ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೧೦ ವೈಶಾಖ ತಂದು ದಾಸಯ್ಯಂಗೆ ವಷ್ಟುಸಿದ್ದ. ದಾಸಯ್ಯಂಗೆ ಏನನ್ನುತ್ತೋ, ಆ ಒಂದಾಣೆ ಜೊತೆ ಇನ್ನೂ ಒಂದಾಣೆ ತನ್ನ ಜೋಬಿಂದ ತಗುದು, 'ನಿನ್ನಂತೇರ ಅತ್ರ ನಾ ಯೆಂದೂ ದುಡ್ಡು ಈಸುಗಳಕ್ಕಿಲ್ಲ, ತಕ್ಕೊ, ನಿನ್ನಾಣೆ ಜ್ವತೆ ಈ ಆಣೇನೂ ತಕ್ಕಂಡೋಗಿ ನಿಂಗೇನು ಆಸ್ಕೊ ಅದ ಕ್ವಿಂಡು ತಿನ್ನು' ಅಂದು ಲಕ್ಕನ ಕಯ್ಯಾಗಿಟ್ಟಿದ್ದ ಆ ದಿನಾನೆ ಸಮ, ಆಗ್ನಿಂದಲೂವೆ ಗರುಡಗಂಬದ ದಾಸಯ್ಯಂಗೂ ಲಕ್ಕಂಗೂ ಬಾಲ್ಯದಿಂದ್ದೆ ಸಿನೇಮಿತತನದ ಕೊಂಡಿ ಬೆಸಗಂಡಿತ್ತು, ಲಕ್ಕನ ಆಸೆ ಕ್ವಾಡನಾಗ್ಡೆ, ಬಾಕಿ ಹೈಕಳು ಅಂಗೂವೆ ಊರೋರು ಯಾರೂ ಇಲ್ಲೇ ಇದ್ದ ಸ್ವಡಿ, ದಾಸಯ್ಯ ಆ ಗುರುಡಪಕ್ಷಿ ಮುಟ್ಟಕ್ಕೆ ಲಕ್ಕಂಗೆ ಅವಕಾಸ ಕಟ್ಟಿದ್ದ... ತಳ ತಳ ವೊಳೆಯೊ ಆ ಪಕ್ಷಿಯ ಗರಿ ಮುಟ್ಟಿದಾಗ, ಲಕ್ಕನ ಜೀವ ಸೊರ್ಗಕ್ಕೇ ವೋಗಿ ಕುಂತಂಗಾಗಿತ್ತು.... ಇನ್ನೊಂದು ಜಿನ ಆ ದಾಸಯ್ಯ ದೊಡ್ಡ ಮನಸು ಮಾಡಿ, ಆ ಗರುಡಪಕ್ಷಿಯ ಲಕ್ಕನ ಎಗಲಮ್ಯಾಲೇ ಕುಂಡರಿಸಿದ್ದ!- ಆಗಂತೂ ಲಕ್ಕನ ಮನಸು ನವಿಲುಗರಿ ಬಿಚ್ಚಿದಂಗೆ ಕುಣಿದಾಡ್ತಿತ್ತು... ಅವರಿಬ್ಬರೂ ಇಂಗೇ ಸರಾಗ ಬೆಳೀತು. ದಾಸಯ್ಯ ಊರಿಗೆ ಬಂದ ಅಂದೆ, ಲಕ್ಕ ಓಡೋಗಿ ಆ ಗರುಡಪಕ್ಷಿಯ, ಯಾರೂ ಇಲ್ಲೇ ಇದ್ದ ಕ್ವಾಡಿ, ಕಯ್ಯಗೆತ್ತಿ ತನ್ನೆದೆಗೆ ಅವುಚಿಕೊಳೊನು. ಒಂದೊಂದು ದಪ ತಲೆ ಮ್ಯಾಲೆ ಕುಂಡುರಿಸಿ ಕುಣಿದಾಡೋನು... ಇಂಗೆಲ್ಲ ಆಟ ಆಡ್ತಿದ್ದ.... ದಾಸಯ್ಯ ಸಂಗಾಟ ಲಕ್ಕನ ಸಮ್ಮಂದ ಇಂಗೆ ಎಣಕಂಡು ಬಂದಿ!... ಈ ದಿವೃ ಅಪರಾದಿ ಸ್ಥಾನದಲ್ಲಿ ನಿಂತ ಲಕ್ಕಂಗೆ ದಾಸಯ್ಯ ಸ್ವಾಡೋ ದೈರ್ಯ ಬರನಿಲ್ಲ. ಅವನ ಸ್ವಾಟವೆಲ್ಲ ಆ ಗರುಡಪಕ್ಷೀಲೆ ನಟ್ಟಿತ್ತು!...

ಲಕ್ಕೆ ಇಂಗೆ ಯೋಚೇಲಿ ಮುಳುಗಿರೋನೂವೆ, “ಲಕ್ಕೆ ಬಂದಿದಾನೇನಪ್ಪ, ಕುಳವಾಡಿ?” ಶ್ಯಾನುಭೋಗರು ಕೇಳಿದರು, ಕುಂದೂರಯ್ಯ, “ಬಂದೇಟೊ ವೊತ್ತಾಯ್ತು, ಸೋಮಿ” ಎಂದ. ಅಷ್ಟರಲ್ಲಿ ನಂಜೇಗೌಡ ಶ್ಯಾನುಭೋಗರ ಸಮೀಪಕ್ಕೆ ಸರಿದು ಮೆಲ್ಲನೆ - “ಸ್ಯಾನುಭೋಗರೆ, ಯಾಕೊ ಹಾಳು ಮೊಟ್ಟೆ ಬೆಳುಗ್ನಿಂದ ತಡೀತ ಇಲ್ಲ. ಒಂದು ಕಾಲುಗಂಟೆ ಟೇಂ ಕ್ಲಟ್ಟರೆ ಸಾಕು.” ಇಂಗೋಗಿ ಅಂಗೆ ಬಂದುಬುಡ್ತೀನಿ” ಅಂತ ಬೇತುಗಂಡ. “ಓ, ಹೊಟ್ಟೆಕಳೆತ!- ಎಷ್ಟು ದಿನದಿಂದ ನಂಜೇಗೌಡರೇ?”ಶ್ಯಾನುಬೋಗರು ಸ್ವಲ್ಪ ಗಟ್ಟಿಯಾಗೆ ಕೇಳಿದರು. “ನೆನ್ನೆ ನಾಂದ, ಸೋಮಿ. ಮೂರು ನಾಕು ಸರ್ತಿ ಝಾಡಿಸಿಬುಡು.