ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೩೦೧ ಅದ್ರೆ ಮಾದಮ್ಮ ಏನಂದ್ದು ಸ್ವತ್ತ? “ನಂಗೆ ಎಂಗೊತ್ತಾಗಬೇಕು. ಮುಂದಕೇಳಿ” ಅಂದಿದ್ದ ಲಕ್ಕ... ಆಗ ಮಾದಮ್ಮ ಬಿಗಿಯಾಗೇ ಅಂದ್ಲು: “ಯಾಕೆ ಅಂದ್ರೆ?- ನೀನೂ ಸರಿ. ವೋಟು ತೋರ ಜನದ ಮುಂದೆ ನಿನ್ನ ನಾಲಿಗೆ ಲಂಗುಲಗಾಮಿಲ್ಲೆ, ಅದ್ಯಾಕಂಗೆ ಯಗರಾಡ್ಡೆ?” ಅದ್ಯೆ ಗಂಗಿ, “ಮಂತೆ, ನನ್ನ ವೋಟು ಗೋಳುಕಿಚ್ಚ ಉಯ್ದರೆ, ಅದೇಟು ತೊರ ಸೈಸನೆ?” ಅಂತ ವಸಿ ಅಳೋಳಂಗೆಯ ಕ್ಯಾಳಿದ್ದು. ಮಟದ ಮಾದಮ್ಮ, “ಈಗ ಅದು ಆಗೋಯ್ತು . ಉಕ್ಕೊದ ಹಾಲು, ಅದ್ರ ಇಂದುಕೆ ಬಾ, ಅಂದ್ರೆ ಬಂದಾತ?... ಅದೆಂಗಾರ ವೋಗ್ಲಿ. ಈಗ ನಿಂಗೆ ಬಂದಿರೋ ಗಂಡಾಂತತ್ವ ಕ್ಯಾಳಿ, ಜೀವ ತಡೀದೆ ಇಲ್ಲಿಗೆ ನಾ ಓಡಬಂದಿ” ಅಂದ್ಲು. ಮಾದಮ್ಮ ಅಂಗಂದಾಗ ನಂಗೂ ಕುತೂಹಲವಾಯ್ತು. ನಂಗೇ ಆಯ್ತು ಅಂದಮ್ಯಾಗಿ ಇನ್ನು ಗಂಗಿಗೆ ಆಗದೆ ಇದ್ದದ?- ಅವಳು, “ಅದೇನ ಮಾದಮ್ಮ, ಬಾಯಿ ಬಿಟ್ಟೇಳು” ಅಂದ್ಲು, ಆಗ ಮಾದಮ್ಮ, “ಯಾನಂತ ಯೋಳ, ಗಂಗಿ?...ನಿನ್ನ-ನಿನ್ನ...” ಅಂತಿದೋಳು ದುಕ್ಕಡಿಸಿದಂಗಾಯ್ತು, ಮಾದಮ್ಮ ದುಕ್ಕಡಿಸಿದ್ದು ಗಂಗಿಗೆ ಗಾಬರಿ ಮಾಡಿರಬೇಕು. ಅವಳು, - “ಅದೇನ ವಸಿ ಓಡದು ಯೋಳವ್ವ-“ ಅಂತ ಗೈಾಗರಿದ್ದು. ಮಾದಮ್ಮ ಮುಂದೆ ಆಡ್ಡ ಮಾತ ಕ್ಯಾಳಿ ನಂಗೂವೆ ಮಯ್ಯ ನಡಗು. ಯಾಕಾರ ಪಂಚಾತಿಗೆ ಕ್ವಟೈ ಅನ್ನೂವಂಗಾಯ್ತು. ಅವಳೇನಂದ್ದು ಸ್ವತ್ತ? “ನೀನು ಬೋ ಅರಾಮಕೋರಿಯಂತೆ. ನಿನ್ನ ಲಿಪೇರಿ ಮಾಡಕ್ಕೆ ನಿನ್ನ ಚಾವಡಿಮುಂದೆ ತುಂಬಿದ ಸಭೇಲಿ ನಿನ್ನ ಸ್ಯಾಲೆ ಊರಾಕಿ, ಉಟ್ಟಿದ ನಿರ್ವಾಣ ನಿಲ್ಲುಸಿ, ಪಾಂಡವ ಕಲ್ಲು ಕಂಬಕೆ ಬಿಗಿದು, ಚಡೀಲಿ ವೋಡೀತಾರಂತೆ!...” ಈ ಮಾತು ಕಿವಿಗೆ ಬಿದ್ದು ಗಂಗಿ ಧರೆ ವಳೀಕೆ ಇಳುದೋಗಿರಬೇಕು. ಅವಳು “ಯಾರೆ-ಮಾದಮ್ಮ... ನಿಂಗೆ ಇಲ್ಲ-ಯೋಳಿದೋರು...?” ಅಂತ ತೊದಲಿದ್ದು, ಅದ್ರೆ ಮಾದಮ್ಮ, “ಅಯ್ಯೋ, ಯಾರೇನ ಯೋಳಬೇಕು?- ಆ ನಂಜೇಗೌಡ್ರು, ಗಂಗಪ್ಪನೋರು, ದೊಳ್ಳಪ್ಪನೋರು, ಇಂತಿಂತಾ ಯಜಮಾನ್ನೆಲ್ಲ ನಮ್ಮ ಮಟದ ಅಯ್ಯನೋರು ಇವತ್ತು ಸಂದೆ ದನೀಗೆ ಬಂದು, ನಾವು ಯಜಮಾನೆಲ್ಲ ಸೇರಿ