ಪುಟ:ವೈಶಾಖ.pdf/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೮೭ ಮಾಡಬೇಕಾಯ್ತು. ಗಂಗಮ್ಮ ತಾವೂ ಒಂದು ಕಪ್ಪು ಹಸ ಇತ್ತು. ಮುದಿಯ. ಹಲು ಕೂಡಿರನಿಲ್ಲ. ಗೊಬ್ಬರಕೆ ತೊಪ್ಪೆನಾರು ಸಿಕ್ಕದೇಂತ ಗಂಗವ್ವ ಅಪ್ಪ ಸಾಕೊಂಡಿದ್ದು, ಮುದುಕಿ ದ್ವಾವಮ್ಮ ತನ್ನ ಕಸ್ಟಾವ ಗಂಗವ್ವನ ತಾವು ತೋಡಿಕಂಡ್ಲಂತೆ. ಆಗ ಗಂಗಿ, - “ಅದಕೇನ ಅಜ್ಜಿ, ಗಂಜಳಕೂ ಬರವ? -ಒಂದೀಟು ಗಂಜಳವ ನೀ ಕುಡುದ್ರೆ ಯಾವ ಸಾಮ್ರಾಜ್ಯ ವೋದಾತು?... ಮಾರಾಯ್ಕ ಮಗಳಂಗೆ ಕುಡಿ” ಅಂತ ವಷ್ಟುಗೆ ಕೂಟ್ಟದ್ದಂತೆ... ಅದೇ ಸರ್ಕಾರ ವಸಿ ಜಿನ ನಡೀತು. ಯಾವ ತಂಟೆ ತಕರಾರು ಇರನಿಲ್ಲ. ಆದ್ರೆ ಮುದುಕಿ ದ್ವಾವಮ್ಮ ಗಂಜಳ ಕುಡಿಯಕ್ಕೆ ಬಂದಾಗೆಲ್ಲ ಅಡವೀನೂ ಎದ್ದು ಬಂದು ಹಸ ತೂರುಸ್ಕ ನಿಂತುಕಳಾನಂತೆ. ಅದರಲ್ಲೇನ ತೆಪ್ಟಂತ ಗಂಗವನೂ ಅದ್ರ ದೊಡ್ಡ ಇಸ್ಯ ಅಂತ ತಲೆ ಕೆಡಿಸಿಕೊನಿಲ್ಲವಂತೆ... ಇಂಗೇ ನಡೀತಿತ್ತು... ಲಕ್ಕನೂವೇ ಆ ಕಡೆ ವೋಯ್ತಾ ಬತ್ತ ಸ್ವಡ್ತಾನೆ ಇದ್ದ... ಒಂದು ಜಿನ, ಗಂಗವ್ವ ಆಕಸ್ಮತ್ತು ಜಲಬಾಧ್ಯೆ ಅವಸರವಾಗಿ ಎದ್ದು ಬಂದು ಇಾಡಿದೆ, ಮುದುಕಿ ಆಗ್ಗೆ ಗಂಜಲ ಕುಡದು ಹೊಂಟೋಗದೆ, ಅಡವಿ ಒಬೈ ಬಕ್ಕೊಂಡು ಗಂಗಿ ಪಾಲಿಗೆ ಸೇರ ಕ್ವಿಟ್ಟಿಗೆ ತೊಪ್ಪೆಯ ಮಂಕರಿಗೆ ಬಾಚಿ ತುಂಬಿ, ತನ್ನ ಪಾಲಿಗೆ ಸೇರ ಕ್ವಿಟ್ಟಿಗೆ ಸುರುಕತ್ತಾ ಅನೆ?... ಇದ ಕಂಡು ಗಂಗವ್ವಗೆ ಕ್ಯಾಣ ಅತ್ತಿತ್ತಂತೆ. ತನ್ನ ಸಮ್ಮಂದ, ತನಗಿಂತ ಹಿರಿಯೋನು, ಅವೃತಾವು ಮಾದ್ಯಾಗಿ ಮಾತಾಡಬೇಕು ಅನ್ನಾದ ವಕ್ಕಡೀಕೆ ಇರಸಿ. 'ಅಯ್ಯೋ, ಅಯ್ಯೋ, ಅಯ್ಯೋ - ಇದ್ಯಾವ ಮನಹಾಲ ಕೆಲುಸವ ನೀ ಮಾಡ್ತಿರಾದು?... ನನ್ನ ಕ್ವಟ್ಟಿಗೆ ತೊಪ್ಪೆನೆಲ್ಲಾನೂವೆ ಬಾಚಿ ನಿನ್ನ ಕಡೀಕೆ ಗುಡ್ಡೆ ಆಕ್ಕತ್ತಿದ್ದೀಯಲ್ಲ?...” ಬಿಸಿಲೆ ಎಲ್ಕುಕಾಳು ಸಿಡಿಯೂವಂಗೆ ಸಿಡಿದ್ದು... ಲಕ್ಕ ಆ ವ್ಯಾಳ್ಯದಲ್ಲಿ ಊರೊಳಗೆ ಗಸ್ತು ವೋಡೀತ ಅವರ ಅಟ್ಟಿ ತಾವಿಕೆ ಬಂದೋನು, ಗಂಗಿ ಮಾತ ಕೇಳಿ, ಇಲ್ಲೇನು ನಡೀತಿದ್ದದು ಅಂತ ಕುತೂಲವಾಗಿ, ಅವರ ಜಗಲಿ ವರಗಿ ನಿಂತು ಕೇಳಿದ್ದ... ಅಡವಿಯಪ್ಪ ಗುಳ್ಳೆನರಿಯಂತ ಮನಸ, ಕಣ್ಣಮಿಟುಕಿಸೊ ವೋಟು ಜಟ್ಟನೆ ತನ್ನ ಊಟ್ಟಿಗೆ ಜಾರಿ, - “ಯಾರಮ್ಮಿ ನಿನ್ನ ತೊಪ್ಪೆ ಬಾಚಿದೋರು?- ಇದು ನನ್ನ ಹಸೀನದೇಯ. ನಿನ್ನ ಪಾಲಿಗೆ ಬಂದು ತೊಪ್ಪೆ ಆಕಿತ್ತು, ವೋಟೇಯ” ಅಂತ ಅಟಕಾಯಿಸ್ಥ. ಗಂಗವ್ವ ಮೆತ್ತಗಾದ್ದು. ಅವಳೆ ಇದ್ದರೂ ಇರಬೈದು ಅನ್ನಿಸಿರಬೇಕು.