________________
ಸಮಗ್ರ ಕಾದಂಬರಿಗಳು ೩೦೭ ಗುಡ್ಡಿಗೆ ಬಂದಿರನಿಲ್ಲ. ಸಿವುನಿ “ಯೆತ್ತಾಗಿ ವೋಗಿದ್ಯಣ್ಣ?” ಅಂತ ಕೆಳಿದೋಳು, ಅನ್ನಿಂದ ಉತ್ತರ ಬರದೇ ಇದ್ದ ಕಂಡು, ಒಲೆ ಕುಸಕ್ಕೆ ಕ್ಲಾಣೆಗೋಡ್ಲು. ಲಕ್ಕ ಮಚ್ಚಿಗೆ ಇಡಿ ಜೋಡುಕ್ತ ಕುಂತ. ಯಾರೊ ಮೆತ್ತಗೆ ನಕ್ಕಂಗಾಯ್ತು! ವೋಳ್ಳಿ ಕ್ವಾಡ-ನಕ್ಕಿದ್ದು ಸಿವುನಿ ಮೊಗ... ಕಣ್ಣ ಮುಚ್ಚಿದಂಗೇಯ ಅದರ ಮೊಕದ ತುಂಬ ಕುಸಿ ತುಂಬಿತ್ತು. ಇದಿಯಮ್ಮ ಚಕ್ಕಲಗುಲಿ ಆಡಸ್ತಿರಬೇಕು, ಅಂದುಕೊಂಡ ಲಕ್ಕ. ಮೊಗ ಧ್ವಡೋರ ಸಂಕಟ, ಯೆತೆ, ಯಾವೊ ಕಾಣ್ಣೆ ತನ್ನೊಟ್ಟಿಗೆ ತಾನು ಬ್ಯಾರೆ ಪರ್ಪಂಚದಾಗೆ ಇದ್ದಂಗಿತ್ತು... ಯಜಮಾನ್ನೆಲ್ಲ ಬಂದು ಚಾವಡಿಗೆ ಸೆರಿದನಂತರ ಲಕ್ಕನಿಗೆ ಪಂಚಾಯಿತಿ ಕಟ್ಟೆಗೆ ಹಾಜಾರಾಗಬೇಕೆಂದು ಕರೆ ಬಂತು. ಅವರ ಆಣತಿ ಹೊತ್ತು ತಂದವನು ಕುಳಿವಾಡಿ ಕುಂದೂರಯ್ಯ- ಲಕ್ಕನ ದೊಡ್ಡಪ್ಪನೆ!... ಮಚ್ಚಿಗೆ ಹಿಡಿ ಜೋಡಿಸ್ತ ಕುಂತಿದ್ದ ಲಕ್ಕ, ದೊಡ್ಡಯ್ಯ ಇಸ್ಯ ತಿಳುಸ್ಥ ತಕ್ಷಣ ಎದ್ದು ಅವನ ಇಂದುಗುಟ್ಟೆ ವೊಂಟ... ಮುಂದಮುಂದಾಗಿ ನಡೀತಿದ್ದ ಕುಂದೂರಯ್ಯ ಕಣ್ಣೀರ ವತ್ತಿಗೊತ್ತಾನೆ ವೋಯ್ತಿದ್ದ... ಲಕ್ಕನ ಎದೆಗೂಡಲ್ಲಿ “ಮುತ್ತಿನಂತಾ ಕಾಲ್ನಲ್ಲೋಗಿ ಮಿತ್ತಿನಂತಾ ಮತ ತಂದ್ಯಲೊ ಮಗನೆ”- ಅವ್ವನ ಈ ಮಾತುಗಳೇ ಕೊಟ್ಟ ಕುಟ್ಟಿದೊ... ಈ ಯೋಚೇಲಿ ಚಾವಡಿ ಸಮೀಪಿಸಿದ್ದೂ ಲಕ್ಕಂಗೇ ತಿಳೀನಿಲ್ಲ.... ಚಾವಡಿಯ ಒಳಗೆ ಕುಳಿತು, ಎರಡು ಬೆರಳಿನ ನಡುವೆ ಚಿಟಿಕೆ ನಶ್ಯ ಹಿಡಿದು, ಅದನ್ನು ಮೂಗಿನ ಹೊಳ್ಳೆಗಳ ಹತ್ತಿರ ಒಯ್ಯುವುದು, ಮೂಸುವುದು, ಆದರೆ ನಶ್ಯ ಮಾತ್ರ ಖರ್ಚಾಗಬಾರದು- ಪಂಚಾಯಿತಿ ಕಟ್ಟೆಯೊಳಗೆ ಬೆಟ್ಟಯ್ಯ ಈ ತರ ಮಾಡುತ್ತಲೆ ಇದ್ದ. ಅವನು ಹೀಗೆ ಮಾಡುವುದನ್ನೇ ಸ್ವಲ್ಪ ಸಮಯದಿಂದ ಗಮನಿಸುತ್ತಿದ್ದ ನಂಜೇಗೌಡ, ಶ್ಯಾನುಭೋಗರ ಕಿವಿಯಲ್ಲಿ, “ಆ ಚಾಂಡಾಲ್ಪ ಸ್ವಾಡಿದ, ಸೋಮಿ?- ಅಮ್ಮ ಯಾವಾಗೂ ಇಂಗೇಯ. ಜೀನ ಅಂದ್ರೆ ಜೀನ, ಕ್ವಾಡಿ, ಒಂದು ಚಿಟಿಕೆ ನಸ್ಯದ ಮೂಗ್ಗೆ ವಾಸಣ ತಕ್ಕಂಡಂಗೂ ಆಗಬೇಕು. ನಸ್ಯ ಕರ್ಚೂ ಆಗಬಾರು! ನಮ್ಮಟ್ಟಿಗೆ ಯಾವಾಗಲಾರು ಬಂದಾಗ, ನನ್ನೆಡತಿ ಅಕ್ಕಿರೊಟ್ಟಿ ಅರೆಮೆಣಸಿನ ಖಾರ ಕ್ವಿಟ್ಟು, ಅದ್ರೆ ಈ ತೋರ ಬೆಣ್ಣೆ ಆಕ್ಕೋಟೆ, ಈ ಬೊಡ್ಡಿ ಹೈದ ರೊಟ್ಟಿ ಖಾರ ತಿನ್ನುವಾಗ, ರೊಟ್ಟಿ ಮುರುಕ ಬೆಣ್ಣೆಗೆ ಇಂಗೆ ಮುಟ್ಟಿಸೋದು ಅಂಗೆ ಬಾಯ್ದೆ ಅಕ್ಕಳೋದು ಕಡೀಕೆ ಉಳುಕಂಡ