ಪುಟ:ವೈಶಾಖ.pdf/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

geses ವೈಶಾಖ ಅವಳು ಮುಂದು ಬಾಯಿ ಬಿಚ್ಚದೆ, ತಾನೇ ತಪ್ಪು ಮಾಡಿದೋಳಂಗೆ ಹೈಂಟೋದ್ದಂತೆ... ಅದೇ ಸಂದೆಗೆ ಹೊಲದತ್ತಿರ ಸಿಕ್ಕಿದಾಗ, ಲಕ್ಕ “ಅದೇನಯ್ಯ ನಾತ್ರೆ ಗಂಗವ್ವಂಗೂ ನಿಗೂ ಆಪಾಟಿ ಮಾತು ನಡೀತಿತ್ವಲ್ಲ?” ಅಂತ ಕೇಳಿದ್ದ ಅದುಕೆ ಅಡವಿಯಪ್ಪ, “ಏನಿಲ್ಲ ಕನ್ನ ಅವಳ ಕಡೇದ ಒಂದೀಟು ತೊಪ್ಪೆ ಗೋರಿಕಂಡೆ. ಅದೇ ವೋಟು ಬಾಯಿ ಮಾಡ್ತಿದ್ದು” ಅಂತ ನಿಜಾನೆ ಯೋಳಿದ್ದ... ಆದ್ರೆ ದಿನಂಪತಿ ಗಂಗಿ ಕಡೆ ತೊಪ್ಪೆ ಕಮ್ಮಿ ಆಯ್ತಾನೆ ಬಂತು. ಅವಳೆ ಅನುಮನಸು ಬಂದು, ಇದ್ರ ಪರೀಕ್ಷೆ ಮಾಡೇ ಬುಡಬೇಕು ಅಂತ ನಿಚ್ಚೆಸಿ ಏಡು ನಾತ್ರೆ ಮೊದಲ ಕೋಳಿ ಕೂಗಕ್ಕೆ ಮುಂಚೇನೆ ಎದ್ದು ಕಾದ್ದಂತೆ. ಅವಳಂಗೆ ಕಾಯ್ತಿರಾದು ಅಡವಿಯಪ್ಪಂಗೆ ತಿಳೀನಿಲ್ಲಂತೆ, ಏಡು ನಾನೂ ಅಡವಿ ತೆಪ್ಪದೆ ತನ್ನವ್ವ ಗಂಜಳ ಕುಡಿದು ಆಯಿವೆ, ಗಂಗಿ ಪಾಲಿನ ತೊಪ್ಪೆಯ ಮಸ್ತಾಗಿ ಬಾಚಿ ತನ್ನ ಕಡೀಕೆ ಅಕ್ಕಂಡಿದ್ದನಂತೆ. ಅದ್ರ ಗಂಗಿ ಕಣ್ಣಾರ ಕಂಡ್ಲು. ಮುದುಕಿ ಗಂಜಳ ಕುಡುದೋಯ್ದಿತ್ತು. ಆಮ್ಯಾಕೆ ಸುರು ಆಯ್ತಿತ್ತು ಅವಯ್ಯ ಪಾರಪತ್ಯ. ಗಂಗಿ ಇನ್ನೆಲ್ಲ ನ್ಯಾಡಿಕಂಡು ಒಂದು ಜಿನ ಸುಮ್ಮಕಿದ್ದು. ಏಡ್ ಜಿನ ಸುಮ್ಮಕಿದ್ದು. ಮೂರನೇ ಜಿನ ತಡೀನಿಲ್ಲ. “ಇದೆಂತ ತಟವಟಗಾರ ಜಲ್ಮವ ನಿಂದು?... ಈ ತೋರ ಎಮ್ಮೆ, ದನ ಇರೋನೂವೆ, ಈ ಪಾಟಿ ಹಡಾಸೆ ಯಾಕೆ ಅಂತೀನಿ?”- ತನ್ನ ಅಟ್ಟಿ ಕದದ ಕಿಂಡೀಲಿ ಮೊಗುಮ್ಮಾಗಿ ಕ್ವಾಡ್ತಿದ್ದೋಳು ಆಣೆ ಚೆಚ್ಚಿಗತ್ತ ಕೇಳಿದ್ದಂತೆ. - “ಯಾರೇ ನಿನ್ನ ತೊಪ್ಪೆ ಬಾಚಿದೋರು?” ಅಂತ ಅಡವಿ ಬಾಯಿಜೋರು ಮಾಡಿದ್ರಂತೆ. “ಅದ್ವಿ, ನೀ ತೊಪ್ಪೆ ಬಾಚಿದ್ದ ಏಡು ನಾದ್ರೂ ನಾನೂವೆ ನ್ಯಾಡ್ತಾನೆ ಇನ್ನಿ. ನಾನು ಕಣ್ಣಾರೆ ಕ್ವಾಡಿದ್ರೆ ಸಟೆ ಮಾಡಿ, ಆಟಕಾಯಿಸ್ತಿದ್ದೀಯಲ್ಲ-ನಾ ಯೇನೆಲ್ಲಿ?” “ಏನ್ಸೆ, ಪೋಟೊತ್ನಿಂದ ನನ್ನ ತಟವಟಗಾರನ್ನೆ ಮಾಡಿ ಆಟಕಾಯಿಸ್ತಿದ್ದೀಯಲ್ಲ?... ನಿನ್ನ ದನೀನ ತೊಪ್ಪೆ ಅದ್ಯಾವ ಸೂಳೆಮಗನಿಗೆ ಬೇಕು. ನಮ್ಮ ರಾಸುಗೊಳ ಗೊಬ್ಬರವ ನಮ್ಮ ಹೊಲಗಳಿಗೆಲ್ಲ ದಾರಾಳ್ವಾಗಿ ಎರಚಾಡಿದ್ರುವೆ ಇನ್ನೂ ಮಸ್ತಾಗಿ ಮಿಕ್ಟೋಯ್ತದೆ... ಇಸ್ಯ ಇಂಗಿರುವಾಗ, ನಿನ್ನ ತೊಪ್ಪೆ ತಕ್ಕಂಡು ನಾ ಯೆಲ್ಲಿಗೆ ಬಡಕೊಳ್ಳಿ?”