________________
೩೦೦ ವೈಶಾಖ ಅಂತ ಇಲ್ಲಿಗೆ ಕರಕಂಬಂದೆ... ನೀ ಯಾರೂ ಕುಟ್ಟೂ ಬಾಯಿ ಬಿಚ್ಚಕ್ಕಿಲಾಂದ್ರೆ ಯೋಳೀನಿ...” “ಇದ್ಯಾಕಯ್ಯಾರೆ ಇಂಗೆ ಅಪನಂಬಿಕೆ ಪಟ್ಟಿರಿ. ನನ್ನ ನೀವು ಕುಡಿ ಒಡೆಯೋವಾಗಿಂದ ಕಂಡಿದ್ದೀರಿ... ಒಬ್ಬರು ಆಡಿದ್ದ ಇನ್ನೊಬ್ರ ಕುಟ್ಟೆ ಯೋಳೊ ಸೋಬಾವ ನಂದಲ್ಲ ಅಂತ ನಿಮ್ಮ ಚೆಂದಾಗ ಗ್ರತ್ತದೆ. ಇಂಗಿರೊನೂವೆ, ಇನ್ನೂ ಯಾಕೆ ನನ್ನ ಗುಣವ ಕುಂದಣ ಮಟ್ಟೇಲಿ ವರೆ ಅಚ್ಚುತಾನೆ ಇದ್ದೀರಿ?... ಅದೇನಿದ್ರೂ ಯೋಳಿ, ಅಮ್ಮ ನನ್ನೋಳಗೇ ಜ್ವಾಪಾನಾಗಿ ಇಟ್ಟಕತ್ತೀನಿ. ನೀವು ಚಿಂತನೆ ಮಾಡಬ್ಯಾಡಿ” ಅಂದ. “ನೀ ಇಸ್ಸು ಅಂದಮ್ಯಾಲೆ ಯೋಳೀನಿ, ಕ್ಯಾಳಿಕೆ: ಗಂಗಿಗೆ ಐದ್ರೆ ನೀರಾದ ಮಾರನೆ ನಾತ್ರೆ, ದೀವಿಗೆ ಕೆಡಸಿ ಮನಗ್ನ ಸುಮಾರು ವೊತ್ತೇ ಆಗಿರಬೇಕು. ಆಲಬಾಧೆ ಅವಸರವಾಯ್ತು, ಎದ್ದೆ. ಎದ್ದೋನು ಕಟ್ಟಿಗೆ ದಾಟಿ ವೋಯ್ತಿರೋನೂವೆ, ಗಂಗಿ ಅಟ್ಟೇಲಿ ಯಾರೊ ಬ್ಯಾರೆ ಎಂಗಸಿನ ಸೊರ ಕ್ಯಾಳಿ ಅಂಗೇ ನಿಂತೆ. ನಿಂಗಮ್ಮ ದೊನಿಯಂತೂ ಅಲ್ಲವೇ ಅಲ್ಲ, ಇನ್ಯಾರು ಇರಬೈದು?- ಕುತೂಲಾತಿ, ಅವಳಟ್ಟಿ ಗ್ವಾಡೆ ಎತ್ತಿಗೆ ಜರಗ್ಡೆ... ಆಗ ವಳಗೆ ಆಡೋ ಮಾತು ಚೆಂದಾಗೆ ಕೇಳಿತ್ತು... “ಇದೇನ ಮಾದಮ್ಮ ಅಪರ್ಪಕ್ಕೆ ಬಂದಿದ್ದೀ? ಅದೂ ಈಟೋತ್ಸಲ್ಲಿ?” ಗಂಗಿ ಜೋಜಿಗ ಪಡ್ಡ ಕ್ಯಾಳಿದ್ದು, ನಂಗೂ ಚೋಜಿಗ ಆಯ್ತು, ಮಟದ ಮಾದಮ್ಮ ಯಾವತ್ತೂವೆ ಗಂಗಿ ಅಟ್ಟಿಗೆ ಬಂದದ್ದೇ ಕಾಣೆ. ಯೇನಿದ್ರೂವೆ ಮಟದಲ್ಲಿ ಯೇನಾರ ಇಸೇಸ ಇದ್ದು, ಗಂಗಿ ಅಲ್ಲಿಗೋದಾಗ ಇವರಿಬ್ರಿಗೂ ಸಿನೇಯ ಬೆಳುದಿರಬೇಕು.... ಏನೇ ಆದ್ರೂವೆ ಇವತ್ತು ಈ ಸಮನಾಲಿ ಈಟು ದೂರ ಈ ಮಾದಮ್ಮ ಪಯಣ ಬೆಳುಸಬೇಕಾರೆ ಇದರಲ್ಲೇನೋ ಕರಾಮತ್ತು ಇರಬೈದೂಂತ, ಗ್ವಾಡೆಗೆ ಇನ್ನೂ ವತ್ತಾಗೆ ಕಿವಿ ಕ್ವಟು ನಿಂತೆ. - “ಕ್ಯಾಳೆ ಗಂಗವ್ವ, ಆವತ್ತು ನಡದ ಪಂಚಾತೀಯ, ದೇವಗಣಗಲೆ ಮರದ ಇಂಚೋರಿ ನಿಂತು ನಾನೂವೆನ್ಸಾಡ್ತಾನೆ ಇದ್ದೆ. ನಂಗ್ಯಾಕೊ ಹಿತ ಕಾಣನಿಲ್ಲ...” ಮಾದಮ್ಮ ಅಪರ್ಪಕೆ ಬಂದು ಅವೋತ್ರ ನ್ಯಾಯದ ಸುದ್ದಿ ಎತ್ತಿದ್ದು, ಗಂಗಿ ವಳಗೇ ಬೆಚ್ಚಿರಬೇಕು... ಪಂಚಾತಿ ಆದ ದಿನದಿಂವೆ, ಅವಳು ಬೋ ಎದುರಿದ್ದು ಕನ್ಹ. ಮೊದಲ ಗತ್ತು, ಗಡಸು ಈಚೀಚೆ ತಣ್ಣಗಾದಂಗಿತ್ತು. “ಯಾಕೆ ಮಾದಮ್ಮ?” ಅಂತ ಕ್ಯಾಳಿದಾಗ ಅವಳ ಸೊರ ನಡುಗ್ತ ಇರೊವಂತೆ ಕಂಡು.