ಪುಟ:ವೈಶಾಖ.pdf/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೭೬ ವೈಶಾಖ ಬಿದ್ದು ಒದ್ದಾಡುತ್ತಿದ್ದುದು, ರುಕ್ಕಿಣಿಯ ಒಡಲಿಗೆ ಉರಿಯುವ ಕೊಳ್ಳಿಯನ್ನೆ ಇಟ್ಟಂತಾಗಿತ್ತು... 'ಲಲ ಅನ್ನೋ ಅತ್ತಿಲ್ಲ, ತಗಿ ಬಿಗಿ ಮಾಡೊ ಗಂಡ ಮೊದ್ದೆ ಇಲ್ಲ'- ಇಂಗೆಲ್ಲ ನೆನ್ನೆ ಸಂದೆ ಕೆರೆ ತಾವು ನಿಮ್ಮ ಇಸ್ಯಗಿ ಊರವಸಿ ಎಂಗಸ್ತು ಮಾತಾಡಿಕತ್ತಿದ್ರು ಅಮ್ಮಾರೆ ಎಂದು ತಮ್ಮೊಳು ಸೊಸಿಯ ಬೆಳಿಗ್ಗೆ ಹಾಲು ಕರೆಯುವಾಗ ವರದಿ ಮಾಡಿತ್ತು... ಸರಸಿಯನ್ನು ಎತ್ತಿ, ಮಲಗುವ ಕೋಣೆಗೆ ಹೋಗಿ ಅವಳನ್ನಲ್ಲಿ ಮಲಗಿಸಿ, ತಾನೂ ಹಾಸಿಗೆಯ ಮೇಲೆ ಶರೀರ ಚೆಲ್ಲಿ ಹೊರಳಾಡಿದಳು. ಕೃಷ್ಣಶಾಸ್ತ್ರಿಗಳೂ ತಮ್ಮ ಪೂಜೆ ಪುನಸ್ಕಾರ ಮುಗಿಸಿ, ಹಜಾರದ ಮೂಲೆಯ ತಮ್ಮ ಮಾಮೂಲು ಜಾಗದಲ್ಲಿ ಮಲಗಿ ಆಗಲೆ ಗೊರಕೆ ತೆಗೆದಿದ್ದರು... ರುಕ್ಕಿಣಿಯ ಒಡಲಾಳದಲ್ಲಿ ಇಷ್ಟು ದಿನವೂ ತೆಕ್ಕೆಹಾಗಿ ಮಲಗಿ ಸುಪ್ತವಾಗಿದ್ದ ಸಮಸ್ಯೆ ಥಟ್ಟನೆ ಮೇಲೆದ್ದು ಬಂದಿತು: ನಾನು ಯಾರಿಗೆ ಬಸಿರಾಗಿದ್ದೇನೆ?- ನನ್ನ ಮಾವಯ್ಯನಿಗೆ, ಲಕ್ಕನಿಗೊ?... ಒಂದು ಮುಟ್ಟಿನಿಂದ ಇನ್ನೊಂದು ಮುಟ್ಟಿನ ಒಳಗೆ ಇಬ್ಬರು ಪುರುಷರು ಪ್ರವೇಸ ನಡೆದಿದೆ... ಇವರಿಬ್ಬರಲ್ಲಿ, ಇದು ಯಾರಿಂದ ಉಂಟಾದ ಬಸಿರು?- ಇದು ಕೇವಲ ದೈವಕ್ಕೆ ಮಾತ್ರ ತಿಳಿದಿರಬೇಕು... ಈಗ ನಾನೇನು ಮಾಡಲಿ?- ಬೇಡದ ಈ ಗರ್ಭವನ್ನು ಕಳೆದುಕೊಳ್ಳಲೂ ಜನ ನನಗೆ ಅವಕಾಶ ಕೊಡಲಿಲ್ಲ ಎಂದು ಎಣ್ಣೆಯಲ್ಲಿ ಬಿದ್ದ ನೋಣವಾಗಿ ಚಿಂತಿಸುತ್ತಿದ್ದಳು. ಒಂದು ಸಂಜೆ ತೋಟದ ಕೋಳದಲ್ಲಿ ಬಟ್ಟೆಯೊಗೆದು ಮಡಿ ಕುಕ್ಕೆಯಲ್ಲಿಟ್ಟು ರುಕ್ಕಿಣಿಯ ಮಾರ್ಗದಲ್ಲಿ ತರುತ್ತಿದ್ದಾಗ ಆಗ ಮಾರಿಗುಡಿ ಅಣ್ಣನೀರು ಭರ್ತಿ ಕುಡಿದು ಬಂದಿದ್ದವರು ಈಚಲು ಗುತ್ತಿಯೊಂದರ ಬಳಿ ಬೀಡಿ ಸೇದುತ್ತ ಕುಳಿತು ಸುಧಾರಿಸಿಕೊಳ್ಳುತ್ತಿದ್ದರು. ಒಬ್ಬಳೇ ಒಂಟಿಯಾಗಿ ಬರುತ್ತಿದ್ದ ರುಕ್ಕಿಣಿ ಅವರ ಕಣ್ಣಿಗೆ ಬಿದ್ದಳು. ಮಾರ್ಗದಲ್ಲಿ ಒಂದು ನರಪಿಳ್ಳೆ ಕಾಣುತ್ತಿರಲಿಲ್ಲ. ಕುಡಿದು ಅಮಲಿನಲ್ಲಿ ಒಂಟಿ ಹೆಣ್ಣನ್ನು ಕಂಡು ರಣಹದ್ದುಗಳಂತೆ ಅವರು ಎದ್ದು ಬಂದು ಅವಳನ್ನು ಅಡ್ಡಗಟ್ಟಿದರು. ಬೆದರಿದ ಹುಲ್ಲೆಯಾಗಿ, ಕಂಪಿಸುತ್ತ ರುಕ್ಕಿಣಿ 'ಅಮ್ಮಾ...' ಎಂದು ಚೀರಿದಳು. ಅವಳ ಹುಯಿಲು ಮುಗಿಲನ್ನೇ ಮುಟ್ಟಿತ್ತು. ಅಷ್ಟರಲ್ಲಿ, “ಯಾರೋ ಅದು- ಸುವರ್‌ಗಳ?... ಬಂದೆ... ಬಂದೆ... “ ಎಂಬ ಕೂಗನ್ನು ಕೇಳಿ, ಗುರುಮಲ್ಲು “ಕೊಪ್ಪಲು ಪೈಲ್ವಾನ್ ಗೋಸ್ ಸಾಬರ ದನಿಯಂಗದೆ... “ ಎಂದು ಕಳವಳಿಸಿದ.