ಪುಟ:ವೈಶಾಖ.pdf/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೦೮ ವೈಶಾಖ ವೋಟು ತೋರ ಬೆಣ್ಣೆನೂವೆ ಗುಳುಂನೆ ನುಂಗೋದು!... ಬೋ ಆಸೆಪುರಕ, ಸೋಮಿ, ಬದುಕಕ್ಕೆ ಇಪರೀತ ಆಸೆ, ಇವನಿಗೇನಾರು ಆಯಸು ಖರೀದೆ ಸಿಕ್ಯೂವಂಗಿದ್ರೆ, ಅದ್ರೂ ಕೊಂಡು, ಬೀಗಮುದ್ರೆ ಮಾಡಿರೋನು!- ಸತ್ತ ಎಣದ ಕಯ್ಲಿ ಕ್ರಯಪತ್ರಕ್ಕೆ ರುಜು ಆಕ್ಸಿ, ಅಮ್ಮನ ತಾವಳ ಆಸ್ತಿಯ ವೋಡಕೊತಿಲ್ವಅಂಗೆ!” ಎಂದು ಉಸುರಿದ. ಅದಕ್ಕೆ ಶ್ಯಾನುಭೋಗರೂ ಪಿಸುಮಾತಿನಲ್ಲೆ, “ಹೌದೌದು, ಆ ಸಮಾಚಾರವನ್ನು ಇತ್ತೀಚೆಗೆ ನಾನೂ ಕೇಳಿದೆ. ಇವನ ಹೆಂಡತಿಯ ಗುಟ್ಟು ಗುಟ್ಟು ಎಂದು ಊರಿನಲ್ಲಿ ಯಾರೊ ಒಬ್ಬಳ ಸಂಗಡ ಹೇಳಿದ್ದ, ಹಾಗೇ ಒಬ್ಬರಿಂದ ಇನ್ನೊಬ್ಬರ ಕಿವಿಗೆ ಬಿದ್ದು ಕೊನೆಗೆ ನನ್ನ ಕಿವಿಗೂ ಬಿದ್ದಿದೆ”-ಎಂದು ನುಡಿದರು. “ಯೇನ ಮಾಡಾದು, ಸೋಮಿ, ಬೊಡ್ಡಿ ಹೈದ ಗೆಲ್ಲೊದ. ಪಂಚಾತೀಲಿ ನೀವು ಕಂಡಂಗೆ ಸಾಕ್ಷಿ ಯೋಳೋರೆ ಇನ್ನಿಲ್ಲ. ಅದಾದಮ್ಯಾಲೇಯ ಆ ಎಂಗಸು ಈ ಸುದ್ಯ ಟಾಂ ಟಾಂ ಮಾಡದ್ದು...ಈಗೇನ ಮಾಡೂವಂಗೆ ಇದ್ದದ್ದು?- ಈಗ ಅವ್ರ ಕ್ಯಳಿದೆ, “ಅಯ್ಯೋ, ಆ ಎಂಗಸು ಮುಂಡೆ ಮಾತ್ರವೆ ಒಂದು ಲಿಂಗ ಅಂತ ಕಟ್ಕಂಡು ಆಡು' ಅಂತ ಮಾತ ತೇಲಿಸಿಬುಡ್ತಾನೆ...” ಅಂದ ನಂಜೇಗೌಡ. ಇವರಿಬ್ಬರೂ ಹೀಗೆ ಗೋಪ್ಯವಾಗಿ ಸಂಭಾಷಿಸುತ್ತಿರುವಾಗ, ಕುಳವಾಡಿ ಕುಂದೂರಯ್ಯ ಸಮೀಪಿಸಿ,- “ಎಲ್ಲಾರು ಸೇರವೆ, ಸೋಮಿ” ಎಂದು ಬಿನ್ನವಿಸಿದ. ಶ್ಯಾನುಭೋಗರು, “ಹಾಗಾದ್ರೆ ಶುರು ಮಾಡಬಹುದಲ್ಲ?” ಚಾವಡಿಯೊಳಗೆ ಕುಳಿತ ಯಜಮಾನರುಗಳತ್ತ ದೃಷ್ಟಿ ಹೊರಳಿಸಿ ಕೇಳಿದರು... ಆಗ ನೆರೆದಿದ್ದ ಯಜಮಾನರೆಲ್ಲ “ಆಗಬಹುದು” ಎಂದು ಒಪ್ಪಿಗೆಯಿತ್ತರು. ಎಲೆ ಅಡಿಕೆ ಜಗಿಯುತ್ತ, ಮಹಿಳೆಯರ ಗಡಣದಲ್ಲಿ ಒಂದು ಪಾರ್ಶ್ವಕ್ಕೆ ಕುಳಿತ ಬುಂಡಮ್ಮ, “ಸುರು ಆಯ್ತು ಕನವ, ಇವರ ಕೊಳೆ ಪಂಚಾತಿ” ಎಂದು ಅಣಕವಾಡಿ ಸುತ್ತ ಕುಳಿತ ಮಹಿಳೆಯರನ್ನು ನಗಸಿದ್ದಲು. ಇನ್ನೊಂದು ಪಾರ್ಶ್ವಕ್ಕೆ ಹೋಲತಿಯರ ಗುಂಪಿನಲ್ಲಿ ಕುಳಿತ ಕಲ್ಯಾಣಿ, ದ್ಯಾವಾಜಮ್ಮನ ಸಂಗಡ “ನಮ್ಮ ಪಾಡಿಗೆ ನಾವು ಸಿವನೆ ದ್ಯಾವರೆ ಅಂತ ನಮ್ಮ ಭಂಗ ನಾವು ಮಾಡಿಕತ್ತ, ಎಣುಸಾಕ್ಷ ಕಜ್ಜಾಯದಂಗೆ ಇದ್ದರೂವೆ, ನಮ್ಮೆ ತಗಲಿಕಂಡ ಉಪದ್ರ