ಪುಟ:ವೈಶಾಖ.pdf/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೬೭ ಪಾದವ ನೆಕ್ತಾ ಇತ್ತು. ತನ್ನ ಈಟು ತೀವ್ರಾಗಿ ಬಾದಿಸ್ತಿದ್ದ ಚಿಂತ್ಯ ಮರೆಯಕ್ಕೆ ಲಕ್ಕನ ವ್ಯಗ್ರಾದ ಮನಸು ಬ್ಯಾರೊಂದು ದಿಕ್ಕಿನಾಗೆ ಅರೀತು... ಊರ ಉತ್ತಮರೆಲ್ಲ ನ್ಯಾಯ ಮಾಡಿ ನಂಗೆ ಯಾವ ಶಿಕ್ಷೆ ಕೂಡ್ತಾರೊ?... ರುಕ್ಕಿಣವ್ವಂಗೆ ಆ ಹಾರುವರೆಲ್ಲಾರು ಪಂಚಾತಿ ಮಾಡಿ ಅದೇನು ಫಜೀತಿ ಮಾಡ್ತಾರೋ?... ದ್ಯಾವರು ಅದ್ಯಾಕೆ ಅವರೆ ಆ ಬುದ್ದ ಕ್ವಟ್ಟ?... ನಮ್ಮವ್ವನೂ ಸಿವುನಿಯೂವೆ ಚಾಪೆ ಹೆಣೆಯಕ್ಕೆ ಬರದೆ ಗುಡ್ಡಾಗೆ ಬಿಡ್ಕಂಡು ಸೋಕ ಮಾಡ್ತಿರಬೈದು!... ರಾಚನ ಸರಾಪಿನ ಅಂಗಡೀಲಿ ನಮ್ಮಯ್ಯ ತನ್ನ ಯತೆ ಮರೆಯಕ್ಕೆ ಇನ್ನೂ ಏಡು ಬುಂಡೆ ಜಾಸ್ತಿ ಕುಡುದು ಆಳ್ತಾ ಬಿದ್ದಿರಬೈದು!... ಮಠದ ಸಿವಪಾದಪ್ಪನೋರು ತಮ್ಮ ಭಕ್ತರ ಕುಂಡರಿಸಿಕಂಡು ಸರಣರ ಇಚಾರಾಗಿ ಉಪದೇಸ ಮಾಡ್ತಿದ್ದದ್ದು ಮಠದ ಬೀದೀಲಿ ಬಂದಾಗ ನಂಗೇ ಕಾಣಿಸಲ್ಲ! - ಆದ್ರೆ, ಅಲ್ಲಿ ನಂಜೇಗೌಡರ ಕಾಳ್ಮೆಲ್ಲ. ಸೂತಕ ಅಂತ ತಮ್ಮ ಅಟ್ಟಲೇ ಇರಬೈದು... ಕುಂಬಾರಕೇರೀಲಿ ತಾನು ಬತ್ತಾ ಇರಬೇಕಾರೆ, ಅಲ್ಲಿ ಮಾರಾಮಾರಿ ಕದ್ದ ಹಕ್ಕಳ ಮಾತೆ ಸುರು ಆದ್ದು. ಗೆಜ್ಜುಗ ಆಡುವಾಗ ಮಾದಸೆಟ್ಟಿ ಹೈದ, ಗುಜ್ಞಸೆಟ್ಟಿ ಹೈದ ನೂಕುದನಂತೆ. ಬಿದ್ದು ಅದರ ಮಂಡಿ ಮೊಣಕಯೆಲ್ಲ ರಕ್ತ ಬಸೀತಂತೆ. ಅವೇಡು ಹಕ್ಕಳ ಅವ್ವದೀರು ಮುಂದಲೆ ಇಡುಕಂಡು ಜಗ್ಗಾಡಿದ್ರಂತೆ. ಆಮ್ಯಾಕೆ ಅವರಿಬ್ರ ಗಂಡನೀರೂ ಮೆಚ್ಚು ಕುಯ್ಯಗತ್ತಿ ಕತ್ಕಂಡು ರಣರಂಗ ಮಾಡಿ ನಿಂತಿದ್ದದ್ದ, ತಾನೂ ವಕ್ಕಡೀಕೆ ನ್ಯಾಡಿದ್ದ. ಈ ಜಗಳ ಬುಡುಸಿ ಸಮಾದಾನ್ನೆ ತರಬೇಕಾರೆ ಕುಂಬಾರಗೇರಿ ಯಜಮಾನ್ತಿಗೆ ತುಟಿಗಟ್ಟಾಯ್ತು... ಲಕ್ಕನ ಯೋಚ್ಛೆ ಇಂಗೆ ಅರೀತ ಇಾಗ, ದ್ಯಾವಾಜಿ ಯಾವುದೊ ಮಾತಾಡ್ತ ಆಡ್ಡ, “ಈ ಊರ ಆದ್ಯಾವ ನಕ್ಸತ್ರದಾಗೆ ಉಟ್ಟಾಕಿದ್ರೂ ಹಿಂದನೂರು!... ಅದ್ವಿ, ಅವ್ವ, ಅದ್ವಿ, ಒಂದು ಜಿನ ಆದ್ರೂವೆ ತಪ್ಪದೇ ಇಲ್ಲ. ಈ ಊರಲ್ಲಿ!... ಇವೊತ್ತು ಈ ಕೇರೀಲಿ ಆದ್ರೆ, ನಾಳೀಕೆ ಇನ್ನೊಮದು ಕೇರೀಗೆ ಸುತ್ತುಗತ್ತದೆ! ಯಾರೂವೆ ನಿರುಂಬಳಾಗಿ ಇರುವಂಗೇ ಇಲ್ಲ. ನೆರೆ ಕೆಟ್ಟರೆ ಕರ ಕವಿ ಅನ್ನೊ ಜನವೆ ಊರು ತುಂಬ!- ಇಂಗಿದ್ದಾಗ ನಿರುಂಬಳಾಗಿ ಇರಾದಾದ್ರು ಎಂಗೆ?...”ದೊಡ್ಡ ಲಾಯರಿ ತರಾನೆ ಉಡಾಯಿಸಿದ್ದು ವಾದ್ವ! “ನೀ ಯೋಳೋದೆ ಸೈ” ಅಂದ ಎಂಗಸ್ರ ಕಯ್ಲಿ, ಈಚಲು ಗರಿ ಎಸುಳ ಒಂದರೊಳ್ ನುಗ್ಗಿ ಇನ್ನೊಂದರೊಳ್ಳೆ ಎದ್ದು ಕಾಲು, ಅರ್ದ, ಮುಕ್ಕಾಲುಇಂಗೆ ಚಾಪೆ ಆಯ್ತಾ ಇದ್ರೂ.