ಪುಟ:ವೈಶಾಖ.pdf/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೬೬ ವೈಶಾಖ “ನೀವು ಯೋಳಿದ್ದು ಸಾಜ” ಅಂತ ವಪ್ಪಿ, “ಇನ್ನೂ ವಸಿ ಕೇರಿಗಳು ಉಳಕಂಡವೆ. ಗಸ್ತು ಹೃಡೀಬೇಕು, ಬತ್ತೀನಿ” ಅಂದು, ಲಕ್ಕ ಅಲ್ಲಿಂದ ಎಚ್ಚೆ ಕಿತ್ತ. ತನ್ನ ಸೊಸೆ ಆ ಕಂಚುಗಾರ ಸಾಬಿಯ ಜ್ವತೆ ಓಡೋದಾಗಿನಿಂದ ಲಕ್ಕ ಆ ಹಾರುತಿ ಅಟ್ಟಿಗೆ ವೋಯ್ತಿದ್ದದ್ದು ಸರಿ ಕಾರನಿಲ್ಲ, ಬುಂಡಮ್ಮಗೆ, ಅವನಿಗೂ ಒಂದೇರಡು ಬಾರಿ ಯೋಳಿಯೂ ಇದ್ದು. ಆದರೆ ಲಕ್ಕ ಅವಳ ಬುದ್ಧವಾದವ ಜೀವಣಿಸಿರನಿಲ್ಲ. ಆತಂಕ ತುಂಬ ಸ್ವಾಟವ ಅವನತ್ತ ಬೀರಿ” ಹಿಂದಿನ ಮಟದಯ್ಯನೋರು ಇದಾವೆ, ತಾವೆ ಸೊಂತ ಪಂಚಾತಿ ಕಟ್ಟೇಲಿ ಖುದ್ದಾಗಿ ಕುಂತು, ಯಾವ ನ್ಯಾಯಾನೂವೆ ದರುಮಾಗಿ ತೀರುಮಾನ ಮಾಡೋರು. ಈಗ ಅಯ್ಯೋರ ಚರ್ಯೇನೆ ಬ್ಯಾರೆ. ಪೂಜೆ ಪುಣಸ್ಕಾರ ಅಂದ್ಯಂಡು ಯಾವ ಯೇಟಿಗೂ ಸಿಕ್ಕಕ್ಕಿಲ್ಲ!... ಆಯ್ತು ಈಗೇನ ಮಾಡಾದು?- ಅನುಬೋಗಿಸನೇ ಬೇಕು” ಎಂದು ಕೊರಗಿದಳು. ಅಲ್ಲಿಂದ ಹೃಂಟ ಲಕ್ಕ ಊರ ಉಳಿಕೆ ಕೇರಿಗಳೂ ಬಳಸಿ ವೋಲಗೇರಿ ಸೇರಿದಾಗ ಮಿಕ್ಕೆಲ್ಲ ಇಸ್ಯಗಳಿಂಗಿತಲೂವೆ ಕುರುವಿನ ಸೆಟ್ಟಿ ರಂಗಯ್ಯನ ಅಟ್ಟಿಯ ಮಗ್ಗದ ಲಾಳಿ ಆಡುವ ಸದ್ದೇ ಅವ್ರ ತಲೇಲಿ 'ಮುಂದ್ರೇನು?- ಮುಂದೇನು...?” ಅನ್ನೊ ಚಿಂತ್ಯ ಲಾಳಿ ಒಂದೇ ಸಮಕೆ ಆಡ್ತಾನೆ ಇತ್ತು. ಎಂದಿನಂಗೆ ವೋಲಗೇರಿಯ ಮುಂಚೋರಿ ಎಂಗಸ್ತು ಕುಂತು ಚಾಪೆ ಎಣೀತಿದ್ರು, ಬೆಳುದಿಂದ್ಭು ಅವರ ಮ್ಯಾಲೆಲ್ಲ ಚೆಲ್ಲಾಡಿತ್ತು. ಚಾಪೆ ಹೆಣೀತ ಆ ಸುದ್ದಿ ಈ ಸುದ್ದಿ ಯೆಲ್ಲಾನೂವೆ ಗುಡ್ಡೆ ಆಕ್ಕಂಡು ಹಕಳೆ ವೋಡೀತಿದ್ರು, ಎಂದಿನಂಗೆ ದೇವಜಮ್ಮ ತುಂಟಾಟ ಅಡ್ತ. “ಚಾಪೆ ಹೆಣೀದೆ ಕುಂತು ಅಲ್ಲೇನು ಮಾಡಿ ಎದ್ದು ಬಾಗ್ಲ. - ಲಕ್ಕನನ್ನ ಕರದೇ ಕರದ್ದು. “ಇವೊತ್ತು ಆಗಕ್ಕಿಲ್ಲ.” ಅಂತ ಲಕ್ಕ ಅಂದುದಕೆ, “ಹೊಳೆ ಹಾದಾಯು, ಮುಕುಳಿ ತಳುದಾಯು, ಹೊಳೆ ಹಾಯೋವಾಗ ಎತ್ತಿಕಂಡಿದ್ದ ಸ್ಯಾಲೇಯ ಈಗ ಮುಚ್ಚಿಕಂಡ್ರೆ ಯಾವ ಸಪಲವ?... ಬಂದದ್ದೆಲ್ಲ ಬಗ್ಗಿ, ಎದ್ದು ಬಾಗ್ಲ- ಆದಂಗಾಯ್ತದೆ ಮಾದಪ್ಪನ ಜಾತ್ರೆ...” ಅಂತ ದ್ಯಾವಾಜಮ್ಮ ಮಾತ ಜೋಡಿಸಿದ್ದು. ದ್ಯಾವಾಜಿ ಮಾತು ಕೇಳಿದ್ರೂವೆ ಕೇಳದೆ ಇದ್ದೋನಂಗೆ ಲಕ್ಕ ಕಲ್ಲಿನಮ್ಯಾಗೆ ಕಲ್ಲಾಗಿ ಕುಂತೇ ಇದ್ದ. ಮುಂದ್ರೇನು, ಮುಂದೇನು ಅನ್ನೊ ಚಿಂತೆ ಅವ್ರ ಅಂತರಾಳದಾಗೆ ಹೃಡೀತೇ ಇತ್ತು. ಬೊಡ್ಡ ಅವ್ರ ಕಾಲ ಬಳಿ ಕುಂತು ಅವನ