________________
೩೨೨ ವೈಶಾಖ ಶಾಸ್ತಿಗಳನ್ನು ಹಿಂಬಾಲಿಸಿದರು. ನಂಜೇಗೌಡ ಎಸೆದ ಬೆತ್ತದ ಕೋಲು ಚಾವಡಿಯ ಮುಂದುಗಡೆಯೆ ಬಿದ್ದಿತ್ತು. ಅದು ಬಿದ್ದ ಜಾಗದಿಂದ ಸ್ವಲ್ಪ ದೂರದಲ್ಲಿದ್ದ ರುದ್ರ ಸರಸರನೆ ಬಂದು ಬೆತ್ತದ ಕೋಲನ್ನು ಕೈಗೆತ್ತಿಕೊಂಡ... ಅಷ್ಟರಲ್ಲಿ ಕೃಷ್ಣಶಾಸ್ತ್ರಿಗಳು, ಗುಂಪುಗಟ್ಟಿ ನಿಂತಿದ್ದ ಜನಸಂದಣಿಯಿಂದ ತೂರಿ, ಚಾವಡಿಯ ಮುಂದೆ ಬಿರುಗಾಳಿಯಂತೆ ಬಂದು ನಿಂತುರು, “ತಡೆಯಿರಿ. ಲಕ್ಕ ನಿರಪರಾಧಿ.... ಶಿಕ್ಷೆ ಆಗಬೇಕಾದದ್ದು ನನಗೆ....” ಎಂದು ಏದುತ್ತೇದುತ್ತ ನುಡಿದರು. ಪಂಚಾಯಿತಿ ಕಟ್ಟೆಗೆ ಹಟಾತ್ ಪ್ರವೇಶ ಹಾಗೂ ಶಾಸ್ತಿಗಳಾಡಿದ ಮಾತು ಇಡೀ ಸಭೆಯನ್ನು ಚಕಿತಗೊಳಿಸಿತು. ಕೆಲವು ನಿಮಿಷ ಎಲ್ಲರೂ ಸ್ತಂಭೀಭೂತರಾದರು... ಈ ಆಘಾತದಿಂದ ಮೊದಲು ಚೇತರಿಸಿಕೊಂಡ ವೆಂಕಣ್ಣ ಜೋಯಿಸರು, “ಇದೇನು ಶಾಸ್ತ್ರಿಗಳೆ, ನೀವು ಹೇಳಿರೋದು?” ಎಂದು ಪ್ರಶ್ನಿಸಿದರು. “ನಾನೆ ತಪ್ಪು ಮಾಡಿರುವವನು. ನನಗೇ ಶಿಕ್ಷೆ ಆಗಬೇಕು”- ಶಾಸ್ತಿಗಳ ಧ್ವನಿಯಲ್ಲಿ ಇನ್ನೂ ಉದ್ವಿಗ್ನತೆ ತುಂಬೇ ಇದ್ದಿತು. “ಉಪ್ಪು ತಿಂದೋನು ಅವನು. ಆದ್ದರಿಂದ ನೀರು ಕುಡೀಬೇಕಾದವನೂ ಅವನೇ!- ಹೀಗಿರುವಾಗ ನಿಮಗೇಕೆ ಉಪದ್ವಾಪ, ಅಂತೀನಿ?” ಎಂದು ಶ್ಯಾನುಭೋಗರು ಅನುಕಂಪದಿಂದ ಕೇಳಿದರು. ಶಾಸ್ತಿಗಳು ಏನೂ ಹೇಳಲು ಪ್ರಯತ್ನಿಸುತ್ತಿದ್ದರು. ಆಗ ಕೇಶವಯ್ಯ, “ಶಾಸ್ತಿಗಳೆ, ನಿಮ್ಮ ಮಾತನ್ನು ನಾನು ನಂಬಲ್ಲ... ಈ ಹೈದ ಲಕ್ಕನ್ನ ಅವನ ಬಾಲ್ಯದಿಂದಲೂ ನೀವು ಪ್ರೀತಿ ಮಾಡ್ತೀರಿ ಅನ್ನೋ ಸಂಗತಿ ಊರಿನೋರಿಗೆಲ್ಲ ತಿಳಿದಿರುವ ವಿಷಯವೆ!... ಏನೂ ತಪ್ಪು ಮಾಡಿದ್ದಾನೆ. ಪಾಪ, ಅವನನ್ನು ಹೇಗಾದರೂ ಉಳಿಸಬೇಕು ಎನ್ನುವ ಔದಾರ್ಯದಿಂದ ನೀವು ಹೊರಟಂತಿದೆ.... ಅವನನ್ನು ಉಳಿಸಲಿಕ್ಕೆ ಹೋಗಿ ನಿಮ್ಮ ಮಾನಯಾಕೆ ಕಳೆದುಕೊಳ್ಳಬೇಕು?... ಇದನ್ನ ಹುಚ್ಚು ಎಂದು ಕರೆಯದೆ ಬೇರೆ ಯಾವ ಹೆಸರಿನಲ್ಲಿ ಕರೆಯೋಣ?” ಎಂದು ಪ್ರಶ್ನಾರ್ಥಕವಾಗಿ ಚಾವಡಿಯಲ್ಲಿ ನೆರೆದ ಯಜಮಾನರತ್ತ ದೃಷ್ಟಿ ಬೀರಿದ. ಒಡನೆಯೇ, ನಂಜೇಗೌಡ, “ಈ ಸಾಸ್ತಿಗಳೆ ಹುಚ್ಚೇ ಇಡೀದಿರಾದು- ಇದರಾಗೆ ಯಾವ ಸಂದೇಯವೂ