________________
೩೧೨ ವೈಶಾಖ ಶ್ಯಾನುಭೋಗರ ಮೂರನೆ ಮಗ ಸೀತಾರಾಮು ಮೈಸೂರಿನ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು, ಹೋದ ಸಾಲಿನಲ್ಲಿ ಬಿ.ಎ. ಪಸುಮಾಡಿದ್ದ. ಶ್ಯಾನುಭೋಗರು ಡೆಪ್ಯುಟಿ ಕಮಿಶನರ್ ಸಾಹೇಬರ ಕೈಕಾಲು ಕಟ್ಟಿ ತಮ್ಮ ಮಗನಿಗೆ ಒಂದು ಗುಮಾಸ್ತ ಹುದ್ದೆಯನ್ನು ಸಂಪಾದಿಸಿಕೊಟ್ಟಿದ್ದರು. ಅವನು ಮೈಸೂರಿನ ಅಠಾರ ಕಛೇರಿಯಲ್ಲಿ ಕೆಲಸ ನಿರ್ವಹಿಸಿದ್ದು ಕೇವಲ ಒಂಬತ್ತೇ ತಿಂಗಳು. ಪುನಹ ತಮ್ಮ ತೋಟದ ಬಾಳೆಗೊನೆಗಳನ್ನೂ ಹೆಸರುವಾಸಿಯಾದ ದರುಮನಳ್ಳಿಯ ಬೆಣ್ಣೆಯನ್ನೂ ಡೆಪ್ಯೂಟಿ ಕಮೀಶನರ್ ಸಾಹೇಬರ ಪತ್ನಿಯವರಿಗೆ ರಹಸ್ಯವಾಗಿ ಸಪ್ಪೆ ಮಾಡಿ ಮಾಡಿ, ಹುಣಸೂರು ತಾಲ್ಲೂಕು ಕಚೇರಿಗೆ ಹುಡುಗನನ್ನು ವರ್ಗ ಮಾಡಿಸಿದ್ದರು!... ಸೀತಾರಾಮು ಲಕ್ಷಣವಾದ ಯುವಕ ಗುಣದಲ್ಲೂ ಅಷ್ಟೆ, ಯರೂ ಬೆರಳು ಮಡಿಸುವಂತಿರಲಿಲ್ಲ. ಈ ಸೀತಾರಾಮು ಸಿಕ್ಕಾಗಲೆಲ್ಲ, ರುಕ್ಕಿಣಿಯು, “ನಮ್ಮ ಜಾನಕಿಗೂ ನಿನಗೂ ವರಸಾಮ್ಯ ಹೇಳಿ ಮಾಡಿಸಿದ ಹಾಗಿದೆ. ನೀನು ಅವಳನ್ನೆ ವಿವಾಹವಾಗಬೇಕು” ಎನ್ನುತ್ತಲೆ ಇದ್ದಳು. “ಹೆಣ್ಣನ್ನೆ ತೋರಿಸದೆ ಮದ್ಯೆ ಮಾಡಿಕೊ ಅಂದರೆ ಹೇಗೆ?” – ಎಂದು ಸೀತಾರಾಮು ಹೇಳೇ ಹೇಳುತ್ತಿದ್ದ. ಅವನಿಗೆ ರುಕ್ಕಿಣಿಯಲ್ಲಿ ಅಪಾರ ಗೌರವ. ಅವಳ ಅಭಿಪ್ರಾಯಕ್ಕೆ ಆತ ಬಹಳ ಬೆಲೆ ಕೊಡುತ್ತಿದ್ದ..... ತನ್ನ ಬದುಕು ಹಗರಣವಾಗುವುದಕ್ಕೆ ಪೂರ್ವದಲ್ಲಿ ರುಕ್ಕಿಣಿಯು ಅಶ್ವತ್ಥಣ್ಣನಿಗೂ ಅತ್ತಿಗೆ ಸಾವಿತ್ರಿಗೂ ಒಂದು ಪತ್ರ ಬರೆದು, ಜಾನಕಿ ಸಮೇತ ಅವರಿಬ್ಬರೂ ದರುಮನಳ್ಳಿಗೆ ಹೊರಟು ಬರಬೇಕೆಂತಲೂ ಶ್ಯಾನುಭೋಗರ ಮೂರನೆಯ ಮಗ ಸೀತಾರಾಮುವಿನೊಡನೆ ತಾನು ಜಾನಕಿಯ ವಿಷಯ ಪ್ರಸ್ತಾಪ ಮಾಡಿದಾಗ ಆ ಜಾನಕಿಯನ್ನು ನೋಡಲು ಅಪೇಕ್ಷಿಸಿರುವನೆಂತಲೂ ಸಂಬಂಧ ಕುದುರುವ ಶುಭಸೂಚನೆಯನ್ನು ತಾನು ಕಂಡಿರುವುದಾಗಿಯೂ ತಿಳಿಸಿ, ರುದ್ರಪಟ್ಟಣಕ್ಕೆ ಪೋಸ್ಟ್ ಮಾಡಿದ್ದಳು. ಪತ್ರ ಕೈಸೇರಿದರೂ ಜಾನಕಿಗೆ ನೆಗಡಿಯಾಗಿದ್ದ, ಸೋರುವ ಮೂಗಿನ ಹೆಣ್ಣನ್ನು ತೋರುವುದು ಹೇಗೆ? ಎಂದು ಸಾವಿತ್ರಿಯು ಪ್ರಯಾಣವನ್ನು ಮುಂದೂಡಿದ್ದಳು. ಜಾನಕಿಯ ನೆಗಡಿ ನಿಂತು ಹೊರಡುವ ಸಿದ್ಧತೆಯಲ್ಲಿ ಇರುವಾಗ, ಸಾವಿತ್ರಿಗೆ ಜ್ವರ ಬಂದು, ಹಾಸಿಗೆ ಹಿಡಿದಳು. ಹೀಗಾಗಿ, ಅವಳ ಆರೋಗ್ಯ ಸುಧಾರಿಸಿ, ಗಂಡ ಮಗಳೊಡನೆ ದರುಮನಳ್ಳಿಗೆ ಬಂದು ಇಳಿಯುವ ವೇಳೆಗೆ ಹಳ್ಳಿಯ ಮನೆಮನೆಯಲ್ಲೂ ರುಕ್ಕಿಣಿಯ ಹೆಸರು ಗೊಬ್ಬರವಾಗಿತ್ತು. ಮೊದಲೇ