________________
೨೯೦ ವೈಶಾಖ “ನಾ ಯಾಕೊ ಅಂತ ಹೀನ ಕೆಲಸ ಮಾಡಕ್ಕೆ ಬರಾನೆ?- ನೀ ಇಂಗೇ ಆಡ್ತಿದೆ, ನನ್ನ ಸಕೀಯ ಬ್ಯಾರೆ ತರ ತೋರೀನಿ” ಅಂದ್ಲಂತೆ ಗಂಗಿ. “ಅದೇನೆ ನೀ ಕಿಸಿಯಾದು?”- ಅಡವಿ ರೇಗಿದ್ರಂತೆ. “ಎಕ್ಕಡ ಪೈಜಾರ ತಕ್ಕತ್ತೀನಿ”- ರೋಸಗಿ ಅಂದೇಬುಟ್ಲಂತೆ ಗಂಗಿ, ಈ ಮಾತ ಕೇಳಿ ಅಡವಿಗೆ ನೆತ್ತಿ ಸುಳಿ ಸುದ್ದಿ ಉರಿದೊಯ್ತಂತೆ. “ಏನೇ ಹರಾಮಿ ರಂಡೆ. ನನ್ನ ಎಕ್ಕಡದಲ್ಲಿ ಹೃಡೀತೀನಿ ಅಂತ ಯೋಳೊ ವೋಟು ದಕ್ಕಸತ್ತು ಬಂತೇನೆ ನಿಂಗೆ?...”- ಇಂಗಲ್ಲ ಕಿರುಚಾಡಿದ್ರಂತೆ. “ಮಂತೆ ಅದೇಟು ತೋರ ಯೋಳಿದ್ರೂವೆ ನೀ ಈ ಕೆಲ್ಸ ಮಾಡ್ತಿರುವಾಗ ನಂಗಿನ್ನೇನು ಉಳಿದಿದ್ದಾತೊ, ನನ್ನ ಹಾಟುಗಳ?” ಅಂದೇಬುಟ್ಲಂತೆ. “ಲೇ, ಲೇ, ಲೇ-ನನ್ನ ಎಕ್ಕಡದಲ್ಲಿ ಹೊಡೀತೀನಿ ಅಂದದೂ ಅಲ್ಲೆ, ಹಾಟುಗಳ್ಳ ಅಂತ ಬ್ಯಾರೆ ಕರಿದೀಯೇನೆ?... ಇನ್ನೊಂದು ದಪ ನೀ ಇಂಗೇನಾರ ಅಂದ್ರೆ, ನಿನ್ನ ರಕುತ ಕುಡುದುಬುಟ್ಟೇನು, ಉಸಿರು!” – ಅಡವಿಯಪ್ಪ 'ಇಂಗೆ ಬಯ್ಯಕು, ಬಲ್ಕಕತ್ತ ಅಟ್ಟಿ ವಳುಕೋದೆ ಕನ್ಹ. ಅಂದಿದ್ದ, ಲಕ್ಕನು... ಆದ್ರೆ ಬತ್ತಾ ಬತ್ತಾ ಗಂಗವ್ವ ಸಂತೆ ಬಜಾರೀನೆ ಆಗೋದ್ಲು. ಅಡವಿ ಏಟೇ ಆದ್ರೂವೆ ಮೀಸೆವೊತ್ತ ಗಂಡಸು, ಅನ್ನ ಮ್ಯಾಲೆ ಎಣ್ಣೆಂಗಸು ಕಮ್ಮಿ ಮಾಡಕ್ಕಾದಾತ?- ಅವಳ ತಾವು ಇದ್ದ ಒಂದೇ ಪಾಸುಪತಾಸ್ತ್ರ, ಅಂದ್ರೆ ಬಾಯಿಗೆ ಬಂದಂಗೆ ಬಯ್ಯೋದು!... ಚಿಕ್ಕೋಳಾಗಿ ಇದ್ದೇನಿಂದ ಊರಲ್ಲಿ ತಾನು ಕಲ್ಲಿದ್ದ ಕೆಟ್ಟ ಕೆಟ್ಟ ಬೋಗಳಾನೆಲ್ಲ ಗಂಗಿ, ಗಂಟಲು ದೊಡ್ಡದು ಮಾಡಿ ಅಡವಿಯ ಪತಿನಿತ್ಯ ಬಯ್ಯೋದೆ ಈಗ ಅವಳ ಕುಲುಮೆ ಆಯ್ತು... ತಿಂಗಳಾನುಗಟ್ಟಲೆ ನಿಲ್ಲುನೇ ಇಲ್ಲ, ಅವರಿಬ್ರ ಕದ್ರ!... ಲಕ್ಕ ಕಡಬು ತಿಂದು, ಅಡವಿ ಕ್ವಿಟ್ಟಿಗಿಂದ ಎದ್ದೋನು, ಅವರ ಗುಡ್ಡಿಗೋಗಿ ಚಾಪೆ ಹಾಸಿ, ದುಪಟಿ ವೊದ್ದು, ಬಿದ್ದು ಕಂಡ. ಆಗಲೂವೆ ಇದೇ ಯೋಚ್ಛೆ ಬುಡನಿಲ್ಲ.... ಹೊಸೋದು ತಡ ಅಂದ್ರೆ, ನಾರೋದು ತಡವ?... ಗಂಗಿ, ಅಡವಿ ಇಬ್ಬರ ಲಟಾಪಟಿ ಸುದ್ದಿ ಊರ ಸಂದಿಗೊಂದೀರೆಲ್ಲ ಬಿದ್ದು ಒದ್ದಾಡ್ತು. ಮಾತ್ರ, ಅಡವಿಯೂವೆ ಗಂಗವ್ವನೂವೆ ಅತ್ರದ ಸಮ್ಮಂದ, ನಾವ್ಯಾಕೆ ಈಮದ್ಯ ತಲೆ ಆಕವೆ ಅಂತ ಊರೋರು ಅವರು ಏಡಾಳೂ ಬುದ್ದಿಯೋಳಕ್ಕೆ ಮುತ್ವರ್ಜಿ ವಯಿಸನಿಲ್ಲ. ಆದ್ರೆ ಗಂಗವ್ವ ಚೆಂದುಳ್ಳಿ ಎಣ್ಣು. “ಇವರ ಮ್ಯಾಲೆ ನಂಜೇಗೌಡ ಒಂದು ಕಣ್ಣ ಇಷ್ಟೇ ಇದ್ದ ಕನಲ...” ಅಂತ ಲಕ್ಕನಿಗೆ ತಿಳುಸಿದ್ದ ಅಡವಿ, "ನಾನೊಂದು ಪೆದ್ದುಗರ... ನಂಗೆ ಆ ಇಸ್ಯದಲ್ಲಿ ಸಂಸಯ ಬರನೇ ಇಲ್ಲ!” ಅಂತ ಎಲ್ಲ