ಪುಟ:ವೈಶಾಖ.pdf/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೩೦೯ ಕ್ವಾಡೆ ದ್ಯಾವಾಜಿ...” ಎಂದು ಬಿಕ್ಕಿದಳು. ಅದಕುತ್ತರವಾಗಿ ದ್ಯಾವಾಜಮ್ಮ. “ಯಾನ ಮಾಡಕ್ಕಾದಾತು, ಕಲ್ಯಾಣಿ, ಮನಸನೆ ಬಗ್ಗೆ, ಮರಕ್ಕೆ ಬಂದಾತ?... ಬದುಕಲ್ಲಿ ಇಂಗೆ ಒಂದೊಂದು ದಪ ಯೆಡವಟ್ಟಾಯ್ತದೆ. ಸೈಸಿಕಾಬೇಕು” ಎಂದು ತತ್ತವೋಪದೇಶ ಮಾಡಿದಳು. “ನ್ಯಾಯ ಸುರು ಆಯ್ತು, ಸದ್ದು ಸದ್ದು”- ಎಂದು ಕುಳವಾಡಿ ಕುಂದೂರಯ್ಯ ತಮಟೆ ಬಾರಿಸುತ್ತ ಸಾರಿದ. ಅಲ್ಲೊಬ್ಬರು ಇಲ್ಲೊಬ್ಬರು ತೆಳ್ಳ ತೆಳ್ಳಗೆ ಪರಸ್ಪರ ಮಾತನಾಡಿಕೊಳ್ಳುತ್ತಿದ್ದರೂ ಒಟ್ಟಿನಲ್ಲಿ ಜನರ ಗುಜುಗುಜು ಸದ್ದ ಬಹುತೇಕ ಅಡಗಿತು. ದುಪಟ, ಕಂಬಳಿ, ಶಾಲು ಹೊದ್ದು ಕುಳಿತ ಜನರ ಮೇಲೆ ಬೆಳದಿಂಗಳು ತನ್ನ ಬೆಳ್ಳಿ ಲೇಪವನ್ನು ಸವರುತ್ತ ಬರುತ್ತಿತ್ತು. ಅವರೆಲ್ಲರೂ ಬೇರೆ ಯಾವುದೋ ಲೋಕದ ವ್ಯಕ್ತಿಗಳಂತೆ ವಿಲಕ್ಷಣವಾಗಿ ತೋರುತ್ತಿದ್ದರು. ಲಕ್ಕನ ದುಸ್ಸಿ ಮಾತ್ರ ತನ್ನ ಎಡಗಡೀಕೆ ಗುಂಪಲ್ಲಿ ಆರಾಮಾಗಿ ನಿಂತಿದ್ದ ಗರುಡಗಂಬದ ದಾಸಯ್ಯಲ್ಲೆ ನಟ್ಟಿತ್ತು. ಊರಿಗೆ ಆಗಿಂದಾಗ ಬತ್ತಾ ಇದ್ದ ದಾಸಯ್ಯ ಅಮ್ಮ, ಬಿಳಿ ಅಂಗರೇಕು ತೊಟ್ಟು, ಒಂದು ವರಿಸೇಲಿ ಕಚ್ಚೆಪಂಚೆ ಬಿಗುದು, ತಲೆ ಮ್ಯಾಲೆ ಕಣ್ಣು ತುಂಬವಂಗೆ ಬಿಳಿ ಚುಕ್ಯ ಕೆಂಪು ರಂಗಿನ ದಪ್ಪಾನೆ ಪೇಟ ಸುತ್ತಿ, ಗರುಡಗಂಬವ ಪಕ್ಕದಾಗಿಟ್ಟು, ಊರ ನಡಮದ್ಯದಲ್ಲಿ ನಿಂತು ಅವು ಸಂಕ ಬಾಯಾಗಿಟ್ಟು ಭೋಂ ಭೋಂ- ಅಂತ ಬಜಾಸಿದ್ರೆ ಸಾಕು. ಗ್ರಾಮದ ಉಳುಕೆ ಹೈಕಳಂಗೆ ಲಕ್ಕನೂವೆ ಅವ್ರ ಮುಂಬೈ ಓಡೋಗಿ ನಿಂತುಕತ್ತಿದ್ದ. ಆಗ ಉಳುಕೆ ಹೈಕಳಂಗೆ ಲಕ್ಕನ ಕ್ವಾಟವೆಲ್ಲ ಗರುಡಗಂಬದ ಮ್ಯಾಲೆ ಸನ್ಯಾಸಿ ತರ ಗಮ್ಮನೆ ಕುಂತ ಗರುಡಪಕ್ಷಿ ಸುತ್ತಾಲು ಸುತ್ತುತ್ತಾ ಇತ್ತು. ಚಿನ್ನದ ತಗಡ್ಡೆ ವೊದಿಕೆ ಮಾಡಂಗೆ ಮಿರಮಿರೈ ಮಿಂಚೊ ಗಡಿ, ಬೆಳ್ಳುಂಬೆಳೆ ರೇಷ್ಮೆ ತುಪ್ಪಟಾನೆ ತುಂಬಿಕಂಡಂಗೆ ಇದ್ದ ಅದರ ದಪ್ಪಾನೆ ಕತ್ತು, ಒಂದು ದಪ ಕುಕ್ಕಿದರೆ ಕರುಳೆ ಬಗಿಯಾವಂಗಿದ್ದ ಅದರ ಕೊಕ್ಕು- ಇವು ಒಂದೊಂದ್ರೂ ಏಟೊತ್ತು ನ್ಯಾಡ್ತಾ ನಿಂತರೂವೆ ಲಕ್ಕಂಗೆ ಬ್ಯಾಸರ ಅನ್ನದೆ ಇನ್ನಿಲ್ಲ... ಉಳ್ಳೋರ ಹೈಕಳು ದಾಸಯ್ಯಂಗೆ ರಾಗೀನೋ, ಜ್ವಾಳನೊ, ಅಕ್ಕಿನೊ, ಇಲ್ಲ ಕೋನಿಕೆ ಕಾಸನೊ ತಂತಮ್ಮ ಅಟ್ಟಿಗಳಿಂದ ಈಸುಗಂಬಂದು ನೀಡೋರು. ಲಕ್ಕಂಗೆ ತಾನೂ ಯೇನಾರ (ಡಬೇಕೂಂತ ಆಸೆ. ಆದ್ರೆ ಅವ್ರ ಜೋಬು ಯಾವುವೆ ಖಾಲಿ!... ಆದ್ರಿಂದ ಯಾವತ್ತೂ ದೂರದಾಗೆ ಸಪ್ಪೆಮ್ಮಾರೆ ಅಕಿ ನಿಂತಿದ್ದ, ಇಂಗಿರಬೇಕಾರೆ, ಒಂದ್ಬಲ ಲಕ್ಕನ ದೊಡ್ಡಯ್ಯ ಕಡ್ಲೆಪುರಿ ತಕ್ಕೊ ಅಂತ ಲಕ್ಕಂಗೆ ಒಂದಾಣೆ ಕ್ವಿಟ್ಟಿದ್ದ. ಲಕ್ಕ ಅದ್ರೆ