ಪುಟ:ವೈಶಾಖ.pdf/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೭೦ ವೈಶಾಖ ಬೆನ್ನಿನ ಹಿಂದೆ ನೇತಾಡುತ್ತಿದ್ದವು. ಈ ವಿಧಿ ಮುಕ್ತಾಯಗೊಂಡ ಒಡನೆಯ ಸಿಡಿಯಡುವ ಪ್ರತಿಯೊಬ್ಬ ತರುಣನೂ ಆವೇಶ ಬಂದವನಂತೆ ಎದ್ದುನಿಂತ. ಇದು ನಡೆಯುತ್ತಿದ್ದುದು ಗುಡಿಯ ಒಳಗಡೆ, ಅನಂತರ ಗುಡಿಯ ಮುಂಬಾಗಿಲು ತೆರೆಯಿತು. ಆವೇಶದಿಂದ ಯಾವ ಪರಿವೆಯೂ ಇಲ್ಲದೆ ಮುನ್ನುಗ್ಗುವ ಆ ತರುಣರ ಬೆನ್ನಿಗೆ ಸಿಕ್ಕಿಸಿದ ಕೊಂಡ್ಲುಗಳ ಹಗ್ಗಗಳನ್ನು ಇಬ್ಬಿಬ್ಬರು ಹಿಂದಿನಿಂದ ಹಿಡಿದು ಅವರ ನಡಿಗೆಯನ್ನು ನಿಯಂತ್ರಿಸುತ್ತಿದ್ದರು. - ಕೊಂಬು ಕಹಳೆ ತಮ್ಮಟೆ ಕಿವಿ ಗಡಚಿಕ್ಕುವ ಅಸಾದ್ಯ ಗದ್ದಲದಲ್ಲಿ ಸಿಡಿಯಾಡುವ ತರುಣರು ಗುಡಿಯಿಂದ ಹೊರಬಂದಾಕ್ಷಣ ಗುಡಿಯನ್ನೊಮ್ಮೆ ಪ್ರದಕ್ಷಿಣೆ ಮಾಡಿದರು. ಅವರೆಲ್ಲರೂ ಕೇವಲ ಕಾಚಾ ಧರಿಸಿ, ತಲೆಗೆ ಕೆಂಪು ಪೇಟ ಧರಿಸಿದ್ದರು. ಪೇಟವು ಕಳಚಿ ಬೀಳದಂತೆ ಅದಕ್ಕೆ ವಸ್ತ್ರವೊಂದನ್ನು ಬಿಗಿಯಲಾಗಿತ್ತು. ಗುಡಿಯ ಪ್ರದಕ್ಷಿಣೆ ಮುಗಿಸಿ ಅವರೆಲ್ಲರೂ ಸಿಡಿ ತೇರನ್ನೂ ಭಕ್ತಿಯಿಂದ ಸುತ್ತು ಹಾಕಿದರು. ಆ ಬಳಿಕ ಕೊಬ್ಬಿದ ಟಗರನ್ನು ಬಲಿ ಕೊಡಲಯಿತು. ಆಗ ತಮಟೆಯ ಆರ್ಭಟ ಹೆಚ್ಚಿತು. ಅದಾದನಂತರ ಸಿಡಿಯಡುವವರಲ್ಲಿ ಒಬ್ಬನನ್ನು ಆಯ್ತು. ಮೊದಲು ಅವನ ಬೆನ್ನಿನ ಕೊಕ್ಕೆಗಳನ್ನು ಸಿಡಿಮರದ ಹಗ್ಗಕ್ಕೆ ಸಿಕ್ಕಿಸಿದರು. ಸಿಡಿಮರದ ಇನ್ನೊಂದು ತುದಿಗೆ ಸಮತೋಲನದ ಅಗತ್ಯಕ್ಕಾಗಿ, ಒಬ್ಬ ವ್ಯಕ್ತಿ ಅದನ್ನು ತಬ್ಬಿ ಹಿಡಿದ. ಸುಮಾರು ನಲವತ್ತು ನಲವತ್ತೈದು ಅಡಿ ಉದ್ದದ ಸಿಡಿಮರ ತಟ್ಟನೆ ಮೇಲೆದ್ದಿತು. ತಕ್ಕಡಿಯಂತೆ ಎತ್ತರದಲ್ಲಿ ಅದು ಸಮಾನಾಂತರ ರೇಖೆಯಾಗಿ ನಿಂತಿತು. ಎರಡು ತುದಿಗಳಿಗೂ ಹಗ್ಗ ಕಟ್ಟಿ ಸಮತೋಲನಕ್ಕೆ ತಂದರು. ನಿಧಾನವಾಗಿ ಮೇಲೇರಿದ ಸಿಡಿಯಾದ ಆ ತರುಣ ಆಕಾಶದಲ್ಲಿ ಸುಮಾರು ಹದಿನೈದು ಹದಿನಾರು ಅಡಿ ಎರದಲ್ಲಿ ತೂಗೂತ್ತ, ಈಜಾಡುವವನಂತೆ ತನ್ನ ಕೈಕಾಲುಗಳನ್ನು ಬಡಿಯುತ್ತಿದ್ದ. ಕೊಂಬು ಕಹಳೆಗಳು ಗಗನವನ್ನೇ ಭೇದಿಸುವಂತೆ ಮೊಗಗಿದ್ದವು. ತರುಣ ಆ ಎತ್ತರದಲ್ಲಿ ಸಿಡಿಯಾಡುವುದನ್ನು ನೋಡಲು ಜನರು ಉತ್ಸಾಹದ ಭರದಲ್ಲಿ ಒಬ್ಬರ ಮೇಲೊಬ್ಬರು ಬೀಳುತ್ತಿದ್ದರು. ಆ ನೂಕುನುಗ್ಗಲಿನಲ್ಲಿ ಯಾರೊ ಬುಂಡಮ್ಮನನ್ನು ತಳ್ಳಿ, ಅವಳು ಮುಗ್ಗರಿಸುವಂತಾಯಿತು. ಯಾರೊ ಅವಳು ಕೆಳಗೆ ಬೀಳದಂತೆ ತಬ್ಬಿ ಹಿಡಿದುದರಿಂದ ಸದ್ಯ ಅವಳು ಪಾರಾದಳು. ತಕ್ಷಣ, ಹಿಂದೆ ತಿರುಗಿ ಮೇಲೆ ಬಿದ್ದವರನ್ನು ಉದ್ದೇಶಿಸಿ, “ಅಸ್ಸಿ, ಇದ್ಯಾಕ ಅಮೀರ ಇಂಗೆ ಮ್ಯಾಲೆ ಬಿದ್ದೀರಿ?- ಆಕಾಸ ಗ್ವಾಡಕ್ಕೆ ನೂಕಾಟ ಯಾಕ...?”