________________
ಸಮಗ್ರ ಕಾದಂಬರಿಗಳು ೨೯೭ ಎಣ್ಣೆಂಗಸು, ಅನ್ನ ಮ್ಯಾಲೆ ಕಮ್ಮಿ ಮಾಡೋವೋಟು ತಾಕತ್ತ ಕೂಡ್ಲಿಲ್ಲ ದ್ವಾವರು...” ಸ್ಯಾಲೆ ಸೆರುಗ್ನಲ್ಲಿ ಕಣ್ಣೀರ ವತ್ತಿಕತ್ತಿದ್ದು. - ಯಜಮಾನೆಲ್ಲ ತಲೆ ಎಟ್ಟಿಗಂಡು ಕುಂತಿದ್ದು, ಅಲ್ಲಿ ಕುಂತಿದ್ದ ಎಲ್ಲಾ ಜಯಮಾನೂವೆ ಕೆಟ್ಟೋರೆಲ್ಲ. ದರಮಕರುಮ ತಿಳಿದಿರೊ ಮನತಾನಸ್ತರೂ ವಸಿ ಜನ ಆದ್ರೂ ಅಲ್ಲಿದ್ರು...ಆದ್ರೆ ಅವರಲ್ಲಿ ಒಬ್ಬರಾವೆ ಬಾಯ ತಗೀನಿಲ್ಲ. ಕೆಲವು ನಂಜೇಗೌಡನ೦ತೋರೆ ಎದುರಿ ಸುಮ್ಮತಿದ್ರೆ, ಇನ್ನು ಕೆಲವು ದಾರೀಲೋಗೋ ಮಾರಿ- ಅದನ್ಯಾಕೆ ನಮ್ಮಟ್ಟಿಗೆ ವೊಕ್ಕಿಸಿಕಾಬೇಕು? ಅಂತ ಸುಮ್ಮಕಾಗಿದ್ದು, ಇನ್ನು ವಸಿ ಜನ ಮಟದ ರುಣದಲ್ಲಿದೊರು. ಅವರಂತೂ ನಂಜೇಗೌಡಂಗೆ ಇರೋದ್ದಾಗಿ ವೋಗೋವಂಗೇ ಇನ್ನಿಲ್ಲ.... ಈಗ ಅಡವಿ ಮ್ಯಾಕ್ಕೆದ್ದ. “ಅವಳು ಯೋಳ್ಳಿರಾದೆಲ್ಲ ಸುತರಾಂ ಸುಳ್ಳು. ನನ್ನಸ, ಎಮ್ಮೆ ಅವಳ ಪಾಲಿನ ಕ್ವಟ್ಟಿಗೆ ಚಿಗದು, ಅಲ್ಲಾಕಿದ್ದ ತೊಪ್ಯ ಎತ್ತಿಗಂಡಿದ್ದೆ ಇನಾಯ್ಕ, ಅವಳ ದನಕರೀನ ತೊಪ್ಯ ನಾ ಮುಟ್ಟೇ ಇಲ್ಲ” ಅಂದ. ಅಡವಿ ಸತ್ಯದ ತಲೆ ಮೆಟ್ಟಂತೆ ಸಟೆಯಾಡಿದ್ದು ಕೇಳಿ, “ಎಂತಾ ಹಾದರಕೆ ಉಟ್ಟ ಮಾತಾಡಿಯೊ?... ನಿಮ್ಮಪ್ಪ ಬೀಜಕೆ ನೀ ಉಟ್ಟರಾದು ಸಾಜವಾದ್ರೆ ಇದ್ದದ್ದು ಇದ್ದಂಗೆ ಬೋಗಳೊ ಬಾಡಕಾವು” ಅಂದುಬುಟ್ಟು. ಕೆಲವು ಯಜಮಾನು ಇಂತದೇ ಸನಗು ಸಿಕ್ಕಲೀಂತ ಕಾಯ್ತಿದ್ರು, ತನ್ನ ಬಾಗ್ನಿಂದ ತಾನೇ ಗಂಗಿ ಕೆಟ್ಟ ವಾಕ್ಸ ಕಡಸಿ ಸಿಕ್ಕಾಕಂಡಿದ್ದು. ಮೆತ್ತಗೆ ನಂಜೇಗೌಡ ಗಂಗಪ್ಪ ಚುಚ್ಚಿದ, ತಟಕ್ಕೆ ಗಂಗಪ್ಪ ಎದ್ದು, “ಎಂತಾ ಬಾಯಪ್ಪ ಇವಳು?- ಲೇ ಗಂಗೆ, ಗ್ಯಾನ ಇಟ್ಕಂಡು ಮಾತಾಡು. ಅಡವಿಯಪ್ಪ ನಿನಗಿಂತ ಇರಿಯೋನು. ಅವನ್ನ ನಮ್ಮುಂಬೈ ಇಂಗೆ ಬಯ್ಯೋಳು, ಇನ್ನು ನಿಮ್ಮಟೇಲಿ ಇನ್ಯಾಪಾಟಿ ಅಡಿರಬೇಕು?” – ಎಂದು ಬೆದರುಸ್ಥ. - “ಏ, ಗಂಗಪ್ಪ-ನನ್ನ, ಲೇ ಗೀ ಅಂತ ಕರೀಬ್ಯಾಡ. ನಾ ಯೇನು ನಿನ್ನಡತಿ ಕೆಟ್ಟೋಗಿಲ್ಲ, ನಿನ್ನ ಕೈಲಿ ಇಂಗೆಲ್ಲ ಕರಸಿಕಳ್ಳಕ್ಕೆ?... “ಗಂಗಿ ಕಪಾಲ್ಕೆ ತಟ್ಟಿದ ತರ ಜಾಡಿಸಿದ್ದು. “ಇನ್ನೇನ ಮಾರಾಣಿ ಮೊಮ್ಮಗಳೂಂತ ಕರೀಬೇಕೇನೊ?... ಅಬ್ಬಬ್ಬ... ಎಂತಾ ಬಜಾರಿ ಎಂಗಸಪ್ಪ!- ನೀ ಯೇನಾರ ನನ್ನೆಡತಿ ಆಗಿ ಈ ಮಾತಾಡಿದೆ, ನಿನ್ನ ಸಿಗದು ಊರ ಮುಂ ದಿಡ್ಡಿ ಬಾಗಿಲೈ ಊಾರಣ ಕಟ್ಟಿದ್ದೆ!”