ಪುಟ:ವೈಶಾಖ.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪ ವೈಶಾಖ ಲಕ್ಕ ಪೆಚ್ಚಾಗಿ ವಸಿ ದೂರಕೆ ಚಿಗಿದು ನಿಂತ. ಬೊಡ್ಡನೂವೆ ಅವನೊಂದಿಗೆ ಸರಿದು ನಾಲಿಗೆ ಇಳಿಬಿಟ್ಟು ಜೊಲ್ಲು ಸುರುಸ್ತ ನಿಂತುಗತ್ತು. ಆ ಗುಂಪಿಂದ ಯಾರೂ ಇನ್ನೊಂದು ಒಗಟು ಚಿಮ್ಮುಸಿದ್ರು. “ಗುಡುಗುಡು ಬಂತು, ಗೂಡಿನ ತುಂಬ ಮೊಟ್ಟೆ ಇತ್ತು...” ಸಾರಾ ಸಗಟಾಗಿ ಪರ್ತಯೊಬ್ಬರೂ “ಕೆಂಡ, ಕೆಂಡ” ಅಂತ ಕೂಗಿದ್ರು. “ಏಳದೇ ಇದ್ದೋರ ಮುಕುಳಿಗೆ ಚೂರೆ-ಈ ಒಂಟಿಗೇನಪ್ಪ ಅರ್ತ?” – ಇನ್ಯಾರೋ ಕೇಳ ಪ್ರಶ್ನೆ, ಗೊಗೊಲ್ ನಗಾಡಿದರು ಹೈಕಳು. ಕ್ವಾಟೆ ಬಾವಿಂದ ಚರಿಗೆ ಕೊಳದಪ್ಪಲೇಲಿ ನಿಒತ್ತು ತತ್ತಿದ್ದ ಎಂಗಸರ ಸೀರೆ ಸೆರಗ್ನ ತುದಿಂದ ಬಾಯ್ಕಚ್ಚಿ, ಒಬ್ಬರಿಗೊಬ್ಬರು ಕಣ್ಣು ಮಿಟುಕ್ಸಿ ನಗಾಡ್ರ ಮೋದರು. “ನಗಾಡೋದು ಇರಲಿ. ನನ್ನ ಒಂಟು ಒಡೀರಿ”- ಕೇಳು ಹೈದ. “ಗ್ವತ್ತಾಗನಿಲ್ಲ.” “ಅಯ್ಯೋ, ಇನ್ನು ಗ್ರತ್ತಾಗಿಲ್ಲ? - ಪ್ರಾಸೆ ಮೊಗುಚೊ ಕಯ್ಯ” “ಎಂಗೆ?”- ತಬ್ಬಿಬ್ಬಾಗಿ ಕೇಳೋ ಹೈಕಳು. “ದ್ವಾಸೆ ಏಳದೆ ಮೋದರೆ, ಅದರ ಅಡೀಕೆ ಅಕಕ್ಕಿಲ್ಲವ, ದ್ವಾಸೆ ಅಲ್ಲೆ.... ಅದೇಯ.” ಒಪ್ಪಿ, ತಲೆದೂಗಿ ಮುಂದಕ್ಕೆ ನಡೆದ ಲಕ್ಯ, ಒತ್ತ ತಿಂದ ಬಳಿಕ ಕಾಲಿಗೆ ತೊಡರಿಕ್ಟಳೆ ಮಾದ್ಯಾಗಿ ತುಸು ದೂರದಿಂದ್ದೆ ಇಂಬಾಲಿಸ್ತಿತ್ತು ಬೊಡ್ಡ. ಮಾರಿಗುಡಿ ವಳುಗೆ ಇಸ್ಪೀಟಾಟ ಜೋನ್ನಿಂದ ನಡೆದಿತ್ತು. ಇಸ್ಪೀಟೆಲೆ ಕಲುಸಿ ಸುತ್ತೂ ಗುಂಡಗೆ ಆಟಕ್ಕೆ ಕುಂತಿದ್ದ ಮಂದಿ ಮುಂಬೈ ಚಕಚಕ್ಕೆ ಎಲೆಗಳ ಒಂದೊಂದಾಗಿ ಎಸೀತ ಯಾರೋ ಒಬ್ಬ ರಾಡ್ವಾಗಿ ಹಾಡಿಕೊತ್ತಿದ್ದ: ಎಣ್ಣಿಗ ಪುಲ್ಲ, ಎಡತಿ ಒಲ್ಲ, ಯಾಕೆ ಒಲ್ಲ? ಸಿವನೆ ಬಲ್ಲ! ಲಕ್ಕ ತುಸ ತಡೆದು ನಿಂತು ಮಾರಿಗುಡಿ ತುಂಬ ತುಂಬಿದ್ದ ಬೀಡಿ, ಸಿಕರೋಟಿನ ವೊಗೆ, ಮ್ಯಾಡದೊಳೀಕೆ ಮ್ಯಾಡ ನುಗ್ಗಿ ತೆಕ್ಕೆ ಆಕ್ಕಂಡಂಗೆ ಜಗ್ಗಾಡಿ, ತೆವುಳ ತೆವುಳ ವೊರಕ್ಕೆ ಬಂದು, ಲಕ್ಕಕಣ್ಣು ಮೂಗ್ನೆಲ್ಲ ಮುತ್ತಿಗತ್ತು. ಈ ಮೊಗ್ಗೆ ಕುಡೀತ ಅದೆಂಗೆ ಮಾರಿಗುಡಿ ವಖಯಗೆ ಸೇರಿ, ಈ ಇಸಮು ಇಸ್ಪಟು ಆಡ್ತಾ ಇದ್ದಾರೋ! ಅಂತ ಲಕ್ಕ ತನ್ನಲ್ಲೆ ಜೋಜಿಗಪಡ್ತ ಇರೋನೊವೆ, ನಳುನ್ನಿಂದ