ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೮೯ ಅಡವಿಯಪ್ಪನ್ನ ಕಂಡರೆ ಊರಲ್ಲಿ ಯಾರೂ ಆಯ್ತಾ ಇರನಿಲ್ಲ. ಅವು ಸಣ್ಣಮಟ್ಟಕ್ಕೆ ಆಸೆ ಪಡ್ತಿದ್ದಲ್ಲದೆ, ಊರಲ್ಲಿ ಯಾರ ಕುಟ್ಟೂ ಸೇರಿರನಿಲ್ಲ. ತಾನಾಯ್ತು, ತನ್ನಹೊಲ ಮನೆ ಆಯ್ತು. ಊರಲ್ಲಿ ಆಯ್ತಿದ್ದ ಪಂಚಾತಿ ನ್ಯಾಯ ಸ್ವಾಡಿ ಗ್ವಾಡಿ ಅವಸ್ಥೆ ಪಂಚಾತಿ ಆಂದ್ರೆ ಬೆಚ್ಚಿ ಬೀಳೋನು. ಏನಾರ ತನ್ನ ಹೊಟ್ಟೇಲಿ ಮಡಕ್ಕಳಕ್ಕೆ ಆಗದೆ ಇರೋ ಇಸ್ಯ ಇದ್ದರೆ, ಅದ್ರ ತನ್ನ ಹೊಟ್ಟೆ ಉಬ್ಬರ ಕಳಕಳಕ್ಕೆ ಲಕ್ಕನೊಬ್ಬನ ಆತ್ರ ಬಾಯಿ ಸಿಡಿಲಿಸೋನು!.. ಆದಕೇನೆ ಆವತ್ತು ನಡದ ಜಗಳದ ಇಸ್ಯವ ಆಮ್ಯಾಕೆ ಮಾತಾಡ್ತ ಅಂದಿದ್ದ- “ಗಂಗಿಗೆ ಅವತ್ತು ಜಬಾಬು ಕೂಡ ದರುಮರಾಯನ ಮರಿಮಗನಂಗೆ ಮಾತಾಡಿದ್ದೆ ಕಣ್ಣ” ಅಂತ ನಕ್ಕಿದ್ದ. ಆದ್ರೆ ಗಂಗೆ ವೋಟಕೆ ಸುಮ್ಮ ಕಾಗನಿಲ್ಲವಂತೆ, ಅವಳು “ಇದೀಗ ಚೆಂದ. ನಾನು ಕಣ್ಣ ಕಿಸುಗಂಡು ಚೆಂದಾಗಿ ಕ್ವಾಡಿದ್ದೆ ಇಲ್ಲಾಂತ ಮಲೆಯಾಳಿ ಕಣ್ಣುಕಟ್ಟು ಮಾಯ ಮಾಡಕ್ಕೆ ವೋಂಟಿದ್ದೀಯಲ್ಲ, ನೀನೀಗ ಐನಾತಿ ಭಂಡ... ಇನ್ನು ನಿನ್ನ ತಾವು ಎಚ್ಚು ಮಾತಾಡಿ ಸುಕವೇನ?... ಕ್ಯಾಳು. ಇನ್ನೊಂದು ಜಿನ ಏನಾರ ಇಂಗೆ ನನ್ನ ಚೋಗಿ ತೋಪ್ಯ ನೀ ಕರೀತ ಸಿಕ್ಕಾಕಂದ್ರೆ ನಾ ಮಾತ್ರ ಸುಮ್ಮಕಿರೋಳಲ್ಲ...” ಅಂದೇಬುಟ್ಲಂಟೆ! “ಅದೇನು ಮಾಡಿಬುಟ್ರೇಣೆ?” - ನವುರಿದ್ದಂತೆ ಅಡವಿ. “ಏನು ಮಾಡಬುಟ್ಟಿ ಅಂದ್ರೆ, ಮಾಡಾದ್ರೆ ಮಾಡ್ತೀವಿ” ಅಂತ ಗಂಗಿ ಸಿಡುಕಿದ್ದಂತೆ. “ “ಅದೇನು ವಸೀತಿಯೋ ವಸಿ' ಅಂತೇಳಿ ಕಣ್ಣ ಮೆಡುರುಸಿ ವಳೀಕೆ ನಡುದೆ ಕನ್ಹ, ಲಕ್ಕ”- ಅಡವಿ ಲಕ್ಕನ ಕುಟ್ಟೆ ಇವರಿಸಿದ್ದ. ಮುಂದಿನ ದಿನಗಳಲ್ಲಿ ಈ ಆಣಾಣಿ ಇಲ್ಲವೇ ಇಲ್ಲ. ಅಡವಿಯಪ್ಪ ತೊಪ್ಪೆ ಬಾಚೋದು ತೆಪ್ಪನಿಲ್ಲ. ಗಂಗವ್ವ ಸಿಡಾರ್ ಪಡಾರ್‌ ಅನ್ನಾದೂ ತೆಪ್ಪನಿಲ್ಲ.. ಮಳೆ ಕರೀದೆ ಮಾಡಕ್ಕೆ ಮ್ಯಾಡ ಡಿಕ್ಕಿ ಮೋಡದಂಗಿತ್ತು ಅವರ ಕಮ್ಮ! ಆದ್ರೆ ಒಂದು ಜಿನ ಅದು ಮುಗಿ ಮುಟ್ಟಿಬಿಡ್ತು. ಪರ್ತಿ ರೋಜಾನು ಯೋಳಿದಂಗೆ ಅವತ್ತೂವೆ ಗಂಗವ್ವ, “ನಾ ಯೇಟು ಬರೇಲಿ ನಿಂಗೆ ಯೋಳ್ತಾ ಇದ್ರೂವೆ, ನಿನ್ನಾಟ ಬುಡೇ ಇಲ್ಲ. ಈ ಪಟ್ಟು ನೀನು ನಂಟ, ನಂಗೆ ಇರಿಯೋನು ಅನ್ನಾನ್ನೆಲ್ಲ ಮರತು ನಾನೂವೆ ಕಿತ್ತು ನಿಂತುಕಾಬೇಕಾಯ್ತದೆ” ಅಂದ್ಲಂತೆ. “ಅದೇನು ಕಿತ್ತುಗಂಡೀಣೆ?” ಅಂದೋನು. “ಸಕ್ತಿ ಇದೆ, ಕಿತ್ತುಗೋ ಬಾಣೆ” ಅಂತ ಅಡವಿ ಮಾತ ಚುಕಾಯ್ತಿಬುಟ್ಟನಂತೆ.