________________
ಸಮಗ್ರ ಕಾದಂಬರಿಗಳು ೨೭೯ ಸರಿಸಿಯೋ, ಅಂತೂ ಅವಳ ಆಲೋಚನೆ ಶಾಸ್ತಿಗಳನ್ನು ಕುರಿತೇ ಉರುಳಾಡಿತು... - ಬೇರೆ ವಿಷಯಗಳನ್ನೆಲ್ಲ ಈ ನನ್ನ ಮಾವನವರು ಎಂಥ ಸದ್ಗುಣಿ. ಆದರೆ ಒಂದು ಕೆಟ್ಟ ಮೂಹೂರ್ತದಲ್ಲಿ ಅಲಪಕ್ಕೆ ಆಸೆಪಟ್ಟು ತಮ್ಮ ಪುಣ್ಯಕ್ಷಯ ಮಾಡಿಕೊಂಡದ್ದಲ್ಲದೆ ನನ್ನನ್ನೂ ಪ್ರಚೋದಿಸಿ, ಆ ಪ್ರಚೋದನೆಯಿಂದ ನಾನು ತಮ್ಮಂತೆಯೇ ತಪ್ಪು ಮಾಡಲು ಅವಕಾಶವನ್ನು ಕಲ್ಪಸಿ, ಇನ್ನು ಎಂದೆಂದಿಗೂ ಹಿಂದಿರುಗಲಾಗದ ಪ್ರಪಾತಕ್ಕೆ ನನ್ನನ್ನು ತಳ್ಳಿದರಲ್ಲ?... ಆದರೂ ಅಚ್ಚರಿಯ ಸಮಗತಿಯೆಂದರೆ: ಅವಳ ಆಂತರದಲ್ಲಿ ಮಾವಯ್ಯ ತನಗೆ ಎಸಗಿದ ಅಪರಾದ ಈಗೀಗ ಗೌಣವಾಗಿ, ಲಕ್ಕನ ವಿಚಾರದಲ್ಲಿ ತಾನು ಮಡಿದ ತಪ್ಪೆ ಮಹತ್ತರಭೂತವಾಗಿ ಅವಳನ್ನು ಕಾಡುತ್ತಿದ್ದುದು!... ಲಕ್ಕನನ್ನೇ ತಪ್ಪಿತಸ್ಥನನ್ನಾಗಿ ಮಾಡಿದ ಊರಿನ ಪ್ರಮುಖರು ಅವನನ್ನು ಪಂಚಾಯಿತಿ ಕಟ್ಟೆಗೆ ಕರೆದಿರುವರಾದರೂ, ಊರಿನ ಒಬ್ಬಿಬ್ಬರಾದರೂ ಮಾವಯ್ಯನ ಮತ್ತು ತನ್ನ ಸಂಬಂಧ ಕುರಿತು ಶಂಕಿಸದೆ ಇರಲಿಲ್ಲ... “ಯಾವ ಶಾಪವೋ ಅಥವಾ ಈ ಶಾಸ್ತಿ ಪೂರ್ವಜನ್ಮದಲ್ಲಿ ಮಾಡಿದ ಪಾಪವೋ- ಕಯ್ಯಗೆ ಬಂದ ಮಗನನ್ನು ಕಳೆದುಕೊಂಡ. ಮನೆಯಲ್ಲಿ ಬೇಯಿಸಲಿಕ್ಕೆ ಇಲ್ಲವೆಂದು ನೆಪಹೂಡಿ, ವಿಧವೆ ಸೊಸೆಯನ್ನು ಮನೆಯಲ್ಲಿ ಇರಿಸಿಕೊಂಡ. ಚಿಕ್ಕ ಪ್ರಾಯದ ಹೆಂಗಸು, ಕೇಶಮುಂಡನ ಬೇರೆ ಮಾಡಿಸಿಲ್ಲ...” ಎಂದು ಕೆಲವರು ಮಾತಾಡಿಕೊಂಡರೆ, ಲಕ್ಷಮ್ಮ ನಂಥವರು “ರಾತ್ರಿ ಊಟ ಮುಗಿದ ನಂತರ ಹೂವಿನ ಮಾಲೆ ಕಟ್ಟಿ ಮುಡಿದುಕೊಳ್ಳುತ್ತಂತೆ!- ಮೊನ್ನೆ ಆಚೆ ಬಾವಿ ಮನೆ ಶಿಂಗ್ರಮ್ಮ ನೋರೆ ಯಾಕೊ ರುಕ್ಕಿಣಿಯ ಮನೆಗೆ ಹೋಗಿದ್ದಾಗ, ಅವಳು ಮಲ್ಲಿಗೆದಂಡೆ ಕಟ್ಟುತ್ತಿದ್ದುದನ್ನ ತಾವೇ ಖುದ್ದಾಗಿ ನೋಡಿದರಂತೆ!- ಯಾಕೆ ರುಕ್ಕು, ಈ ಮಲ್ಲಿಗೆದಂಡೆ ಕಟ್ಟಿದೀಯೆ? ಕೇಳಿದ್ದಕ್ಕೆ ನಾಳೆ ದೇವರ ಪೂಜೆಗೇರಿ, ಅಂದಳಂತೆ! ಯಾವ ದೇವರ ಪೂಜೇನೂ, ಏನೋಮ್ಮ!...” ಕುಹಕವಾಡಿದ್ದು ರುಕ್ಕಿಣಿಯನ್ನು ಮುಟ್ಟಿತ್ತು. ಇಂಥ ಕಟುನಿಂದೆಯನ್ನು ಯಾರೂ ಪ್ರಕಟವಾಗಿ ಆಡುತ್ತಿರಲಿಲ್ಲ. ಎಲ್ಲೋ ಕೆಲವು ಬ್ರಾಹ್ಮಣ ಕೋಣೆಗಳ ಗೋಪ್ಯದಲ್ಲಿ ಬಾವಿಯಲ್ಲಿ ನೀರು ಸೇದುವಾಗಿನ ರಹಸ್ಯ ಸಂಬಂಧಗಳಲ್ಲಿ ಕೇವಲ ಒಬ್ಬಿಬ್ಬರ ಮಾತುಕತೆಯಾಗಿ ಪುಟಿದಿತ್ತು, ಅಷ್ಟೆ... ಹಿಂದೆ, ಕೆಲವರು ಬ್ರಾಹ್ಮಣ ಮಹಿಳೆಯರು ಇದೇ ರೀತಿ ಆಪಾದಿಸಿ, ಆ ನಿಂದೆ ತನ್ನ ಕಿವಿಗೂ ತಲುಪಿದಾಗ, ರುಕ್ಕಿಣಿಯೂ ಸಿಡಿಮಿಡಿಗೊಂಡುದುಂಟು. ಆದರೆ ಈಗ ಆಪಾದನೆ ಮಾಡಿವರು ಅಪ್ಪಿತಪ್ಪಿ ಮಾಡುತ್ತಿದ್ದರೂ ಅದರಲ್ಲಿ