________________
ಸಮಗ್ರ ಕಾದಂಬರಿಗಳು ೨೯೩ ಇಂಗೆ ನನ್ನ ಕೆಡೀಕಂಡ ಕನ್ಹ, ಲಕ್ಕ-ಅಂದಿದ್ದ ಅಡವಿ. “ಇನ್ನು ಯೋಚ್ಛೆ ಮಾಡಾದು ಯೇನು ಉಳುಕಂಡದೆ, ನಂಜಣ್ಣ-ನೀ ಈಟೆಲ್ಲ ಯೋಳಿದ ಮ್ಯಾಗೆ?” “ಅಂದಮ್ಯಾಗೆ ಈ ನ್ಯಾಯವ ಪಂಚಾತಿಗೆ ನೀನೇ ವಷ್ಟುಸ್ಲಿಯೆ ಅಂದಂಗಾ ಆಯ್ತು.” “ಬ್ಯಾರೆ ದಾರೀನೆ ಕಾಣಿಲ್ಲವಲ್ಲ - ನೀ ಯೋಳೋದ್ರಲ್ಲಿ?” “ಅಂಗಿದ್ರೆ ಒಂದು ಕೆಲ್ಲ ಮಾಡು, ನಾಳೀನೆ ಇದ್ದ ಪಂಚಾತಿಗೆ ವಷ್ಟುಸಿಬುಡು. ಅಲ್ಲಿ ನಿನ್ನ ಮಂಡೆ ಕೂಯ್ದು ಚುಳ್ ಅನ್ನದಂಗೆ ನಾನು ಸ್ವಾಡಕತ್ತೀನಿ. ಆ ಗಂಗಿ ಮಾತ್ರ ಇನ್ನೆಂದಿಗೂ ನಿನ್ನ ತಂಟೆಗೆ ಬರಬಾರು ಅನ್ನಾತರ ಮಾಡ್ತೀನಿ.” ಅಡವಿಯಪ್ಪ ವಸಿ ವೊತ್ತ ಯೋಚ್ಛೆ ಮಾಡಿ, “ಇನ್ನೇನ ಮಾಡಾದು?- ಅಂಗೆ ಮಾಡಾನ ನಡಿಯಣ್ಣ “ ಅಂತ ವಪ್ಪಿ ಅಲ್ಲಿಂದೆದ್ದನಂತೆ.. ಲಕ್ಕ ಇಂಗೆ ಯೋಚ್ಛೆ ಮಾಡ್ತ ಬಿದ್ದಿರೋನೂವೆ, ಸಿವುನಿ ಉಣ್ಣಕೇಳಿಸಿದ್ದು. ಉಣ್ಣಕ್ಕೆ ಯಾಕೊ ಸೇಡೀನಿಲ್ಲ. ನೆಪಮಾಡಿ ಎದ್ದ, ಕೆರೆ ಅತ್ರ ವೋಗಿ ಕುಂತ. ಅಲ್ಲಿ ಕುಂತು ಕೆರೆ ನೀರನೆ ನ್ಯಾಡ್ತಿರೋನೂವೆ, ನಾತ್ರೆಗೆ ಬರೊ ತನ್ನ ನ್ಯಾಯದ ಚಿಂತೆ ಮರೆಯಕ್ಕೆ ಗಂಗಿ ನ್ಯಾಯದ ಯೋಚ್ಛೇಲಿ ಲಕ್ಕನ ಮನಸು ಮುನಾ ತೊಡೀಕತ್ತು... ಸರಿ, ಅಡವಿ ದರುಮನಳ್ಳಿ ಪಂಚಾತಿಗೆ ದೂರು ಕಟ್ಟ ಮ್ಯಾಲೆ ಪಂಚಾತಿ ಯಜಮಾನ್ನು ಒಟ್ಟಿಗೆ ಸೇರೆ ಪಂಚಾತಿ ನಡಿಯೋ ಜಿನ ಗ್ರತ್ತು ಮಾಡಿದ್ರು. ಸ್ವಾಮಾರ ನಾತ್ರೆ ಇರಬೈದು, ಆ ನಾತ್ರೆ ಯಜಮಾನೆಲ್ಲ ಜಾವಡೇಲಿ ನೆರದು. ಅವತ್ತೂವೆ ಕುಂದೂರಯ್ಯ ಬದ್ದು ಲಕ್ಕನೆ ಹಂಗಾಮಿ ಕುಳವಾಡಿ. ಆಗ ನಂಜೇಗೌಡ ಲಕ್ಕನ್ನ ಕರದು, - “ಲೋ ಲಕ್ಕ, ತೆಂಗಿನ ಮರದ ಅಟ್ಟಿ ಗಂಗಮ್ಮ ನೋರ ಕರಕಂಬಾ, ವೋಗು” ಅಂದ್ರು, ಲಕ್ಕ ವೋಗ್ತಿರೋನೂವೆ “ಜಟ್ಟನೆ” ಅಂತಾನು ಸೇರಿಸಿದ್ರು... ಲಕ್ಕೆ ತೆಂಗಿನ ಮರದ ಅಟ್ಟಿಗೋಗಿ, ಕ್ವಟ್ಟಿಗೇಲಿ ನಿಂತು, 'ಗಂಗವ್ವ, ಗಂಗವ್ವ....' ಅಂತ ಮೂರು ನಾಕು ದಪ ಕೂಗ್ಗ. ಯಾರೂವೆ ವಳುಗಡಿಂದ ಆ ಊ ಅನ್ನನಿಲ್ಲ... ಯಜಮಾನ್ತು ಆತ್ರ ಪಡಸಿದ್ರಿಂದ, ಯಾವುದೋ ಗ್ಯಾನದಲ್ಲಿ ಗಂಗವ್ವನ ಒಳಪಡಸಾಲೆ ಕಾಲಿಟ್ಟು, ಮತ್ತೆ 'ಗಂಗವ್ವಾರೆ...” ಅಂತ ಸೊರ ಎತ್ತಿ ಕೂಗ್ಲ.