ಪುಟ:ವೈಶಾಖ.pdf/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೭೪ ವೈಶಾಖ ಕ ಮೂರು ಮಂದಿ ಕಳ್ಳರಿಗೆ ಇದೇ ಕೆಮೆ. ಆದ್ರೆ ಆಟ ನಡೀತಾನೆ ಇಲ್ಲ!.... ಕಪ್ಪುಹಲಗೆ ಮ್ಯಲೆ ಅರಳು ಸುರುದಂಗಿದ್ದ ಚಿಕ್ಕಿಗಳೆ ನ್ಯಾಡ್ ಲಕ್ಕ ದೊಡ್ಡಯ್ಯ ಕೇಳಿದ್ದ: - “ದೊಡ್ಡಯ್ಯ-ಅಂಗಾರೆ ಸತ್ತಮ್ಯಾಲೆ ನೀನು, ಅವ್ವ ಸಿವುನಿ, ಪುಟಾರಣ್ಣ, ನಾನು ಯೆಲ್ಲಾರೂವೆ ಮ್ಯಾಗಿನ ಬಾಣದಲ್ಲಿ ಚುಕ್ಕಿಗಳಾಗಿ ಕುಂತುಗತ್ತೀವ?” “ಸರೋಯ್ತು , ಸುಮ್ಮಸುಮ್ಮನೆ ಕುಂತುಗತಾರ?.... ಒಳ್ಳಿ ಗೆಣೆಕಾರ ನೀನೂವೆ.” “ಮಂತೆ?” “ಅದ್ರೆ ದ್ರುವನಂಗೆ, ರುಸಿಗಳಂಗೆ ಪುಣ್ಯ ಮಾಡಿರಬೇಕು ಕನ್ನ.” ಪುಣ್ಯ ಅಂದರೇನೊ ಆಗ ತಿಳುದಿರನಿಲ್ಲ. ಈಗಲೂವೆ ಅದು ಲಕ್ಕಂಗೆ ಏಟಿಕೆ ಇರೋ ಮಾತೆ! ಬಾಣದಲ್ಲಿ ನೆಟ್ಟ ಲಕ್ಕನ ಕ್ವಾಟ ವೋಟಲಕೂ ಸುತ್ತಾಡು. 'ಅಂಗಾರೆ ನಮ್ಮೂರಿನಾಗೆ ಚುಕ್ಕಿ ಆಗೋರು ಯಾರಾರು?' - ಅಂದು ಖಾನೇಸುಮಾರಿ ತಗಿಯಕ್ಕ ಸ್ವಂತ. ಅಸ್ಟರಾಗೆ ದೊಡ್ಡ ಕಾಲುದಸೀಲಿ ಕುಂತಿದ್ದದ್ದು ಒಂದು ಹೆಗ್ಗಣ ವೋದ್ದ ಕಂಡು, ಅಮ್ಮ ಅಟ್ಟಿಸಿಕೊಂಡೋಯ್ತು. ಯಾಕೆ ಬಿಡ ಬ್ಯಾಸರಾಗಿ ಲಕ್ಕ ಅಲ್ಲಿಂದೆದ್ದ. ಅದೇ ರಾತ್ರಿ ರುಕ್ಕಿಣಿಯ ಊಟದ ಶಾಸ್ತ್ರ ಮುಗಿಸಿ ತೆಂಗಿನ ಗರಿಯ ತಾರಾಳೆ ಹೆಣೆಯುತ್ತ ಕುಳಿತಿದ್ದಳು. ಮಾವನವರು ಹೇಗಿದ್ದರೂ ರಾತ್ರಿ ವೇಳೆ ಭೋಜನವನ್ನೆ ಮಾಡುತ್ತಿಲ್ಲ. ತಾನೂ ಸಹ ಸರಸಿಯೂ ಊಟ ಮಾಡದೆ ಹೋಗುವಳೆಂದು ನೆಪಕ್ಕೆ ಅವಳ ಜೊತೆಯಲ್ಲಿ ಊಟದ ಶಾಸ್ತ್ರದ ಮುಗಿಸಿ ಎದ್ದಿದ್ದಳು. ಶಾಸ್ತ್ರಿಗಳು ದೇವರ ಕೋಣೆಯಲ್ಲೇ ಇದ್ದರು. ಅವರ ಜಪ ತಪ, ಪೂಜೆ ಪುನಸ್ಕಾರಗಳು ಇನ್ನೂ ಮುಗಿದಿರಲಿಲ್ಲ. ಹೊತ್ತು ಹೋಗಲು ಈಚೀಚೆಗೆ ರುಕ್ಕಿಣಿಯು ತೆಂಗಿನ ಗರಿಗಳ ತಾರಾಳೆ ಹೆಣೆಯುವುದರಲ್ಲಿ ಕಾಲ ಕಳೆಯುವಳು... ತಾನೂ - ಹೆರೆಯುವೆನೆಂದೂ ಸರಸಿಯೂ ಒಮ್ಮೊಮ್ಮೆ ರುಕ್ಕಿಣಿಯೊಡನೆ ಕೂರುವಳು. ಕೊಂಚ ಸಮಯ ಹೆಣೆಯಲು ಪ್ರಯತ್ನಿಸಿ, 'ಧೂ-ನನ್ನ ಕೈಲಿ ಆಗೋಲಮ್ಮ' ಎಂದು ಎದ್ದು ಹೋಗುತ್ತಿದ್ದೂದೂ ಉಂಟು. ಅದೇನೊ ಈ ರಾತ್ರಿ ಅವಳಿಗೆ ಹೆಚ್ಚಿಗೆ ಆಸಕ್ತಿಯುಂಟಾಗಿ ಸ್ವಲ್ಪ ಹೆಚ್ಚು ಕಾಲ ತಾರಾಳೆಯಲ್ಲಿ ಕೈಯಾಡಿಸಿದ್ದಳು. ಆದರೆ ಎಷ್ಟು ವಿಧವಾಗಿ ತೋರಿಸಿಕೊಟ್ಟರೂ ಸರಸಿಗೆ ಹಣೆಗೆ ಕ್ರಮ