________________
ಸಮಗ್ರ ಕಾದಂಬರಿಗಳು ೩೧೯ ಇಂಗಂದರೇನು? ನಮ್ಮ ನ್ಯಾಯಸ್ತಾನವ ಈ ಬಡ್ಡಹೈದ ಹೈಲಾಟಕೆ ಇಟ್ಟುಕಂಡನಲ್ಲ... ಲೋ ಲಕ್ಕ, ನ್ಯಾಯವಾಗಿ ಅದೇನು ಬೊಗಳೀಯೋ ಇಲ್ಲೋ?” ಎಂದು ಆರ್ಭಟಿಸಿದ ನಂಜೇಗೌಡ, “ಯಾಕೆ ಸುಮ್ಮನೆ ಮುಚ್ಚಕ್ಕೆ ರ್ಪ ತ್ನ ಮಾಡ್ತೀಯೆ?- ನಮಗೆಲ್ಲಾ ಗ್ವತ್ತಾಗೋಗದೆ. ಲಕ್ಷ್ಮಮ್ಮಾರು ಊರೂಳಗೆಲ್ಲ ಡಂಗೂರ ಸಾರಿ ಬುಟ್ಟಿ.... ನೀನು ಔಸ್ಥ ತರಕ್ಕೆ ವೋಗಿದ್ದು ಮುಕ್ಕಸ ನಿಮಗೆ ಸ್ವತ್ತಾಗದೆ.... ಏಟೊತ್ತಾದ್ರೂ ನೀ ಯೋಳನೇ ಬೇಕು. ಯಾಕೆ ಸುಮ್ಮಕೆ ನಮ್ಮ ಸತಾಯಿಸೀಯೆ?” ಎಂದು ಚುಚ್ಚಿದ. ರುಕ್ಕಿಣವ್ವ ನನ್ನ ಉದ್ದಕೂ ವೋಟು ಚೆಂದಾಗಿ ನೋಡಿಕೊಂಡವರೆ. ಹಿಂದುಕೆ ಅವ್ವಂಗೆ ಜ್ವರ ಬಂದು, ಔಸ್ಥ ಕ್ವಡಸೂಂತ ದುಡ್ಡು ಕ್ವಡನಿಲ್ಲ? ಆಮ್ಯಾಕೆ ಆ ದುಡ್ಡ ನಮ್ಮಯ್ಯ ವಾಪಸು ಮಾಡಾಕೋದ್ರೆ, ಆ ತಾಯಿ, 'ಬ್ಯಾಡ ಇಟ್ಟುಕೊ' ಅನ್ನನಿಲ್ಲ? -ಅಲ್ಲದೇಯ ನನ್ನ ಹಸಿದ ಹೊಟ್ಟೆಯ ನಮ್ಮವ್ವನಿಗಿಂತ ಹೆಚ್ಚಾಗಿ ಇಲ್ಲೀಗಂಟ ಕಾಪಾಡ್ತಿಲ್ವ?- ಅಲ್ಲದೇಯ ನನ್ನ ಹಸಿದ ಹೊಟ್ಟಿಯ ನಮ್ಮವ್ವನಿಗಿಂತ ಹೆಚ್ಚಾಗಿ ಇಲ್ಲೀಗಂಟ ಕಾಪಾಡ್ತಿಲ್ವ?... ಏಟು ದೊಡ್ಡ ಗುಣ ಅವರು?... ಯೇನೊ ನಡೆಯೊ ಕಾಲು ಎಡವು. ಗಾಚಾರ ಎಡವುದು, ದಿಟ. ಆದ್ರೆ ಈಗ ನಾನು ಈ ರಕ್ಕಸರ ಕೈಗೆ ಆ ತಾಯ ವಪ್ಪುಸಿಬುಟ್ರೆ, ಆ ದ್ಯಾವರು ಮೆಚ್ಚಕ್ಕಿಲ್ಲ...... “ಸ್ವಾಮಿ, ಇವನ್ಯಾಕೊ ಗಿಣಿಗೆ ಹೇಳಿದಂಗೆ ಹೇಳಿದೂವೆ ಬಾಯಿ ಬುಡ್ತಾನೆ ಇಲ್ಲ. ರುಕ್ಕಿಣವನ್ನು ಕರುಸೋದೆ ಇನ್ನು ನಮಗುಳಿದಿರೊ ಒಂದೇ ದಾರಿ.....” ನಂಜೇಗೌಡ ನಿರ್ಧಾರವಾಗಿ ನುಡಿದ. ಶ್ಯಾನುಭೋಗರು ಕುಳವಾಡಿಯನ್ನು ಕರೆದು, “ಕುಂದೂರಯ್ಯ, ಹೊಗಪ್ಪ, ಹೋಗಿ ಆ ಮೂಲೆಮನೆ ರುಕ್ಕಿಣಮ್ಮ ನೋರ ಕರೆದುಕೊಂಡು ಬಾ...” ಎಂದು ಆಜ್ಞಾಪಿಸಿಯೇ ಬಿಟ್ಟರು. ಆಗ ತಟಕ್ಕನೆ ಕಾಡಲ್ಲಿ ನೂರಾರು ಕಣದ್ದುಗಳು ಬಸುರಿ ಎಂಗಪ್ಪ ಹೆಣವ ಕುಕ್ಕಿ ಕುಕ್ಕಿ ಮಾಂಸ ಕೀಳಿದ್ದ ಎದೆ ನಡುಗಿಸೋ ದುಸ್ಯ ಲಕ್ಕನ ಕಣ್ಣಮುಂದೆ ಸುಳೀತು! ಲಕ್ಕ ಏಡು ಎಚ್ಚೆಮುಂದೆ ಬಂದು ಕೂಗಿದ: “ಬ್ಯಾಡಿ, ಬ್ಯಾಡಿ, ಅವು ಕರುಸಲ್ಮಾಡಿ. ನಾನೇ ತಪ್ಪು ಮಾಡಿದೋನು.” ಲಕ್ಕನ ಮಾತು ಕೇಳಿ ಹುಣ್ಣಿಮೆಯಲ್ಲಿ ಮೊರೆಯುವ ಸಾಗರದ ಹಾಗೆ ಸಭೆ ಒಂದು ಸಲ ಭೋರ್ಗರೆಯಿತು. ಆ ಗದ್ದಲದ ತೆರೆಯ ಮೇಲೆ, 'ಲೌಡಿ