ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೦೪ ವೈಶಾಖ ವಕ್ಕಡೀಗೆ ಕಟ್ಟಿಟ್ಟು ಗಂಬೀಲ್ವಾಗಿ ಜೀವಣ ಮಾಡಾದ ಕಲಿ. ಸಣ್ಣಪುಟ್ಟ ಇಸ್ಯಕೆಲ್ಲ ಕಾಲ ಕೆರೆದು, ಮುಟ್ಟಿದ್ರೆ ಮುನಿಯಂಗೆ ಆಡಬ್ಯಾಡ”- ಇದು ಇಲ್ಲೀಗಂಟ ಸುಮ್ಮನೇ ಕುಂತಿದ್ದ ಪಟೇಲರ ಬುದ್ದುವಾದ! ಲಕ್ಕ ಕೆರೆ ಅತ್ರ ಇನ್ನೂ ಕಂತೇ ಇದ್ದ... ಅಲ್ಲ ಪಂಚಾತಿ ಮುಗದ ಏಟೋ ಜಿನದ ಗಂಟ ಲಕ್ಕನಿಗೆ ಅಡವಿ ಸಿಕ್ಕೇ ಇರನಿಲ್ಲ. ಮನೆಗೆಲ್ಯ, ಹೊಲಗೆಲ್ಬದಲ್ಲಿ, ಅಡವಿ ತಿಂಗಳಾನುಗಟ್ಟೆ ಸಂತೇಗೇ ಬಂದಿನಿಲ್ಲ. ಅವನು ಸಂತೆಗೆ ಬಂದೋನು, ಲಕ್ಕನ್ನ ಮುನಾ ತರ್ದೂದಾಗಿ ವೊಳೆ ಅತ್ರ ಕರಕಂಡೋಗಿ, “ನನ್ನ ಆ ಅಲಾಲುಕೋರ ನಂಜೇಗೌಡ ಮುಳುಗಿಸಿಬುಟ್ಟ ಕನ್ಯ, ಲಕ್ಕ” – ಅಳೋನಂಗೆ ಯೋಳ, “ಇದ್ಯಾಕೆ ಅಡವಿಯಪ್ಪಾರೆ, ನ್ಯಾಯ ನಿಮ್ಮ ಕಡೀಕೆ ಆಗದೆ. ಗಂಗವ್ವ ತೆಪ್ಪು ವಪ್ಪಿ, ತೆಪ್ಪು ಕಾಣಿಕೇನೂ ಪಂಚಾತ್ತೆ ವಪ್ಪಿಸ... - ಈ ತರ ಲಕ್ಕ ಅಂತಿರೋನೂವೆ, ಅಡವಿ. “ಅಯ್ಯೋ, ಮುಂದಕಾದ್ದು ನಿಂಗೆ ತಿಳೀದು, ಕ್ಯಾಳು... ಪಂಚಾಂದ ಅವಳ ಮಾನ ಮುಕ್ಕಾಗದಂಗೆ ಅಟ್ಟಿಗೆ ವಾಪಸು ಬಂದಮ್ಯಾಗೆ, ಗಂಗಿ ಜಪ್ಪಯ್ಯ ಮಟಕೆ ವೋಗಿ ಬರಾದು ಎಚ್ಚಾಯ್ತು ಕ...ಒಂದೇಡು ದಪ ಮಯ್ಯ ಇಳುದ್ದು ಅಂತಾನು ಜನ ಆಡಿಕತ್ತಾರೆ. ಕೆಲವು- ನಂಜೇಗೌಡ ಇವಳ ಊಟ ಮಾಡಿ ಪಂಚಾತೀಲಿ ಬಚಾವ್ ಮಾಡ್ಡ ಅಂತಾರೆ. ಇನ್ನು ಕೆಲವು- ಎಣ್ಣು ಲಕ್ಷಣವಾಗದೆ. ಮಟದ ಅಯ್ಯನೋರೆ ಯಾಕೆ ಅನುಬೋಗಿಸಿಬಾರು? ಅಂತಾನು ಅನುಮಾನ ಪಡ್ತಾರೆ...ಅಯ್ಯೋ, ಅವಳ ಮನೆ ಕಿಸಾಂತರಾಗ, ಆ ಲೌಡಿ ಯೇನಾರು ಮಾಡ್ಲಿ, ಅದ ಕಂಡು ನಂಗೇನು? -ಆದ್ರೆ ಈ ಗೋಜನ್ನಿಂದ ನಂಗೆ ಬಂದಿರೋ ಪೀಕಲಾಟ ನಾಡು...” ಅಂತ ಅಣೆ ಬಡಕಂಡ. - “ಅದೇನ-ಇದ್ರಿಂದ ನಿಮ್ಮ ಬಂದ ಪೀಕಲಾಟ?” – ಅರ್ತಾಗದೆ ಲಕ್ಕ ಕ್ಯಾಳಿದ್ದ. “ಸ್ವಾಥ್ ಲಕ್ಕೆ ನಮ್ಮ ಕ್ಲಟ್ಟಿಗೆ ಜಗಳಾನೆ ದೊಡ್ಡದು ಮಾಡಿ, ಆ ನಂಜೇಗೌಡ ಮುಂಬೈಯೇನು ಕತೆ ಮಾಡ್ಡ ಗೃನ್ದ. ನೆನ್ನೆ ಜಿನ ನಮ್ಮಟ್ಟಿ ತಾವಿಕೆ ಮೂರು ನಾಕು ನ್ಯಾಯಸ್ತರ ಕರಕಂಬಂದು, ನಮ್ಮ ಕ್ವಟ್ಟಿಗೇಲಿ ಅರ್ದಕ್ಕೆ ಸಮ್ಮಾಗಿ ಗುರು ಮಾಡಿ, 'ಇಲ್ನೋಡೊ ಅಡವಿ, ಇನ್ನುಮ್ಯಾಗೆ, ನಿಮ್ಮಿಬ್ರ ಜಗಳವ ಸಾಸ್ವತ್ತಾಗಿ ತೆಪ್ಪುಲಕ್ಕೆ ನಮ್ಮ ಮಟದ ಬುದ್ಯೋರು ಅವರ ಕ್ವಿಟ್ಟಿಗೆ ಇಬ್ಬಾಗ ಮಾಡಿ, ಯಾರೂವೆ