ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೨೦ ವೈಶಾಖ ಮಗ', 'ಎಂತಾ ಕೊಬ್ಬು, ಉತ್ತಮರ ಎಂಗಸು ಮುಟ್ಟಾನ ಅಂದ್ರೇನ?” “ಹಲ್ಯ ನನ್ನ ಮಗನ ಚಮಡ ಸುಲೀಬೇಕು', 'ಇಂತಾ ಊರಲ್ಲಿ ಇಾಗ ಎಂಗಸ್ತು ಒಬ್ಬೊಬ್ರೆ ಇನ್ನು ಓಡಾಟಕ್ಕೆ ಉಂಟ?' -ಇಂಥ ಮಾತುಗಳು ಯಥೇಚ್ಚವಾಗಿ ತೇಲಿದವು. ಶ್ಯಾನುಭೋಗರು ಇನ್ನೊಂದು ಚಿಟಿಕಿ ನಶ್ಯವನ್ನು ಮೂಗಿಗೆ ಏರಿಸಿ, ಪಂಚಾಯಿತಿದಾರರನ್ನು ಉದ್ದೇಶಿಸಿ ಕೇಳಿದರು: “ಲಕ್ಕ ತಪ್ಪು ಒಪ್ಪಿದ್ದಾನೆ ರುಕ್ಕಿಣಮ್ಮ ಇನ್ನು ಈ ಚಾವಡಿಗೆ ಬರಬೇಕಾದ್ದಿಲ್ಲ. ಅವಳ ನ್ಯಾಯಾನ ಕೇಶವಯ್ಯನೋರು ಹೇಳಿದ ಹಾಗೆ ಬ್ರಾಹ್ಮಣರ ಕೇರಿಯವರಿಗೇ ಬಿಡೋಣ. ಈಗ ಈ ಅಪರಾಧಿಗೆ ಏನು ಶಿಕ್ಷೆ ವಿಧಿಸಬೇಕು ಅನ್ನೋದನ್ನ ನೀವು ಪಂಚಾಯಿತಿದಾರರು ತೀರ್ಮಾನಿಸಬೇಕು.” “ನೀವು ತೀರ್ಮಾನ ಮಾಡಾದು ಏನದೆ? ಅವುನ್ನ ಆ ಪಾಂಡವರ ಕುದುರೆ ಕಂಬಕ್ಕೆ ಕಟ್ಟಿ ನಾಕು ಜಡಿಬೇಕು, ವೋಟೇಯ.” ನಂಜೇಗೌಡ ಮಾತಿಗೆ ಉಳಿಕೆ ಪಂಚಾಯಿತಿದಾರರೂ, “ಅದೇ ಸರಾದ ಸಿಕ್ತ, ಯಜಮಾನ್ ನಂಜೇಗೌಡ ತೀರ್ಮಾನ ನಮಗೂ ಸಮ್ಮತ" ಎಂದು ಒಪ್ಪಿಗೆ ಸೂಚಿಸಿದರು. ನಂಜೇಗೌಡ ಚಪ್ಪಾಳೆ ತಟ್ಟಿ, “ರುದ್ರ-ಎಲ್ಲಿದ್ದೀಯೋ?” ಎನ್ನುವುದೇ ತಡ, “ಇಲ್ಲೆ ಇವುನಿ, ಯಜಮಾನೆ...” ಎಂದು ಗುಂಪಿನ ನಡುವೆಯಿಂದ ರುದ್ರ ಪ್ರತ್ಯಕ್ಷನಾದ. “ರುದ್ರ – ಈ ಲಕ್ಕನ್ನ, ನಿನ್ನ ಸಿನೇಮಿತರನ್ನೂ ಕಟ್ಟಿಗಂಡು, ಆ ಕುದುರೆ ಕಂಬಕ್ಕೆ ಬಿಗಿಯೊ.” ನಂಜೇಗೌಡ ಅಪ್ಪಣೆ ಹೊರಬಿದ್ದದ್ದೇ ಸಮ, ಆ ಮಾರಿಗುಡಿ ಅಣ್ಣನೀರು, ರುದ್ರಣ ಮುಂದಾಳುತನದಲ್ಲಿ ಲಕ್ಕನನ್ನು ಮಾಳದ ಮಧ್ಯಭಾಗದಲ್ಲಿದ್ದ ಕುದುರೆ ಬಿಗಿಯಲು ಅನುವಾದರು.... A G ದೇವರ ಕೋಣೆಯಲ್ಲಿ ಇನ್ನು ಕುಳಿತಿರಲಾರದೆ ಮನೆಯ ಹೊರಗೆ ಎದ್ದುಬಂದ ಕೃಷ್ಣಶಾಸ್ತ್ರಿಗಳು ಜಗಲಿಯ ಮೆಟ್ಟಿಲುಗಳನ್ನು ದುಡುದುಡನೆ ಇಳಿದು ಹೊರಟರು... ಅವರ ಅಂತರಂಗ ಕುದಿಯುತ್ತಿತ್ತು... "ವಾಸ್ತವವಾಗಿ ಅಪರಾಧಿ ತಾನು ಶಿಕ್ಷೆ ನಿರಪರಾಧಿ ಲಕ್ಕನಿಗೆ!- ಇದೆಲ್ಲಿಯ ನ್ಯಾಯ?.... ಇನ್ನು ತಾನು ಹೇಡಿಯಾಗಬಾರದು'....ಹೀಗೆ ತಳಮಳಿಸುತ್ತ ಪಂಚಾಯಿತಿ ಕಟ್ಟೆಯತ್ತ ದಾಪುಗಾಲಿಡುತ್ತ ಸಾಗಿದರು.