ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೯೬. ವೈಶಾಖ ಅಂಗೇಯ, ಒಂದು ಮಾತೂ ಇರುಕಿಸಿಕೊಳ್ಳದೇಯ ಗಂಗಿಗೆ ತಿಳುಸದ್ದ. ಈಗಲೀಗ ಗಂಗಿ ಎದುರಿದ ತರ ತೋರಿದ್ದು. “ದಿಟವಾಗೂ ಎಳಕಂಬಾ ಅಂದರೇನೊ?” “ಸತ್ತವಾಗೂ ಅಂದರು” ಗಂಗಿಗೆ ವಸಿವಸ್ಕಾಗಿ ಕಯ್ಯಕಾಲು ಎದುರಕ್ಕೆ ಸುರು ಆಯ್ತು. ವಳುಗಡೆ ವಲೆ ಕತ್ತಿಸಿ, ಹಿಟ್ಟಿಗೆ ಎಸರೆತ್ತುತಾ ಇದ್ದ ನಿಂಗಮ್ಮ, ಆ ಕೇಮೆಯ ಅರ್ಧಕೇ ಬುಟ್ಟು ಓಡಿಬಂದೋಳು, “ಸುಮ್ಮೆ ವೊಂಟೋಗು, ಗಂಗೆ, ಇನ್ನು ಆಟ ಮಾಡಾದು ತರವಲ್ಲ. ಹೊಲೇನ್ನ ಕಯ್ಲಿ ಎಳುಸಿಕೊತ್ತ ನಡುಬೀದೀಲಿ ಅಪಮಾನ ವೊಂದಕ್ಕಿಂತ, ಇಸ ತಕ್ಕಂಡು ಸಾಯಾದು ಲೇಸು” ಅಂದು, ಇವೇಕದ ಮಾತಾಡಿದ್ದು... - “ಮುಟ್ಟಾಗಿರೋ ಈ ಸ್ತಿತೀಲಿ, ಯಾವ ಮೊಕ ಇಟ್ಟುಕಂಡು ಪಂಚಾತಿಯೋರ ಮುಂದಕೋಗಿ ನಿಂತುಕೊಳ್ಳಲೆ, ನಿಂಗಿ?”- ಇಂಗಂದು ಕಣ್ಣೀರು ತಂದುಕಂಡರೂವೆ, ಲಕ್ಕನ ಕಡೀಕೆ ತಿರುಗಿ” ಊ, ಇನ್ನೇನ ಮಾಡಾದು, ಬತ್ತೀನಿ ನಡಿ” ಅಂದು ಲಕ್ಕನ ವಂದಗುಟ್ಟೆ ವೋಂಟ್ಟು, ಅಟ್ಟಿ ಜಗಲಿ ಹಬ್ಬಿಗೆ ಇಳೀತೂಲೂವೆ, “ನಿಂಗಿ, ನಾ ಬರದು ಏಟೋತ್ತಾದಾತೊ, ಯಾನು ಕತೆಯೊ. ನಮ್ಮೂರ ಪಂಚಾತಿ ಅಂದ್ರೆ ನಿಂಗೆ ಗತ್ತೇ ಅದಲ್ಲ. ಈ ಯಜಮಾನ್ನು ಉಂಡು ಕುಂತ್ರೆ ಸಣ್ಣಪುಟ್ಟ ನ್ಯಾಯ ಆದೂವೆ ಬೆಳುಕರಿಸ್ತಾರೆ. ವೋಟಲ್ಲಿ ಮಕ್ಕಳು, ನಿಮ್ಮೆಜಮಾನ್ನು, ನೀನು ಎಲ್ಲಾರು ಉಂಡುಕಂಡು, ಮಕ್ಕಳ ಮನಗಿಸಿರು” ಅಂತೇಳಿದ್ದು.... ಪಂಚಾತಿಕಟ್ಟೇಲಿ ಗಂಗಿ ಎಂಡೋರ ಮನಸೂ ಕರಗೂವಂಗೆ ಮಾತಾಡಿದ್ದಲು. “ನಾನು ಮುಟ್ಟಾಗಿರೊ ಎಂಗಸು. ನನ್ನ ಸ್ಥಿತೀಲಿ ರಾಜಾರೋಸ ಊರೂರೆಲ್ಲಾರ ಮುಂದಗಡೂವೆ ಇಂಗೆ ತಂದು ನಿಲ್ಲುಸೋದು ದರುಮವ? ಇಮ್ಮ ಎಡತಿ, ಎಣ್ಣುಮಕ್ಕಳೂ ನನ್ನಂಗೆ ತಪ್ಪು ಮಾತಾಡಿದ್ರೆ ಆವರೂವೆ ಇಂಗೆ ಪಂಚಾತಿ ಕಟ್ಟೇಲಿ ತಂದು ನಿಲ್ಲುಸ್ತಿದ್ರ?... ಅಲ್ಲದೇಯ, ನಾನೇನು ಅಂತಾ ಕತ್ತೆ ಹಾದರ ಮಾಡಿದ್ದು?- ನನ್ನ ದಾಯಾದಿ ನನ್ ಜಪಲಿನ ತೊಪ್ಯ ಮಾಸದಿಂದ ತನ್ನ ಕಡೀಕೆ ಆಕ್ಕತಿದ್ದ. ಆದ ಕಂಡು ಕಂಡೂ ಎಂಗೆ ಸುಮ್ಮಕಿರಾದು?... ನಿಮ್ಮಟ್ಟಿ ತೊಪ್ಯ ಯಾರಾರು ಇಂಗೆತ್ತಿದ್ರೆ ನೀವು ಸುಮ್ಮಕಾಗಿವ?... ಊ, ಅವ್ರು ಏಟೇ ಆದ್ರೂ ಗಂಡಸು, ಒಬ್ಬ ನಿಮ್ಮಂತ ಮೀಸೆವೊತ್ತ ಗಂಡಸೆ ನನ್ನ ಜಾಗದಲ್ಲಿ ಇದ್ದಿದ್ರೆ, ಅವಸ್ಥೆ ನಾಕ ತದಕಿ, ಉಟ್ಟಿದ ಜಿನವ ಕಾಣಿಸಿರಾನು.... ಆದ್ರೆ ನಾನು