________________
ಸಮಗ್ರ ಕಾದಂಬರಿಗಳು ೩೨೧ ಅತ್ತ ಚಾವಡಿಯ ಮುಂದೆ ಪಾಂಡವರ ಕಂಬಕ್ಕೆ ಮಾರಿಗುಡಿ ಅಣ್ಣದೀರು ಲಕ್ಕನನ್ನು ಬಿಗಿಯಾಗಿತ್ತು. ನಂಜೇಗೌಡ ಚಾವಡಿ ಒಳಗಿನಿಂದ ಒಂದು ಬೆತ್ತದ ಕೋಲನ್ನು ಎಸೆದು. - “ತಕ್ಕಳ್ಳಲಾ ರುದ್ರ, ಈ ಬೆತ್ತದ ಕೋಲ, ನಿಂಗೆ ಸಾಕಾಗೊಗಂಟ ಇದಲ್ಲಿ ಆ ಲೌಡಿಮಗಂಗೆ ವೊಡೀತಾನೆ ಇರು... ಊರಲ್ಲಿ ಇಂತಾ ಹೇಸ್ಥೆ ಕಲ್ಪ ನಡುಸುದ್ರೆ, ಅಂತೋರತೆ ಇಂತದೆ ಉಗ್ರ ಶಿಕ್ಷೆ ಕಾದಿದೆ ಅನ್ನಾ ಬೆಚ್ಚು ಅವ್ರ ಮನದಲ್ಲಿ ಉಟ್ಟೋ ಅಂಗಿಲ್ಲ” ಎಂದು ಗುಡುಗಿದ. ಬುಂಡಮ್ಮ ನೆರೆಯಲ್ಲಿ ಕುಳಿತವರ ಸಂಗಡ, “ಸರಣ, ಸರಣ-ಇನ್ನು ಬೋ ಸರಣ!” ಎಂದು ಎರಡು ಕೈಗಳಿಂದಲೂ ತನ್ನದೇ ಆದ ಅಭಿನಯವೈಖರಿಯಿಂದ ಅಣಕಿಸುತ್ತ, “ಅವ್ವ, ಅದ್ವಿ, ಅವ್ವಒಂದಕ್ಕಿಂತ ಒಂದೆಚ್ಚ ಇಲ್ಲಿ ಸೇರಿರೋ ಗುಬ್ಬಳಗಳು ಕನವ... ಸೋ ಅಂದ್ರೆ ಸೋಬಾನೆ ಅನ್ನಾಜನ!” ಎಂದು ಕ್ರೋಧದಿಂದ ನುಡಿದು, ಹೊಗೆಸೊಪ್ಪಿನ ಎಸಳನ್ನು ತಂಬುಲದ ಬಾಯಿತಗೆ ಎಸೆದುಕೊಂಡಳು. ದ್ಯಾವಾಜಿಯೂ ಉಗ್ರವಾಗಿ ಪ್ರತಿಕ್ರಿಯಿಸುತ್ತ, “ತೆಗೆ, ತೆಗಿ, ಇವುರದ್ಯಾವ ಸೀಮೆ ನ್ಯಾಯವ?- ಇನ್ನೂ ರುತುವಾಗ್ಗೆ ಇದ್ದ ನಮ್ಮ ಕುಂಡಿಮಾದಿ ಎಣ್ಣು ಸಾವಂತ್ರಿಯ ಇಂದ್ರೆ ಆ ಕೆಂಗಣ್ಣಪ್ಪ ಮ್ಯಾಲೆ ಬಿದ್ದು ವೊಸಿಕಾಡ್ಡ ಇಚಾರ ನಿಮ್ಮ ಪಂಚಾತಿ ಮುಂದಿಡೀಂತ ಕೇಳಿದ್ರೆ, ಇದೇ ನಂಜೇಗೌಡ 'ವೋಗಮ್ಮಿ, ಇದ್ಯಾವ ದ್ವಡ್ಡ ಸಂಗ್ತಿಂತ ತಂದಿದ್ದೀಯೆ?.... ಗಂಡಸ್ಥೆ ಯಾವ ಕಟ್ಟು?- ದನ ಒಂಟಿ ಸಿಕ್ಕಾಗ, ಅದರ ಮ್ಯಾಲೆ ಅತ್ತುಬ್ಯಾಡಾಂತ ಹೋಗ್ಯ ಆದ್ಯಾರು ತಾನೆ ತಡಯಕ್ಕಾದಾತು? ಅಂದಿತ್ನಲ್ಲ!'... ಇವುರಿಗೊಂದು ನ್ಯಾಯ, ನಮಗೊಂದು ನ್ಯಾಯವ?” ಎಂದು ಗೊಣಗಿದಳು. ತಂತಮ್ಮ ಜಗಲಿಗಳ ಮೇಲೆ ಕುಳಿತು ಕೆಲವು ಬ್ರಾಹ್ಮಣರು ಚಾವಡಿಯತ್ತ ರಭಸವಾಗಿ ಸಾಗುತ್ತಿದ್ದ ಕೃಷ್ಣಶಾಸ್ತಿಗಳನ್ನು ಗಮನಿಸಿ, “ಯಾಕೆ ಶಾಸ್ತ್ರಿಗಳು ಚಾವಡಿ ಬಯಲಿಗೆ ಇಷ್ಟು ತವಕಪಟ್ಟು ಹೋಗ್ತಿದಾರೆ?” ಎಂದು ಅಚ್ಚರಿಪಡುತ್ತಿದ್ದರು. “ಇವರು ಹೊರಟಿರೊ ಚರ್ಯೆ ನೋಡಿದರೆ, ಶಾಸ್ತಿಗಳು ಇವತ್ತು ಚಾವಡಿಗೆ ಹೋಗಿ ಏನೋ ಗಲಾಟೆ ಮಾಡೋ ಹಾಗೆ ಕಾಣುತ್ತೆ!” ಎಂದು ಲೆಕ್ಕಹಾಕಿ ಅವರೆಲ್ಲರೂ ಎದ್ದು ಏನು ನಡೆಯುವುದೊ ನೋಡೋಣವೆಂಬ ಕುತೂಹಲದಿಂದ,