ಪುಟ:ವೈಶಾಖ.pdf/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೮೦ ವೈಶಾಖ ನಿಜಾಂಶವಿಲ್ಲ, ಎಂದು ರುಕ್ಕಿಣಿಯೂ ಯಾವ ಧೈಯ್ಯದಲ್ಲಿ ತಳ್ಳಿ ಹಾಕಬಲ್ಲಳು? ಊರು ಇನ್ನೇನು ಸಮೀಪಿಸುತ್ತಿತ್ತು. ಯಾವುದೋ ಹಳ್ಳಿಯ ಪೌರೋಹಿತ್ಯದ ನಿಮಿತ್ತವಾಗಿ ತೆರಳಿದ್ದ ವೆಂಕಣ್ಣ ಜೋಯಿಸರು ಊರು ಪಕ್ಕದ ಬಡಗಲಿನ ಹೊಲದ ಮೇಲೆ ಹಾದು ಬರುತ್ತಿದ್ದವರು ಗರುಡಪಕ್ಷಿಯೊಂದು ಕೀಕೀ ಎಂದು ಚೀರುತ್ತ ತಮ್ಮೆದುರಿನ ಎತ್ತರದಲ್ಲಿ ಹಾರುತ್ತಿರುವುದನ್ನು ಗಮನಿಸಿ, “ಕುಂಕುಮಾಂಕಿತ ವರ್ಣಾಯ... ಇತ್ಯಾದಿ ಶ್ಲೋಕವನ್ನು ಹೇಳುತ್ತ, ವಿಷ್ಣುವಾಹನ ನಾದ ಗರುಡನಿಗೆ ಕೈಬೆರಳುಗಳ ಉಗುರಗಳನ್ನು ತೋರಿಸಬಾರದೆಂದು ಎರಡು ಕೈಗಳ ಬೆರಳುಗಳನ್ನೂ ಮಡಿಸಿ, ಬಿಳಿ ಪಂಚೆಯಲ್ಲಿ ಕಟ್ಟಿದ್ದ ಗಂಟನ್ನು ತಲೆಯ ಮೇಲೆ ಸಮತೋಲನವಾಗಿಡಲು ಪ್ರಯತ್ನಸುತ್ತ ಮಾರ್ಗಕ್ಕಿಳಿದರು. ಅವರನ್ನು ನೋಡಿ ಕೃಷ್ಣಶಾಸ್ತ್ರಿಗಳು “ಎಲ್ಲಿಂದ ಬರೀರೋದು ಜೋಯಿಸರು? ಗಂಟು ಬಲವಾಗಿರೋ ಹಾಗಿದೆಯಲ್ಲ?...” ಎಂದು ಪ್ರಾಸಂಗಿಕವಾಗಿ ಕೇಳಿದ್ದರು. ಅವರಿಗೆ ಜೋಯಿಸರೊಡನೆ ಸಂಭಾಷಣೆಯಲ್ಲಿ ತೊಡಗಬೇಕೆಂಬ ಇಚ್ಛೆಯಿಲ್ಲದಿದ್ದರೂ ಎದುರಿಗೆ ಪ್ರತ್ಯಕ್ಷವಾದಾಗ ಮಾತನಾಡಿಸಲೇಬೇಕಾದ ಲೌಕಿಕ ಸೌಜ್ಯವನ್ನು ಮಾತ್ರ ಪ್ರಕಟಿಸಿದ್ದರು. - “ಗೌಜಲಳ್ಳಿ ಮುಕುಂದಯ್ಯನೋರ ತಾಯಿಯ ಶ್ರಾದ್ದ. ಅದನ್ನು ಮುಗಿಸಿ ನಡೇದೇ ಬತ್ತಾ ಇದ್ದೇನೆ. ಮುಕುಂದಯ್ಯನವರೇನೊ ಗಾಡಿಯಲ್ಲಿ ಕಳಿಸುತ್ತೇನೆ ಎಂದರು. ಆದರೆ ಅವರ ಮಗ ಗೊಬ್ಬರ ಹೊಡೆಯಬೇಕಾಗಿದೆ ಎಂದು ಹೇಳಿದ್ದರಿಂದ ನಾನು ನಡೆದೇ ಬರಬೇಕಾಯಿತು...” ಎಂದು ಗಂಟನ್ನು ತಲೆಯ ಮೇಲಿನಿಂದ ಹೆಗಲಿಗೆ ವರ್ಗಾಯಿಸಿಕೊಳ್ಳುತ್ತ,” ಇದ್ಯಾವ ಮಹಾಗಂಟು ಅಂದಿರಿ, ಶಾಸ್ತಿಗಳೆ, ನೀವು ಕಂಡ ಹಾಗೆ, ನವನಾಗರಿಕ ಕಾಲ. ಎಲ್ಲವೂ ಸೂಕ್ಷ ಕ್ಕೆ ಬಂದು ಹೊಯ್ತು, ಬೈ ಜನ ಹೇಳ್ತಾರಲ್ಲ – ಚುಟುಕಿ ಚಪ್ಪರ, ಎಂಟು ಕಾಲು ಬೇಟೆ, ಅಂತ-ಹಾಗೆ... ಈಗೊಂದು ಹತ್ತು ವರ್ಷದ ಹಿಂದೆ ಶ್ರಾದ್ಧ ಮಾಡಿಸಲಿಕ್ಕೆ ಹೋದರೆ, ಒಬ್ಬ ಆಳು ಹೊತ್ತು ತರುವ ಸಾಮರ್ಥ್ಯ ಯಾರಿಗಿತ್ತು?... ಏನೊ, ನಾವೂನು ಕಾಲಕ್ಕೆ ತಕ್ಕ ರೀತಿ ಗೆಜ್ಜೆ ಕಟ್ಟುವುದನ್ನೂ ಕಲಿಯಬೇಕು. ಏನಂತೀರಿ?...” ಶಾಸ್ತ್ರಿಗಳು ಬಲಾತ್ಕಾರದ ನಗೆ ತಂದು ನಕ್ಕರು. ಮುಂದೆ ಚಕಾರವೆತ್ತಲಿಲ್ಲ. ಅಲ್ಲಿಂದ ಮುಂದೆ ಊರಿನ ದಿಡ್ಡಿಬಾಗಿಲಲ್ಲಿ ಅಶ್ವತ್ಥಕಟ್ಟೆ ಸಿಕ್ಕಿತು. ಊರಿನೊಳಗೆ ಬಂದಾಗ, ಯಾವಾಗಲಾದರೊಮ್ಮೆ, ಎಲ್ಲಿಂದಲೋ ಹಠಾತ್ತನೆ ಬಂದು ಒಂದೆರಡು ಗಂಟೆ ಅಥವಾ ಒಂದೆರಡು ದಿನ ಊರಿನಲ್ಲಿ ಉಳಿದು