ಪುಟ:ವೈಶಾಖ.pdf/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೭೩ ಲಕ್ಕನ ನ್ಯಾಯ ಇದೀಗ ಊರಿನ ಯಜಮಾನರಿಗೆ ಮತ್ತೆ ನೆನಪಾಯಿತು. ಪಂಚಾಯಿತಿಯು ಕೂಡುವುದುಕ್ಕೆ ದಿನ ಗೊತ್ತುಮಾಡಲು ಯಜಮಾನರಲ್ಲಿ ವಿಚಾರ ವಿನಿಯಮಯವಾಯಿತು. ಸೋಮವಾರ ಕೆಲವು ಯಜಮಾನರಿಗೆ ಬೇರೆ ಯಾವುದೊ 'ಜಂಬರ', ಮಂಗಳವಾರ ಪ್ರಶಸ್ತವಲ್ಲದ ದಿನ, ಆದಿನ ಬೇಡವೆಂದು ಇನ್ನು ಕೆಲವರು. ಬುಧವಾರ ಮತ್ತೆ ಯಾರಿಗೊ ಮನೆಯಲ್ಲಿ 'ಕಾರ್ಯ', ಗುರುವಾರ ಹೇಳಿ ಕೇಳಿ ಹುಣಸೂರಿನಲ್ಲಿ ಸಂತೆ, ಕೊನೆಗೆ ಅವರಲ್ಲಿ ಅಳೆದೂ ಶುಕ್ರವಾರ ಸೇರುವುದೆಂದು ತೀರ್ಮಾನವಾಯಿತು. - ಗುರುವಾರ ರಾತ್ರಿ ಶುಕ್ರವಾರದ ನ್ಯಾಯಕ್ಕಾಗಿ ಉರಿನವರೆಲ್ಲ ಸೇರಬೇಕೆಂದು ಈ ಸಲ ತಮಟೆ ಬಡಿಯುತ್ತ ಡಂಗುರ ಸಾರಿದವನು ಸ್ವಯಂ ಲಕ್ಕನ ದೊಡ್ಡಯ್ಯ- ಕುಂದೂರಯ್ಯನೆ! ಅತ್ತ ದೊಡ್ಡಯ್ಯ ನ್ಯಾಯದ ಬಗ್ಗೆ ಊರಿನ ಕೇರಿಕೇರಿಗಳಲ್ಲೂ ಸಾರುತ್ತಿರುವಾಗ, ಇತ್ತ ಲಕ್ಕ ಗುಡ್ಡಿನ ಪಕ್ಕದ ಬಂಡೆಯೇರಿ ಕುಳಿತು ಚಿಂತೆಯಲ್ಲಿ ಮುಳುಗಿದ್ದ: ಎಳೆಮೊಗೀನಿಂಝವೆ ದೊಡ್ಡಯ್ಯಂಗೆ ತನ್ನ ಕಂಡ್ರೆ ಬೋ ಪಿರೀತ ಅಂತೆ. ಕಿಸ್ಥನಂಗನ್ನೆ, ಕಿಸ್ಥನಂಗವೆ ಅಂತ ಮುದ್ದಾಡ್ತಿದ್ದಂತೆ!- ತಾನುದೊಡ್ಗನಾದ ಮ್ಯಾಲೆ ಅವ್ವನೆ ತನ್ನ ಕುಟ್ಟೆ ಇದೆಲ್ಲ ಯೋಳಿದ್ದು.... ಆ ಕಾಲಕ್ಕೆ ದೊಡ್ಡಯ್ಯಂಗೂ ಈ ಬಂಡೆಗೂ ಬಾಳ ನಂಟು. ನಾನಾಗ ಒಬ್ಬನೇ ಆಗಾಗ ಈ ಬಂಡೆ ಏರಿ ಕುಂತುಗತ್ತಿದ್ದ. ಒಂದೊಂದು ಜಿನ ತನ್ನೂವೆ ತೊಡೆ ಮ್ಯಾಲೆ ಕುಂಡರಿಸಿ ಕಂಬಳಿ ವೊದ್ದು ಸಿ, ಸಪ್ತರುಸಿ ಮಂಡ್ಲ ದ್ರುವನಕ್ಸತ್ರ ಇನ್ನೆಲ್ಲ ತೋರುಸ್ತಿದ್ದ... ತಾನು ಬಾಣದಲ್ಲಿ ವೋಟೊಂದು ಚುಕ್ಕಿಗಳು ರಾಸಿ ಕ್ವಾಡ್ರ. “ನಾಕು ಮೂಲೆಗಳೂ ನಾಕು ಚುಕ್ಕಿ, ಅವುಗೊಳ ನಡೂಮದ್ಯ ಸಾಲಾಗಿ ಮೂರೇ ಮೂರು ಚುಕ್ಕಿ- ಅವೇನು ದೊಡ್ಡಯ್ಯ?” ಅಂತ ಕೇಳಿದ್ಧ. “ಸ್ವಾಢ ಲಕ್ಕ, ನಾಕು ಚುಕ್ಕಿಗಳವಲ್ಲ, ಅವು ದ್ಯಾವಲೋಕದ ನಾಕು ಮಂಚದ ಪಾದಗೋಳು. ನಾಕು ಚುಕ್ಕಿಗಳ ನಡಮದ್ಯ ಇರೊ ಮೂರು ಚುಕ್ಕಿಗಳೂವೆ ಮೂರು ಜನ ಕಳ್ಳರು, ದಯಾವಲೋಕದ ಆ ಮಂಚಾವ ಅಪರಿಸಕ್ಕೆ ಆ ಮೂರಾಳುವೆ ಆ ಮಂಚದ ಅಡಿಕೆ ಕುಂತು ಬೆಳುಗಾನ ಹೊಂಚು ಆಳ್ತಾನೆ ಅವರೆ. ಆ ಮಂಚವ ಇನ್ನೇನು ಸ್ವತ್ತುಗಂಡು ವೋಗಬೇಕು ವೋಟರಲ್ಲಿ ಬೆಳ್ಳಂಬೆಳುಗಾಗೋಯ್ತದೆ! ಬೆಳುಕ್ಖರಿದ ಮ್ಯಾಗೆ ಯೇನು ಮಾಡೂವಂಗಿದ್ದದು? ಆ ಕಳ್ಳರು ಮಂಚ ದಕ್ಕನಿಲ್ಲಾಂತ ಅಲ್ಲಿಂದ ಫೇರಿ ಕೀಳ್ತಾರೆ. ಪತಿ ನಾತ್ರವೆ ಆ