ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೭೭ ಐವರು ಅಣ್ಣಂದಿರೂ ತಿರುಗಿ ನೋಡಿದರು... ಸಂಶಯವೇ ಇಲ್ಲ... ದರುಮನಳ್ಳಿ ದಿಕ್ಕಿನಿಂದ ಇವರತ್ತಲೆ ದೊಣ್ಣೆ ಹಿಡಿದು ಓಡಿಬರುತ್ತಿರುವವರು ಗೋಸು ಸಾಬರೆ?... “ಅವರು ಗೋಸು ಸಾಬೈ ಕನರ್ಲ. ಅವರ ಪೇಟ, ಚೋಳ ನ್ಯಾಡಿದ್ರೆ ಗ್ವತ್ತಾಗಕ್ಕಿಲ್ವ?” ಎಂದ ರುದ್ರ “ಸರಿ. ಇನ್ನೊಬ್ಬ ಯಾರ?” ಎಂದು ಪ್ರಶ್ನೆಯನ್ನು ಗಾಳಿಗೆ ಎಸೆದ. - “ಕೊಪಲ ಕರಿಯಪನಂಗೆ ಕಾಣಿಕ್ಕಿಲ್ಲ...” ಎಂದವನು ಬೈಲಿಗರಂಗ, “ಇನ್ನು ಇಲ್ಲಿ ನಿಲ್ಲೋದ ಚೆಂದಿಲ್ಲ. ನಡೀರ” ಎಂದು ಹೇಳುತ್ತಿರುವಂತೆ, ಬೈಗಿನ ಮಸುಕಿನಲ್ಲಿ ಅವರೆಲ್ಲರೂ ಪಕ್ಕ ಮಳೆಯೊಳಗೆ ಜಾರಿ ಮರೆಯಾದರು. ಗೋಸು ಸಾಬರೂ ಕರಿಯಪ್ಪನೂ ಬರುವ ವೇಳಗೆ ರುಕ್ಕಿಣಿಯು ನೆಲಕ್ಕೆ ಕುಸಿದಿದ್ದಳು. ಗೋಸರು ಸಾಬರು ಬಂದವರೆ, “ಓ, ಮೂಲೆಹಟ್ಟಿ ರುಕ್ಕಿಣವ್ವು... ನೀನಾ ಅಮ್ಮಣ್ಣಿ?... ಅದ್ಯಾರು ಅಂಗೆ ನಿನ್ನ ಅಡ್ಡಾಕಿದ್ದೋರು?” ಎಂದು ಕೇಳಿದರು. ರುಕ್ಕಿಣಿ ಪಕ್ಕದಲ್ಲೇ ಇದ್ದ ಮಾಸತಕಲ್ಲಿನ ಆಸರೆಯಿಂದ ಮಡಿಕುಕ್ಕೆಯನ್ನು ಎತ್ತಿ ನಿಂತು, ನಡೆದುದನ್ನು ಅಳುತ್ತಳುತ್ತ ಚುಟಕದಲ್ಲಿ ಹೇಳಿ ಮುಗಿಸಿದಳು. ಗೋಸು ಸಾಬರು, “ಇನ್ನು ಮ್ಯಾಗೆ ಹಿಂಗಲ್ಲ ಒಂಟಿಯಾಗಿ ಬರಬ್ಯಾಡಿ, ಈಚೀಚೆ ನಿಮೂರು ಪೂರಾ ಕೆಟ್ಟೋಗೈತೆ. ಬಂದರೂವೆ, ಹೊತ್ತು ಇನ್ನೂವ ಅಲ್ಲಿರೋವಾಗ್ಲ. ನಿಮ್ಮ ತ್ವಾಟ ಬುಟ್ಟಿ ಹೊಂಟುಬುಡಿ” ಎಂದು ಪಡುವಣ ಬೆಟ್ಟದ ಸಾಲಿನ ಮೇಗಡೆ ಅಷ್ಟು ದೂರಕ್ಕೆ ಕೈಯೆತ್ತಿ ತೋರುತ್ತ, ಬುದ್ಧಿವಾದ ಹೇಳಿದರು. “ಮಾವನವರು ಇನ್ನೂ ತೋಟದಲ್ಲಿ ಇದ್ದರು. ನಿನ್ನ ಹಿಂದೆಯೇ ಬರೇನೆ, ನಡಿ- ಅಂದರು. ಆ ಭರವಸೆಯನ್ನು ನಂಬಿಯೇ ಹೊರಟೆ. ಆದರೆ ಅವರ ಸುಳಿವೇ ಇಲ್ಲ. ಅವರು ತೋಟ ಬಿಟ್ಟು ಹೊರಡೋಕೆ ಯಾಕಿಷ್ಟು ವೇಳೆಯಾಯ್ಕೆ ನನಗೆ ತಿಳಿಯದು” ಎಂದು ರುಕ್ಕಿಣಿ ವಿವರಿಸುತ್ತಿರುವಂತೆ, “ಅದೊ, ಅದೋ- ಅಯ್ಯನೋರು ಬಾ ಇರೋವಂಗದೆ...” ಎಂದ ಕೊಪ್ಪಲು ಕರಿಯಪ. ಗೋಸು ಸಾಬರು ಆ ದಿಕ್ಕಿನಲ್ಲಿ ನೋಡಿ, “ಹೌದೌದೂ, ಸಾಸ್ತಿಗಳೇ- ಅದ್ರೆ ಅನ್ಮಾನ ಎಲೈತೆ?... ಅವರು ಕಾಲು ಎತ್ತಾಕಂಡಿ ಬತ್ತಾ ಇರೋ ವರಿಸೇಲೆ ಹೇಳಬೌದು, ಇದು ಅವರೇಯ- ಬ್ಯಾರೆ