ಪುಟ:ವೈಶಾಖ.pdf/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ಅನ್ನಾಯ ಆಗದಂಗೆ ಅರ್ದಕ್ಕೆ ಸಾಗಿ ಗ್ವಾಡೆ ಎತ್ತಿಸಿಬುಡೀಂತ ಅಪ್ಪಣೆ ಕ್ವಡಿಸಿದ್ರು. ಅದ್ರೆ ಒಂದು ಗುರ್ತು ಮಾಡಿವಿ, ಗಂಗವ್ವ, ನೀನು ಅರ್ತ ಮಾಡೋ... ಈಗ ನೀವಿಬ್ರೂವೆ ಅರ್ದದ್ರ ಕರ್ಚು ಆಕ್ಕಂಡು ತಕ್ಷಣ ಗ್ವಾಡೆ ಕೆಲ್ಸಕ್ಕೆ ಸುರು ಮಾಡ್ಲಿಒಂದು ಪಕ್ಷ ನೀವಿಬ್ರೂ ಯೇನಾರ ನಿದಾನ ಮಾಡ್ರೆ, ನಾವು ಪಂಚಾತಿಂಧೆ ಗ್ವಾಡ್ಯ ಆಕ್ಸಿ ನಮ್ಮ ಪಂಚಾತಿಗೆ ತಗ ಕಟ್ಟರೂಂತ ನಿಮ್ಮಿಬ್ಬರಿಂದಲೂವೆ ದಂಡ ವಸೂಲು ಮಾಡ್ತೀವಿ' ಅಂತ ಎಚ್ಚರೆ ಮಾತೇಳ, ನಂಗೆ ಜೀವಾನೆ ವೋಯ್ತು. ನಮಾಜು ಮಾಡಕ್ಕೋಗಿ ಮಸೀದ್ಯ ತಲೆ ಮ್ಯಾಲೆ ಕೆಡೀಕಂಡಂಗಾಯ್ತು!... 'ಬ್ಯಾಡಿಕನಪ್ಪ ಅರ್ದದ್ರ ಮಾಡಬ್ಯಾಡಿ, ಗಂಗಿ ತಾವು ಇರೋವೈ ವೋಲಿಸಿದೆ, ನನ್ನತ್ರ ಇರೋ ದನ ಕರೀನ ರಾಸು ದೊಡ್ಡದು. ಅದು ನ್ಯಾಯ ಅಲ್ಲ. ಅವಳೆ ಕಾಲು, ನನ್ಗ ಮುಕ್ಕಾಲು ಮಾಡಿಬುಡೀಂತ ಪರಿಪರಾಗಿ ಬೇಡಿದೆ. ಅವನ್ಯಾರು ಜಪ್ಪಯ್ಯ ಅನ್ನನಿಲ್ಲ... ಈಗೇನ್ದ ಮಾಡಾದು?” ಅಂತ ಲಕ್ಕನ್ನ ಕ್ಯಾಳಿದ. ಲಕ್ಕಂಗೆ ಯೇನೇಳಕ್ಕೂ ವೊಳೀದೆ, “ನಂಗೇನಯ್ಯ ತಿಳಿದುದು?...”ಅಂದ. ವಸಿ ಸಮಯ ಯೋಚ್ಛೆ ಮಾಡ್ತ ವೊಳೆ ನೀರೆ ಬಿರುಗಣ್ಣು ಬುಟ್ಟುಲ್ವಾಡ ಕುಂತಿದ್ದ ಅಡವಿ, “ಊ, ಇನ್ನು ಯೇಟು ಚಿಂತೆ ಮಾಡದೂ ಆ ಬೊಡೀ ಮಕ್ಕಳು ಬುಡಕ್ಕಿಲ್ಲ - ಲಕ್ಕ, ನಾನೀಗ ಒಂದು ಕೆಲ್ಸ ಮಾಡ್ತೀನಿ, ಕೆರೆ ಅಂಗಳದಲ್ಲಿ ಕೆಂಗಣ್ಣಪ್ಪ ಎಂಗಿದ್ರೂವೆ ಇಟ್ಟಿಗೆ ಕುಯ್ಯ. ನೀನೊಸಿ ನಮ್ಮ ಗಾಡೀಲಿ ಆ ಗ್ವಾಡೆ ಎತ್ತೋವೋಟು ವೊಡಕ್ವಡು. ಕೆಂಗಣ್ಣಪ್ಪಂಗೆ ನಾನು ಯೋಳಿಕತ್ತೀನಿ. ಅವ್ರು ನಂಗೆ ನೆಂಟ, ಇಂದ್ರಿಂದ ದುಡ್ಡು ಕಡತೀನಿ ಅಂದ್ರು ವಲ್ಲೆ ಅನ್ನಕ್ಕಿಲ್ಲ. ಗಾರೆ ರಾಮಯ್ಯಂಗೂ ಯೋಳೀನಿ. ಆಮ್ಯಾಕೆ ನೀ ಬಂದು ಅವನು ಗ್ಯಾಡೆ ಕಟ್ಟೋ ನಾಗ ನೀರು, ಇಟ್ಟಿಗೇಯ ಅವಸ್ಥೆ ಸರಾಜು ಮಾಡಡು. ಅದೇನು ಕಂಬಳಾಯ್ತದೊ ಊಟೇನಂತೆ...” ಅಂದಿದ್ದ. ಆಗ ಲಕ್ಕ. “ಅಂಗಾರ ಗ್ವಾಡ್ಯ ನೀವೊಬ್ರೆ ನಿಮ್ಮ ಕರ್ಚಿನಿಂಧೆ ಯೇಳಿಸಿಬುಟೀರ?” ಪ್ರಶ್ನೆ ಮಾಡಿದ್ದ. “ಇಲ್ಲ ಕಣ್ಣ, ಗಂಗೀ ಎಣ್ಣೆಂಗಸಲ್ವ?- ನಾನು ಕಟ್ಟಿಸ್ತೀನಿ. ಒಟ್ನಲ್ಲಿ ಅನು ಕರ್ಚಾಯ್ತದೊ ಅದ ಯಾಜಮಾನ್ರಿಗೇಳಿ ಗಂಗಿ ಕಡಿಂದ ವಸೂಲು ಮಾಡ್ತೀನಿ” ಅಂದಿದ್ದ ಅಡವಿ.