ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೭೮ ವೈಶಾಖ ಇನ್ಯಾರೂ ಅಲ್ಲಾಂತ” ಎಂದು ದಾಡಿಯನ್ನು ನೀವಿದರು. ಸ್ವಲ್ಪ ಹೊತ್ತಿನಲ್ಲಿ ಕೃಷ್ಣಶಾಸ್ತ್ರಿಗಳು ಇವರುಗಳನ್ನು ಕೂಡಿದರು. ಗೋಸು ಸಾಬರು ನಡೆದುದನ್ನು ವಿವರಸಿದಾಗ ಶಾಸ್ತ್ರಿಗಳ ಎದೆ ಝಲ್ಲೆಂದಿತು. “ನಾನೂ ಇವರ ಹಿಂದೆಯೇ ಹೊರಟೆ. ನಮ್ಮ ತೋಟದ ಬಾಗಿಲಿನಲ್ಲಿ ಒಂದು ಭಾರಿ ಕಾಳಿಂಗಸರ್ಪ ಅಡ್ಡ ಆಯ್ತು. ಹಾಗೆ ಹಾವು ಅಡ್ಡಬಂದಾಗ ಮುಂದೆ ಹೋದರೆ ಕಂಟಕವೆಂದು ತಿಳಿದವರು ಹೇಳ್ತಾರೆ. ಆದ್ದರಿಂದ ಪುನಃ ತೋಟದೊಳಕ್ಕೆ ಹೋಗಿ, ಕೊಂಚ ವೇಳೆ ಅಲ್ಲೇ ಕುಳಿತಿದ್ದ. ಆ ಕಾರಣದಿಂದಲೆ ಬರೋದು ತಡವಾಯ್ತು. ಅಷ್ಟರಲ್ಲಿ ಈ ಪೋಲಿ ಪಟಾಲಂ...” ಎನ್ನುತ್ತಿರುವಂತೆ, ಗೋಸು ಸಾಬರು ಹಣೆಹಣೆ ಚೆಚ್ಚಿಕೊಳ್ಳುತ್ತ, - “ನಿಮ್ಮದು ಬ್ರಾಂಬರು ಒಳ್ಳೆ ಕತೆ, ಸ್ವಾಮಿ... ಕುಂತರೆ ಸಾಸ್ತ್ರ, ನಿಂತರೆ ಸಾಸ್ತ” ಎಂದು ನಗೆಯಾಡಿ, “ಇನ್ನುಮ್ಯಾಗೆ ಈ ಅಮ್ಮಣ್ಣಿಯೋರ ಒಬ್ಬೊಬ್ಬರೆ ಹಿಂಗೆ ಕಳಿಸಬ್ಯಾಡಿ, ಕಾಲ ಪೂರಾ ನಾಜೂಕಾಗೋಯ್ತು. ಮೊಲಾನೆ ಹುಲಿನ ಅಟ್ಟಿಸಿಕಂಡೋಗೊ ಕಾಲ ಬಂದುಬುಟ್ಟಂಗದೆ... ಎಚ್ಚರಿಕೆಯಿಂದ ಇರಬೇಕು, ಸ್ವಾಮಿ, ನಾ ಬರೀನಿ” ಎಂದು ಗೋಸು ಸಾಬರು ಹೊರಟಂತೆ, ಕೃಷ್ಣಶಾಸ್ತಿಗಳು “ನಿಮ್ಮಿಂದ ತುಂಬ ಉಪಕಾರವಾಯ್ತು, ಗೊಸು ಸಾಹೇಬ್ರೆ... ಈಗ ಎತ್ತ ಕಡೆ ಪಯಣ?”- ಶಾಸಿಗಳು ಗೊತ್ತಿದ್ದೂ ಯ೦ತ್ರಿಕವಾಗಿ ಕೇಳಿದ ಪ್ರಶ್ನೆ. “ಈ ಹೊನ್ನಲ್ಲಿ ನಾನು ಬ್ಯಾರೆ ಇನ್ನೆಲ್ಲಿಗೆ ಹೋಗ್ಲಿ, ಸಾಮಿ...ಸ ಗೊತ್ತೆ ಐತಲ್ಲ ನಮ್ಮ ರಾಚನ ಕಾಪಿಕ್ತಬು- ಅಲ್ಲೀಗೇನೆ...” ಎಂದಾಗ, ಅಲ್ಲೊಂದು ಇಲ್ಲೊಂದು ಬಿಳಿ ಕೂದಲು ಇಣುಕುತ್ತಿರುವ ಗೋಸು ಸಾಬರ ದಾಡಿಯೂ ನಕ್ಕಂತಾಯಿತು, ರುಕ್ಕಿಣಿಗೆ! ಅಗಲವಾದ ಅವರ ಮುಖದಲ್ಲಿ ತನ್ನ ಭಾಗದ ದೈವವನ್ನೇ ಕಂಡಳು. ಸಲಾಂ ಸಾಬ್, ಎಂದು ವಂದನೆ ಸಲ್ಲಿಸಿ, ಗೋಸು ಸಾಬರು ಕರಿಯಪ್ಪನೊಡನೆ ತೆರಳಿದ ಬಳಿಕ ಕೃಷ್ಣಶಾಸ್ತ್ರಿಗಳು, ಯಾವ ಮಾತೂ ಇಲ್ಲದೆ ಮೌನವಾಗಿ ಊರಿನತ್ತ ಹೆಜ್ಜೆಯಿಟ್ಟರು. ರುಕ್ಕಿಣಿಯೂ ಮಡಿಕುಕ್ಕೆಯನ್ನು ಇರುಕಿ ಅವರನ್ನು ಮೆಲ್ಲಮೆಲ್ಲನೆ ಹಿಂಬಾಲಿಸಿದಳು. ಶಾಸ್ತ್ರಿಗಳೂ ಗೊದಮೊಟ್ಟೆಗಳ ಕಟ್ಟನ್ನು ಹೊತ್ತು ನಿಧಾನವಾಗಿಯೇ ನಡೆಯುತ್ತಿದ್ದರು. ಅವರಿಗೆ ತೀರ ಸಮೀಪದಲ್ಲಿ ಹಿಂದಿನಿಂದ ಬರುತ್ತಿದ್ದ ರುಕ್ಕಿಣಿಗೆ ಅವರ ವಿಶಾಲವಾದ ಬೆನ್ನಿನ ಭಾಗ ಹೊರತು ಮುಂದಿನ ದೃಶ್ಯವಾವುದೂ ಅಷ್ಟಾಗಿ ಕಾಣುತ್ತಿರಲಿಲ್ಲ. ಆ ಕಾರಣಕ್ಕೋ ಅಥವಾ ತಾನು ಇನ್ನೇನು ಸ್ವಲ್ಪದರಲ್ಲಿ ಅನುಭರಿಸುವುದರಲ್ಲಿದ್ದ ಘೋರ ದುರಂತವನ್ನು