ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೮೨ ವೈಶಾಖ ತಾನ ಜಯಶೀಲನಾದೆನೆಂದು ಗೋಸು ಸಾಬರೂ, ಇಲ್ಲ ತಾನೇ ಗೆದ್ದೆದೆಂದು ಕರಿಯಪ್ಪನೂ ವಾಗ್ಯುದ್ದಕ್ಕೆ ಇಳಿದಿದ್ದರು. ಕುಡಿತದ ಅಮಲಿನಲ್ಲಿ ಮಾತು ಎಲ್ಲಿಂದೆಲ್ಲಿಗೋ ಹೋಗಿತ್ತು. “ನೀವು ಮಟಮಟ ಮದ್ಯಾನ್ನ ಕುಂಪಣಿಯೋಗ್ಗೆ ರಾಜ್ಯ ವಪ್ಪಿಸಿದೋರಲ್ವ ಸಾಬರೆ?- ಅದೇಟು ನಿಸೂರು ಕ್ವಚ್ಚರಿ. ಸಮ್ಮಿರಿ...” ಎಂದು ಕರಿಯಪ್ಪ, ಟಿನ್ನೂ ಸುಲ್ತಾನ ರಾಜ್ಯ ಕಳೆದುಕೊಂಡ ಸಂದರ್ಭವನ್ನ ಚುಚಿದ. ಗೋಸು ಸಾಬರ ಪಿತ್ತ ನೆತ್ತಿಗೇರಿತು. “ಏಯ್ ಕರಿಯಪ್ಪ-ನೀವು ವಕ್ಕಲಿಗರು, ಬೂದುಗುಂಬಳಕಾಯಿ ಬೇಲೀನಾಗ್ಗೆ ಶ್ರೀ ರಾಮಚದ್ರಂಗೆ ನಿಮ್ಮ ಹೆಡತೀರು ತಾಲೀನು ಮುಕ್ಕಸ ತಕ್ಕಡಿಗೆ ಆಕಿ, ತಪ್ಪಿಸಿದ್ದು ಮರೆತೋಯ್ತು ...?” ಕರಿಯಪ್ಪ, “ಇನ್ನೊಂದು ವೊಗೆ ಸರಾಸು ಆಕ್ರೀ” ಎಂದು ರಾಚನಿಗೆ ಹೇಳಿ, “ಸಾಹೇಬ್ರೇ, ಅದ್ಯಲ್ಲ ಬ್ಯಾಡ, ಅವತ್ತು ನಾ ಗೆದ್ದೆನೊ, ನೀವು ಗೆದ್ರೂ ಅನಾದು ಈಗ ಬ್ಯಾಡ. ಈಗ ಈ ರಾಚನ ಅಂಗಡೀನೆ ಆಖಾಡ ಮಾಡಿಕಳಾವ. ಯಾನಂತಿರಿ?” ಎನ್ನುತ್ತ ಮತ್ತೆ ರಾಚ ಕೊಟ್ಟ ಹೆಂಡವನ್ನು ಹೀರಿದ. ಅಂಗಡಿಯೊಳಗೆ ಕುಳಿತಿದ್ದ ಗಿರಾಕಿಗಳು ಗೋಸು ಸಾಬರು ಕರಿಯಪ್ಪನ ಸವಾಲಿಗೆ ಏನು ಜವಾಬು ಕೊಡುವರೋ ಎಂಬ ಕುತೂಹಲದಿಂದ ಗೋಸು ಸಾಬರ ಮುಖವನ್ನೆ ಕಾತರದಿಂದ ನೋಡುತ್ತಿದ್ದರು. ಗೋಸು ಸಾಬರು ಇನ್ನೊಂದು ಮೊಗೆ ತರಿಸಿ ಕುಡಿದು, “ಓ ಬೇಷಕ್ಕಾಗಿ, ನಾನೂ ತಯಾರ್ ಇದ್ದಿನಿ-“ ಎಂದು ಎದ್ದರು. ಸರಾಪಿನ ಮಹಿಮೆ ಅತಿಯಾಗಿ, ಅವರ ಕಾಲುಗಳು ಸವಾಧಿನ ತಪ್ಪಿದವು. ತೂರಾಡಿ ತೂರಾಡಿ ತುಪಕ್ಕನೆ ಕೆಳಗೆ ಬಿದ್ದರು. ಹೀಗೆಯೇ ಎದ್ದು ನಿಲ್ಲಲು ಪ್ರಯತ್ನಿಸಿದ ಕರಿಯಪ್ಪನೂ ಓಲಾಡುತ್ತ ಒಂದೆರಡು ಹೆಜ್ಜೆ ಮುಂದಿಟ್ಟು ಆಯ ತಪ್ಪಿ ಗೋಸು ಸಾಬರ ಪಕ್ಕದಲ್ಲೇ ಉರುಳಿಕೊಂಡನು. - ನೆರೆದಿದ್ದ ಗಿರಾಕಿಗಳಿಗೆ ಖುಷಿಯೋ ಖುಷಿ, ಕೇಕೆ ಹಾಕಿ, ಚಪ್ಪಾಳೆ ತಟ್ಟಿದರು. “ಇವತ್ತೀಗ ತಿಕೀಟೇ ಇಲ್ಲ ನಾಟಕ!” ಎಂದು ನಲಿದರು. ಸರಾಸು ಈ ದಿನ ನಿತ್ಯಕ್ಕಿಂತ ಅಧಿಕವಾಗಿ ಬಿಕರಿಯಾದ್ದು ರಾಚನಿಗೇನೊ ಸಂತೋಷ ತಂದಿತ್ತು. ಆದರೆ ಏಳಲು ಪ್ರಯತ್ನಿಸಿ ನೆಲಕ್ಕುರುಳಿದ ಗೋಸು ಸಾಬರಿಗೂ ಕರಿಯಪ್ಪನಿಗೂ ಅನಂತರದ ಕೆಲವೇ ನಿಮಿಷಗಳಲ್ಲಿ ನಿದ್ರೆ ಹತ್ತಿತ್ತು.