ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೯೨ ವೈಶಾಖ “ಏನು ಮಾಡಾದು, ನಂಜಣ್ಣ, ಮೊಗ್ಗೆ ಯೋಳಿದ್ದಲ್ಲ- ಸಮ್ಮಂದ. ನಮ್ಮಟ್ಟಿ ಮಜ್ಜಿಗೆಯ ಈಚಲು ಮರದ ಕೆಳಗ್ಯಾಕೆ ಕುಡುಯೋದು ಅಂತ ಸುಮ್ಮಕಿನ್ನಿ.” “ಅದ್ಯಾನೊ ಸರಿ... ನೀನು ಮಾನಿಸ್ಪ, ನಾನ ವಪ್ಪುಕತ್ತೀನಿ. ಆದ್ರೆ ನಿಮ್ಮ ಸುತ್ತಮುತ್ತನೋರು ಏನೇಳ್ತಾರೆ ಗ್ವತ್ತಾ? – ನಾವೂ ಇನ್ನು ನಾಕುಜಿನ ಕ್ವಾಡ್ತೀವಿ. ಅಡವಿಯಷ್ಟೆ ಇದ್ದ ಪಂಚಾತಿಗೆ ವಷ್ಟುಸಿದ್ರೆ ಸಮ. ಇಲ್ಲದೆ ವೋದ್ರೆ, ನಾವು ಆಜೂಬಾಜೂನೋರೆ ಪಂಚಾತಿಗೆ ಕಟ್ಟುಬುಡ್ತೀವಿ, ಅಂದು.” ಆ ಮಾತ ಕೇಳಿ ನಂಗೆ ಜಂಗಾಬಲವೇ ಬುಟ್ಟೋಯ್ತು ಕನ್ಯ. `ಹಯ್ಯಯ್ಯೋ, ಅವರು ಕ್ವಡಾದು ಬ್ಯಾಡ' ಅಂದ್ರೆ... ಅಂದ್ರೆ ನಂಜೇಗೌಡ ವೋಟಕೆ ಬುಟ್ನಾ?... “ಸರೋಯ್ತು ಕನೋ, ಅಡವಿ, ನೀ ಬ್ಯಾಡ ಅಂದರೆ, ಅವರು ಬುಟ್ಟು ಬುಟ್ಟಾರೆ?” “ಮಂತೆ, ಈಗ ನಾ ಯೇನ ಮಾಡಬೇಕು ಅಂತೀಯಣ್ಣ?” “ನನ್ನ ಕ್ಯಾಳಿದ್ರೆ? - ನೀನೇ ತಕ್ಕಾಬೇಕು ತೀರುಮಾನ್ವ- ಈ ಇಚಾಲ್ವ ಅವರೇ ಪಂಚಾತಿಗೆ ತಿಳಿಸಬೇಕೊ ಇಲ್ಲ, ಇದ್ದ ನೀನೇ ಪಂಚಾತಿಗೆ ವಷ್ಟುಸಬೇಕೊ ಅಂತಾವ.” ಅಡವಿ ವಸಿ ಸ್ವತ್ತು ಬೆಪ್ಪು ಇಡುದೊನಂಗೆ ಕುಂತಿದ್ರಂತೆ. ನಂಜೇಗೌಡ ಕ್ವಾಪ ಮಾಡಿಕಂಡೇ ಅಂದನಂತೆ “ಇದ್ಯಾಕೊ ಸುಮ್ಮಕಾದೆ?- ಪಂಚಾತೀಲಿ ನಾನಿರಕ್ಕಿಲ್ಲ... ಆ ಬಜಾರಿಗೆ ವಸಿ ಬುದ್ದಿ ಕಲಿಸಿ, ನಿನ್ನ ತಂಟೆಗೆ ಬರದಂತೆ ಮಾಡ್ತೀವಪ್ಪ... ಅದು ಚೆಂದವೋ, ಇಲ್ಲ ನೀ ಇಂಗೆ ಬೋಗಳ ತಿಂತಿರಾದು ಚೆಂದವೋ, ನೀನೇ ಯೋಳಿಬುಡು.” ಅಡವಿ ತಬ್ಬಿಬ್ಬಾದಂತೆ. “ನಂಗೊಂದೂ ವೋಳೀತಾನೆ ಇಲ್ಲ. ಎಂಗೆ ಮಾಡಾದೊ ಗ್ಯತ್ತಾಯ್ತಾ ಇಲ್ಲ.” “ಇದೇ ನಿನ್ನ ಕೊನೆ ಮಾತ?... ಅಂಗಾರೆ ಬುಡು. ನಾನೂವೆ ನಿನ್ನ ಹಿತಕ್ಕೇಳೆ, ಅವರಿವರು ಪಂಚಾತಿಗೆ ಕ್ವಡಕ್ಕೂವೆ ನೀನೇ ಕ್ವಡಕ್ಕೂವೆ ಯತ್ಯಾಸ ಆಯ್ತದೆ. ಅವರು ಕ್ವಟ್ಟರೆ, ಕದ್ದ ಮಾಡಿ ಹೇಸಿಗೆ ಕೆಟ್ಟಿರೋ ನಿಮ್ಮಿಬ್ಬರ ಮ್ಯಾಲೂ ಕ್ವಡಬೇಕಾಯ್ತದೆ. ಆಗ ನೀನೂವೆ ಅವಳ ಜ್ವತೆ ಅಪರಾದಿ ತಾನದಲ್ಲಿ ನಿಲ್ಲಬೇಕಾಯ್ತದೆ... ಅದ ಬುಟ್ಟು ನೀನೆ ಆ ಗಂಗಿ ಮ್ಯಾಲೆ ಕಂಪ್ಲೇಂಟು ಕ್ವಟ್ಟರೆ, ಅಪರಾದಿ ತಾನದಲ್ಲಿ ಅವಳಾಯ್ತಳೆ; ನೀನು ಫಿರ್ಯಾದಿ ಆಯ್ಕೆಯೆ. ಆಗ ನ್ಯಾಯ ನಿನ್ನ ಕಡೀಕೆ ಹೃಳ್ಳಕ್ಕೆ ಅನುಕೂಲ ಆಯ್ತದೆ... ಯೋಚ್ಛೆ ಮಾಡು.”