಪ್ಪೋಗಿರಬೈದು.” “ಯಾವತ್ತೂ ಹೀಗೆ ಮರೀಬೇಡಿ. ಎಲೆ ಹಂಬು ಅತಿಸೂಕ್ಷ್ಮ ಕೆಳಗೆ ಬಿದ್ದರೆ ಮುರಿದುಹೋಗುತ್ತೆ ಅನ್ನೋದು ನಿಮಗೆ ತಿಳಿದಿಲ್ಲವೆ?- ಕೆಳಕ್ಕೆ ಬರದ ಹಾಗೆ, ಹಂಬಿನ ಪಲ್ಲಿ ಮೇಲಕ್ಕೆ ಹೋಗುವ ಹಾಗೆ, ಕುಡಿಗಳಿಗೆ ಕಟ್ಟು ಹಾಕದೆ ಹೋದರೆ ಬಾ ಬಾ ಇಡೀ ಎಲೆಗೋಟವೆ ಮಗುಚಿಕೊಳೊಲ್ಲವೆ?...” - ಹೀಗೆ ಎಚ್ಚರಿಸಿ, ಶಾಸ್ತಿಗಳು ಪಂಚೆಯೆನ್ನೆತ್ತಿ ಕಟ್ಟಿದರು. ವಲ್ಲಿಯನ್ನು ತಲೆಗೆ ಸುತ್ತಿದರು. ಸೊಂಟದ ಮೇಲೆಲ್ಲ ಬರಿಮೈಯಾಗಿ, ಒಂದೊಂದು ಮರಕ್ಕೂ ಬಿದಿರೇಣಿಯನ್ನು ಆನಿಸಿ, ಅದರ ಮೇಲೆ ಹತ್ತಿ ನಿಂತು, ಆಳುಗಳು ಬಿಟ್ಟಿದ್ದ