ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೯೫ ಬೇಕಾಬಿಟ್ಟಿ ಕೇಳಿದ್ದು ಗಂಗವ್ವ. ಲಕ್ಕ ಸಾವರುಸಿಕೊಂಡೋನು, “ಅದೇಯ - ಅಡವಿಯಪ್ಪನೋರ್ ನಿಮ್ಮವೆ ನಡೀತಿರೊ ತೊಪ್ಪೆ ಜಗಳದ ನ್ಯಾಯ” ಅಂದಿದ್ದ. “ನಮ್ಮಟ್ಟಿ ಜಗಳಕೂ ಈ ಪಂಚಾತಿಯೋಝವೆ ಯೇಗ್ಧ ಸಮ್ಮಂದ?” “ನಂಗೊತ್ತಿಲ್ಲ.... ಅವರು ಕಳಿಸದ್ರು, ನಾ ಬಂದೆ.” “ನಾ ಬರಕ್ಕಿಲ್ಲಾಂತ ಯೋಳೋಗು”- ಖೈಡಾಗಿ ಯೋಳಿ, ನಿಂಗಿ ಕಡೀಕೆ ತಿರುಗಿ, “ನಿನ್ಯಾಕೆ ಕರಿದೇಂದ್ರೆ, ನಾವಿತ್ತು ವಳೀಕೆ ವೋಗೂವಂಗಿಲ್ಲ. ಇವತ್ತು ನೀನೆ ವಸಿ ಅಡಿಗೆ ಮಾಡೋಕು, ಆಮ್ಯಾಕೆ ನಿನ್ನಟ್ಟೇಲಿ ಆಡ್ತಿರೊ ನನ್ನ ಮಕ್ಕಳು, ನಿನ್ನ ಮಕ್ಕಳು ಗಂಡಯ್ಯ ಯೆಲ್ಲಾರೂ ಇಲ್ಲಿಗೇ ಕರಕಂಬಂದು ಇಲ್ಲೆ ಉಣ್ಣಕ್ಕಿಕ್ಕು” ಅಂದ್ಲು. ಲಕ್ಕೆ, ಕನ್ನಡಿ ಮ್ಯಾಲೆ ಉದ್ದು ಉರುಳೊ ವೊತ್ತು ಅಲ್ಲಿ ನಿಲ್ಲನಿಲ್ಲ. ಸೀದ ಚಾವಡಿಗೋಗಿ ಪಂಚಾತಿಕಟ್ಟೆಗೆ ಗಂಗೆ ಯೋಳಿದ್ದ ಅವಳು ಯೋಳಿದಂಗೆಯ ವಷ್ಟುಸ್ಸ. ತಾವು ಯೋಳಿಕಳಿಸಿದ್ರೂವೆ ತಮ್ಮ ಮಾತಿಗೆ ಬೆಲೆ ಕ್ವಿಟ್ಟು ಆ ಚಿಲ್ಲರೆ ಎಂಗಸು ಬರನಿಲ್ಲವಲ್ಲಾಂತ ಯಜಮಾನಿಗೆ ಕ್ಯಾಣ ಸಾಜವಾಗೆ ಬಂತು. “ಲೋ ಲಕ್ಕ, ಪನಾ ವೋಗಿ ಕರೀಲಾ ಅವಳ” ಅಂದ್ರು. ಲಕ್ಕ ಪುನಾ ವೋಗಿ, “ಯಜಮಾನುಗೋಳು ಪುನಾ ವೋಗಿ ಕರಿ ಅಂದ್ರು, ಅದ್ರೆ ಬಂದೆ” ಅಂದ. “ನಾ ಇವತ್ತು ಮುಟ್ಟು, ಬರಕ್ಕಾಗಕ್ಕಿಲ್ಲವಂತೆ ಅಂತ ಯೋಲ್ಲ”ಅನ್ನೋವಾಗ ಅವಳ ಮಾತ್ನಲ್ಲಿ ಗಡಸು ತುಂಬಿ ತುಳುಕಾಡ್ತಿತ್ತು. ಲಕ್ಕ ಪಂಚಾತಿಕಟ್ಟೆಗೆ ವಾಪಸಾಗಿ ಅಂಗೇ ವರದಿ ವಸ್ತುಸ. “ಮುಚ್ಚಿ ತಟ್ಟೋ, ಅದ ಕಂಡು ನಮಗೇನು?... ಬರಕಿಲ್ಲಾಂದ್ರೆ ಬುಡೋಲ್ಯಾರು? ನಾವು ನಿಮಗೆ ಅಪ್ಪಣೆ ಮಾಡ್ತಾ ಇದ್ದೀವಿ. ನೀನೋಗು. ಅವಳೇನಾರ ಮನಾ ಬರಕಿಲ್ಲಾಂತ ಆಟ ಮಾಡದೆ, ಅವಳ ತುರುಬ ಇಡಕಂಡು ಬೀದೀಲಿ ದರದರ ಎಳಕಂಡು ಬಾ. ನೀಯೇನೂ ಎದುರುಗೊಬ್ಯಾಡ. ಇದ್ರಿಂದ ಏನೇ ಬಂದರೂವೆ ನಿನ್ನ ಕಾಪಾಡಕ್ಕೆ ನಾವಿವಿ” ಅಂದ್ರು. ಲಕ್ಕ ಮನ ಗಂಗಿ ಅಟ್ಟಿಗೋದ. ಪಂಚಾತಿಯೋರು ಎಂಗೆ ಉಸುರುದ್ರೋ