ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೩೧೧ ವಸಿ ನ್ಯಾಯವ ಅಂಗೇ ತಳುಗಿ” ಅಂದ. “ಅಯ್ಯೋ, ಒಂದು ಕಾಲುಗಂಟೆ ನಿದಾನವಾದ್ರೆ, ನ್ಯಾಯ ಎಲ್ಲೂ ಓಡಿ ಹೋಗಲ್ಲ. ನೀವು ಸರನೆಹೋಗಿ, ತಡೆಯೋದು ಒಳ್ಳೇದಲ್ಲ” ಎಂದು ಒಪ್ಪಿಗೆಯಿತ್ತರು ಶ್ಯಾನುಭೋಗರು. ನಂಜೇಗೌಡ ಎದ್ದು ಹೋಗುವಾಗ, ಸಭೆಯಲ್ಲಿ ಗುಜುಗುಜು ಪ್ರಾರಂಭವಾಯಿತು. ಬುಂಡಮ್ಮ ಪಕ್ಕದಲ್ಲಿ ಕುಳಿತ ಹೆಂಗಸನ್ನು ತಿವಿದು ಕೇಳಿದಳು: “ಆ ನೂರೊಂದು ಗೋವ ತಿಂದ ಹುಲಿ, ಯಾಕಿಂಗೆ ಎದ್ದೋಯ್ತಾ ಅದೆ?” “ವೊಟ್ಟೆ ಕಳುತವಂತೆ, ಅಜ್ಜಿ” – ಪಕ್ಕದಲ್ಲಿ ಕುಂತಿದ್ದ ರಂಗಮ್ಮ ಹೇಳಿದಳು “ಮಟದಲ್ಲಿ ಬಿಟ್ಟಿ ಕೂಳು ಸಿಕ್ಕದೇಂತ ಅಡ್ಡಾದಿಡ್ಡಿ ಕಪ್ಪಡಿಸಿದ್ರೆ, ಮತ್ತೇನ ಆದದು?.... ಕ್ಯಾಳಿಲ್ಲವೇನೆ ರಂಗಮ್ಮ ಗಾದ್ಯ- “ಅನ್ನ ಅದೇಂತ ತಿಂದೋನು ಕೆಟ್ಟ, ಎಣ್ಣು ಅವಳೇಂತ ವೋದೋನು ಕೆಟ್ಟ' ಅಂತಾವ?... ದೇಯದಲ್ಲಿ ಸಕ್ತಿ ಇರಾಗಂಟ ಯೇನೂ ಗ್ವತ್ತಾಕ್ಕಿಲ್ಲ. ಜೀವ ಮೆತ್ತಗಾಯ್ತದಲ್ಲ, ಆಗ್ಗೆ ಇಂತಾವೆಲ್ಲ ಅಮರಿಕಳಾದು!... ಬುಂಡಮ್ಮನ ಅನುಭವದ ನುಡಿಗಳಿಗೆ ರಂಗಮ್ಮನ ಜೊತೆಗೆ, ಅವಳ ಸುತ್ತಲಿದ್ದ ಇನ್ನೂ ಕೆಲವರು ಹೆಂಗಸರೂ ಮೆಚ್ಚಿ ತಲೆದೂಗಿದರೂ. ೩೦ ತಾನು ಗರ್ಭಿಣಿಯಾಗಿರುವೆ ಎಂದು ಮನದಟ್ಟಾದ ದಿನದಿಂದಲೂ ರುಕ್ಕಿಣಿ ಅಧೀರಳಾಗಿದ್ದಳು, ಹಿಂದಿನ ಲವಲವಿಕೆ ಅವಳ ಮುಖದಿಂದ ಮಾಯಾವಾಗಿತ್ತು. ಲಕ್ಕನಿಂದ ಔಷಧಿ ತರಿಸಿ ಈ ಬೇಡದ ಗರ್ಭದಿಂದ ಪಾರಾಗಬಯಸಿದರೆ, ಸ್ವಜನರ ಗುಂಪೇ ಅಡ್ಡಬಂದು ಅವಳನ್ನು ಅಂಧಕಾರದ ಜಗತ್ತಿಗೆ ತಳ್ಳಿತ್ತು.... ಅತ್ತೆ ತನ್ನ ಉದ್ದನೆಯ ತಲೆಗೂದಲನ್ನು ಈ ರಾತ್ರಿ ತಾನು ನಿದ್ರಿಸುತ್ತಿರುವಾಗ ಕತ್ತರಿಸಿ ಹಾಕಿದ್ದರೆ ಚೆನ್ನಾಗಿರುತ್ತಿತ್ತೇನೊ, ಎನ್ನಿಸುವುದು..... ಈಗ ರುಕ್ಕಿಣಿಗೆ ಯಾವ ಕೆಲಸದಲ್ಲೂ ಆಸಕ್ತಿಯಿಲ್ಲ. ಕುಳಿತಿದ್ದರೆ ಶೂನ್ಯಮನಸ್ಕಳಾಗಿ ಸುಮ್ಮನೆ ಕುಳಿತೇ ಇರುವಳು. ಅಂಗಳದ ಕುಂಬವೊಂದನ್ನು ಒರಗಿ ನಿಂತರೆ ಎಷ್ಟೋ ಸಮಯ ಹಾಗೇ ನಿಂತುಬಿಡುವಳು.... ಕೆಲವು ದಿನಗಳ ಹಿಂದೆ ಹೊಸದೊಂದು ಸಂಗತಿ ನಡೆದು ಅವಳ ನೊಂದ ಮನಸ್ಸನ್ನು ಮತ್ತಷ್ಟು ಘಾಸಿಗೊಳಿಸಿತ್ತು: $ 31