________________
೨೮೪ ವೈಶಾಖ ಉಪ್ಪೆಸರು ರಾಗಿ ಮುದ್ದೆಯ ಜೊತೆಗೆ ಬೇಯಿಸಿ ಒಗ್ಗರಣೆ ಹಾಕಿದ ಬೆರಕೆ ಸೊಪ್ಪನ್ನು ಅವರ ಮಡದಿಯರು ನೀಡುವಾಗ, ತೋಟಗಳಲ್ಲಿ ಸ್ನೇಹಿತರು ಕೂಡಿದಾಗ, ಮಧ್ಯಾಹ್ನದ ವೇಳೆ ಭೋಜನ ಮುಗಿಸಿ ಪಗಡೆಯಾಡುವಾಗ ಜಗಲಿಗಳಲ್ಲಿ ಹರಟೆಮಲ್ಲರು ಸೇರಿದಾಗ, ಜನ ಎಲ್ಲಿ ನಿಂತರೆ ಎಲ್ಲಿ ಕುಳಿತರೆ ಅಲ್ಲಿ, ದರುಮನಳ್ಳಿಯ ಎಲ್ಲ ಕೋಮಿನ ಜನರೂ ಬೆಳಗಿನಿಂದ ಬೈಗಿನವರೆಗೂ ಪ್ರಮುಖವಾಗಿ ಚರ್ಚಿಸುತ್ತಿದ್ದುದು ಇದೊಂದೇ ವಿಚಾರ! ಊರು ಈ ಚಿಂತೆಯಲೆ ಬೆಳಗನ್ನು ಬೇಯಿಸಿ, ಮಧ್ಯಾಹ್ನ ಕಂಡಿತು. ಮಧ್ಯಾಹ್ನದಲ್ಲಿ ಕುದಿದು ದಣಿದು ಸಂಜೆಗೆ ಕಾಲಿಟ್ಟಿತು. ಸಂಜೆಯ ಬಾಡಿ ಬಸವಳಿದು ರಾತ್ರಿಗೆ ಹೊರಳಿತು. ರಾತ್ರಿಯಾಗುತ್ತಲೂ ಹೆಣ್ಣು ಗಂಡು ಆದಿಯಾಗಿ ಸರ್ವರೂ ಬೇಗ ಬೇಗ ರಾತ್ರಿಯ ಊಟ ಮುಗಿಸಿದರು. ಉಂಡು ಕೈ ತೊಳೆಯುತ್ತಿರುವಂತೆಯೇ ಪಂಚಾಯಿತಿ ಕಟ್ಟೆಗೆ ಧಾವಿಸಿದರು. ನೆರೆಯೂರಿನ ಮಂದಿಯೂ ತಮ್ಮ ಮನೆಗಳಲ್ಲಿ ಊಟ ಮುಗಿಸಿ, ಇದೇ ಊರಿನ ನೆಂಟರ ಮನೆಗಳಲ್ಲಿ ಉಂಡು, ಪಂಚಾಯಿತಿ ಕಟ್ಟೆಯ ಎದುರಿಗಿನ ಮಾಳದಲ್ಲಿ ನೆರೆಯತೊಡಗಿದರು, ಚಾವಡಿಯ ಮುಂದಿನ ಎತ್ತರದ ವಿಶಾಲ ವೇದಿಕೆಯ ಮೇಲೆ ಮಂದಲಿಗೆ ಜಮಖಾನಗಳನ್ನು ಹಾಸಿ ಸ್ಥಳದ ಹಾಗೂ ಪರಸ್ಥಳದ ಯಜಮಾನರು ಕೂರಲು ವ್ಯವಸ್ಥೆ ಮಾಡಲಾಗಿತ್ತು. ಉಳಿದ ಜನ ಮಾಳದ ವಿಸ್ತಾರದಲ್ಲಿ, ಅಲ್ಲಲ್ಲಿ ಬಂದು ಕೂರುತ್ತಿದ್ದರು. ಕೆಲವರು ಗಣಗಲೆ ಮರದ ಕಲ್ಲುಕಟ್ಟೆಯ ಮೇಲೆ, ಇನ್ನು ಕೆಲವರು ಊರೊಟ್ಟಿನ ಬಸವೇಶ್ವರ ಗುಡಿಯ ರಿಪೇರಿಗೆಂದು ತಂದು ಎಲೆದಿದ್ದ ಮರದ ದಪ್ಪನೆಯ ಲಾಂಬಿಗಳ ಮೇಲೆ ಮತ್ತು ಉದ್ದನೆಯ ಕಲ್ಲುಚಪ್ಪಡಿಗಳ ಮೇಲೆ, ಅವರಲ್ಲಿ ಹೆಚ್ಚು ಉತ್ಸಾಹಭರಿತ ತರುಣರು ದೇವಗಣಗಲೆ ಮರದ ಕಲ್ಲುಕಟ್ಟೆಯ ಮೇಲೆ, ಇನ್ನು ಕೆಲವರು ಊರೊಟ್ಟಿನ ಬಸವೇಶ್ವರ ಗುಡಿಯ ರಿಪೇರಿಗೆಂದು ತಂದು ಎಳೆದಿದ್ದ ಮರದ ದಪ್ಪನೆಯ ಲಾಂಬಿಗಳ ಮೇಲೆ ಮತ್ತು ಉದ್ದನೆಯ ಕಲ್ಲುಚಪ್ಪಡಿಗಳ ಮೇಲೆ, ಅವರಲ್ಲಿ ಹೆಚ್ಚು ಉತ್ಸಾಹಭರಿತ ತರುಣರು ದೇವಗಣಗಲೆ ಮರದ ರೆಂಬೆಗಳ ಮೇಲೆ -ಹೀಗೆ ಎಲ್ಲಂದರಲ್ಲಿ, ಮಾಳದ ಮಧ್ಯೆ ಇದ್ದ ಅಳೆತ್ತರದ ಕಲ್ಲುಕಂಬವೊಂದನ್ನುಳಿದು [ಈ ಕಂಬಕ್ಕೆ ಹಿಂದೆ ಪಾಂಡವರು ಕುದುರೆ ಕಟ್ಟುತ್ತಿದ್ದರೆಂದು ಪ್ರತೀತಿ! ಇಂಥ ಕಂಬಗಳು ಈ ಮಾಳದಲ್ಲಿ ಅನೇಕವಾಗಿ ಇದ್ದುವಂತೆ. ಅವೆಲ್ಲ ಈಗ ಊರಿನ ಕೆಲವು ಪ್ರಮುಖರ ಮನೆಗಳಲ್ಲಿ ದನಕರು ಎಮ್ಮೆಗಳನ್ನು ಕಟ್ಟಲು ಉಪಯೋಗಿಸಲಾಗುತ್ತಿದೆ!] ಬೇರೆ ಎಲ್ಲ ಜಾಗಗಳಲ್ಲೂ ಆದಷ್ಟು ಬೇಗ ಹಿಡಿಯಲು ಜನ ಮುತ್ತುತ್ತಿದ್ದರು...