ಪುಟ:ವೈಶಾಖ.pdf/೩೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೧೮ ವೈಶಾಖ ಲಕ್ಕೆ ಮತ್ತೆ ನಿರುತ್ತರ. “ತಪ್ಪು ನಿನ್ನದೊ?-ರುಕ್ಕಿಣಮ್ಮಂದೊ”? ಲಕ್ಕೆ ಈ ಪ್ರಶ್ನೆಗೆ ಯಾವ ಉತ್ತರ ಕೊಡುವನೊ ಎಂದು ಸಭಿಕರ ಜೀವ ತದಿಗಾಲ ನಿರೀಕ್ಷೆಯಲ್ಲಿ ತವಕಗೊಂಡಿತ್ತು. ಲಕ್ಕಿನಿಂತ ಇದಕ್ಕೂ ಉತ್ತರ ಬರಲಿಲ್ಲ. ನಂಜೇಗೌಡ ಎದ್ದು, “ಈ ಹೇತಲಂಡಿ ಬಡ್ಡಿಹೈದ ರುಕ್ಕಿಣವ್ವನ ಇರುದ್ದವಾಗಿ ಯೋಳಿದರೆ, ನಿಮ್ಮ ಬ್ರಾಂಬರ ತ್ವಾಟಗಳಲ್ಲಿ ಅಲ್ವ ಅವುನು ಇಸೇಸ್ವಾಗಿ ಕೂಲಿಗೆ ದುಡಿಯೋದು, ಆಗ ನೀವು ಅವುಸ್ಥೆ ಕೂಲಿ ಕಂಬಳಕೆ ಕರೆದೀರಾ? ಅದೇ ಅವುನು ಎದರಿ ನಿಜಸ್ತಿತ್ಯ ಬಾಯಿಬುಡ್ತಾ ಇಲ್ಲ...” ಎಂದು ಕೆಣಕಿದ ಗಂಗಪ್ಪ ಕೊಸಾರನೆ ಎದ್ದು, “ನಂಜೇಗೌಡರು ಯೋಲೋ ಅಂಗೆ ರುಕ್ಕಿಣವ್ವನ ಈ ಚಾವಡಿ ಮುಂದೆ ನಿಲ್ಲುಸಿದ್ರೇನೆ ಈ ನ್ಯಾಯ ಫೈಸಲ್ ಆಗಾದು, ಇಲ್ಲದಿದ್ರೆ ಜಪ್ಪಯ್ಯ ಅಂದೂವೆ ಅಗಕ್ಕಿಲ್ಲ”- ಬಾಣ ಬಿಟ್ಟ ಹಗೆ ಆಡಿದ ಶ್ಯಾನುಭೋಗರು, “ಏನೊ ಲಕ್ಕ, ನೀನು ಹೀಗೆ ಉಮೆಗೊಡ್ಡಿ ತರ ಬಾಯಿ ಹೊಲಿದೇ ನಿಂತಿದ್ರೆ ರುಕ್ಕಿಣಿನೂ ಕರೆಸಬೇಕಾಗುತ್ತೆ. ಕರೆಸೋಣವ?” ಎಂದು ಕೇಳಿದಾಕ್ಷಣ, ಚವಡಿಯೋಳಗಿನಿಂದ “ಕರೆಸಿ, ರುಕ್ಕಿಣಮ್ಮನ ಕರೆಸಿ....” ಕೂಗೆದ್ದಿತು. ಆ ಸದ್ದಡಗುವವರೆಗೂ ಮೌನವಾಗಿದ್ದ, ತರುವಾಯ ಲಕ್ಕ “ಕರುಸಬ್ಯಾಡಿ” ಎಂದ ದೃಢಸ್ವರದಲ್ಲಿ ಹೇಳಿದ. “ಹಾಗಾದ್ರೆ ನೀನೇ ತಪ್ಪಿತಸ್ಥ ಎಂದು ಒಪ್ಪಿಕೊಳೀಯ?” ಲಕ್ಕನೊಳಗೆ ಹೊಯ್ದಟ. ಒಂದು ಪಕ್ಷ ನಾ ವಪ್ಪಿಕ್ಚಳದೇ ವೋದ್ರೆ. ರುಕ್ಕಿಣಮ್ಮ ಕರುಸೇ ಕರುಸ್ತಾರೆ. ಬುಡಕ್ಕಿಲ್ಲ. ಅವರು ಇಲ್ಲಿಗೆ ಬಂದ್ರೆ, ಈ ತುಂಬಿದ ಸಬೇಲಿ ಅವುರ ಮಾನಾವ ಇಂಕರ ಇಂಕರಾಗಿ ಆರಾಜು ಆಕ್ತಾರೆ!.. ಇಲ್ಲ ನಾ ವಪ್ಪಿಕಂಡನೋ, ನನ್ನ ಚಮಡಾವ ಸುಲುದು ಬುಡ್ತಾರೆ!... ಎಂಗೆ ಮಾಡಾದು? - ಏನ ಯೋಳಾದು?... ಇತ್ತಾಗಿ ಕಾಲಿಟ್ಟೂ ಗಂಡಾಂತ್ರ, ಆತ್ತಾಗಿ ಕಲಿಬ್ರೂ ಗಂಡಾಂತ್ರ... “ರುಕ್ಕಿಣಮ್ಮಾರ ಕರುಸನೂ ಬ್ಯಾಡದು. ಇವುನು ವಪ್ಪನೂ ಬ್ಯಾಡದು.