ಪುಟ:ವೈಶಾಖ.pdf/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೮೫ ಆ ಬೆಳಿಗ್ಗೆ ತಾನು ಎಂತಾ ಪೇಚಿಗೆ ಸಿಕ್ಕಾಕಂಡೆ ಅಂತ ಲಕ್ಕ ಒದ್ದಾಡ್ತಿದ್ದ. ಯಾವ ಕೇಮೆ ಮಾಡಕ್ಕೂ ಮನಸ್ಸಿಲ್ಲ. ಅವ್ವ ಸ್ವಲ್ಪ ಬೆಳುಗಿನ ತಂಗಳಾವ ತಿಂದೋನಂಗೆ ನೆಪ ಮಡಿ ಎದ್ದಿದ್ದ. ಅಮ್ಮ ರೊಟ್ಟಿ ಮುರುಕು ಮುಕ್ಕಾಲು ಪಾಲು ಬೊಡ್ಡನ ವೊಟ್ಟೆ ಸೇರಿತ್ತು. “ನೀ ಸುಮ್ಮೆ ತಿನ್ನಲಾ, ಅಪ್ಪಯ್ಯ, ನಿನ್ನ ಬೊಡ್ಡಂಗೆ ನಾ ಯಾವತ್ತಾರ ಆಕಕ್ಕಿಲ್ಲ ಅಂದಿದ್ದೇನಾ” ಅಂತ ಕಲ್ಯಾಣಿ ಅಂತಿದ್ರೂವೆ ರಾಗಿ ರೊಟ್ಟಿಯ ತಾನೊಂದು ಚೂರು ಬಾಯಿಗೆ ಹಾಕಿದ್ರೆ, ಮೂರು ಚೂರ ತನ್ನ ನಾಯಿಗೆ ಎಸೀತಾನೆ ಇದ್ದ... ಆಗ, ತೆಂಗಿನ ಮರದ ಅಟ್ಟಿ ಅಡವಿಯಪ್ಪ ಬಂದೋನು, “ಲಕ್ಕ-ನಮ್ಮ ದೊಡ್ಡಮ್ಮೆ ಕಡಸ್ಥೆ ಆಕ್ರ ಆಗದೆ ಕ... ವಸಿ ಬಂದು ತಕ್ಕೊಡ್ಡ' ಅಂದ ಕರದ. “ಇವತ್ತು ನನ್ನ ಕಯ್ಲಿ ಆಗಕ್ಕಿಲ್ಲ ಕನ್ನಯ್ಯ”- ಲಕ್ಕವಳುದ್ರಿಂಧೆ ಜವಾಬು “ಈಟು ಜಿನವೂವೆ ಅಕ್ರ ಆದಾಗ್ಲೆಲ್ಲ ನನ್ನೆಮ್ಮೆ, ಎಮ್ಮೆ ಕರಗಳ ನೀನೇ ಬಂದು, ಆಕ್ರ ತಕ್ಕೊಟ್ಟು ಉಳ್ಸಿರೋನು... ಈಗ ನೀ ಬರದೇ ವೋದರೆ, ನನ್ನೆಮ್ಮೆ ಕಡಸು ಬದುಕಕ್ಕಿಲ್ಲ ಕನ್ನ” ಗ್ಲಾಗರದ, ಅಡವಿಯಪ್ಪ. - “ವೋಟು ತೋರ ಕರೀತಿ, ವೋಗ್ಲ ಮೊಗ”- ಕಲ್ಯಾಣೀಗೂ ತಗಾ ಮಾಡಿದ್ದು. - ಮನಸಿಲ್ಲ ಮನಸ್ಸಲ್ಲಿ ಲಕ್ಕ ಎದ್ದು, ಅಡವಿಯಪ್ಪ ತೇಲಿ ವೊಂಟ... - ಅಡವಿಯಪ್ಪ ಅಟ್ಟಿಗೆ ವೋಯಿತ್ತೂವೆ-ಜಟಜಟ್ಟೆ ಆಕ್ರಾಗಿದ್ದ ಆ ಎಮ್ಮೆ ಕಡಸ್ನ ನಾಲಿಗೆ ಇರುದು, ಚುಜೀಲಿ ಬಗದು ರಕ್ತವ ಇಚ್ಚೆ ಕಡಸ್ಟ, ವಸಿ ವೋತ್ಕಲೆಲ ತಲೆ ವೋಗೀತಿದ್ದ ಕಡಸು ನೆಟ್ಟಗಾಯ್ತು. “ಈ ಪಟ್ಟು, ನಾ ಬತ್ತೀನಿ ಕನ್ನಯ್ಯ” ಲಕ್ಕ ಎದ್ದ. “ತಡೀಲ, ತಡೀಲ ನನ್ನೆಡತಿ ಕಡಬು ಮಾಡವೆ, ತತ್ತೀನಿ ತಾಳು. ತಿಂದುಕಂಡು ವೋಗೀವಂತೆ- ಅಂದು ಅಡವಿಯಪ್ಪ ವಳಗೆ ನಡೆದಂತೆ, “ಬ್ಯಾಡಿ ಅಡವಿಯಪ್ಪಾರೆ. ನಂಗಾಗ್ಗೆ ತಂಗಳಾಗದೆ.” ಲಕ್ಕ ಕೂಗ್ತಾನೆ ಇದ್ದ. ಅಡವಿಯಪ್ಪ ಅಮ್ಮ ಅಡಚಣ್ಯ ಕಿವಿಗೆ ಆಕಲ್ಲೆ, “ಸುಮ್ಮಿದ್ದ, ಒಂದೆಡು ಕಡಬು ತಿಂದ್ರೆ ಏನು ಆಗಕ್ಕಿಲ ಕನ” ಅಂದು ಮುತ್ತುಗ ಎಲೇಲಿ ಕಡಬು ಕಾಯಿಚಟ್ಟಿ ಮ್ಯಾಲೆ ಮೊಸರು, ಇವೀಟೂ ತಂದು ಲಕ್ಕನ ಕಯ್ಯಗೆ ಇನ್ನೇ ಇಟ್ಟ! ನಿರ್ವಾಯಿಲ್ಲೆ ಲಕ್ಕ ಅಮ್ಮ ತಿನ್ನಲೇಬೇಕಾಯ್ತು, ಕಡುಬು ಮುರುದು ತಿನ್ನಿತಿದ್ದಂಗೆ, ತಾನು ಕುಂತಿದ್ದ ಕ್ವಟ್ಟಿಗೆ ಇಚಾರದಲ್ಲಿ ಈ ಅಡವಿಯಪ್ಪಂಗೂ ಗಂಗವ್ವಗೂ ನಡುದ ಖಡಾಖಡಿ ನೆಪ್ಪಾಯ್ತು: